IPL 2023: KKR vs RCB Live Stream: ಇಂಡಿಯನ್ ಪ್ರೀಮಿಯರ್ ಲೀಗ್ ನ 36ನೇ ಪಂದ್ಯ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ಸೆಣಸಾಡಲಿವೆ.
ಈ ಐಪಿಎಲ್ 2023 ಆವೃತ್ತಿಯ 36ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಬೆಂಗಳೂರು ತಂಡಕ್ಕೆ ಈ ಪಂದ್ಯ ಸೇಡಿನ ಪಂದ್ಯವಾಗಲಿದ್ದು, ಈ ಆವೃತ್ತಿಯಲ್ಲಿ ಮೊದಲ ಬಾರಿ ಮುಖಾಮುಖಿ ಆಗಿದ್ದ ಪಂದ್ಯದಲ್ಲಿ ಬೆಂಗಳೂರು ಸೋತಿತ್ತು, ಇಂದು ಆಡಲಿರುವ ಪಂದ್ಯದಲ್ಲಿ ತಿರುಗೇಟು ನೀಡಲು ಕಾಯುತ್ತಿದೆ ಬೆಂಗಳೂರು ತಂಡ.
Indian Premier League 2023(IPL 2023), RCB vs KKR :
IPLನ 36 ನೇ ಪಂದ್ಯ ಇಂದು (ಏಪ್ರಿಲ್ 26) ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ಈ ಆವೃತ್ತಿಯಲ್ಲಿ ಎರಡನೇ ಬಾರಿ ಮುಖಾಮುಖಿಯಾಗಲಿವೆ. ಈ ಆವೃತ್ತಿಯ 9ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಬಾರಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಜೊತೆ ಕೋಲ್ಕತಾದ ಈಡನ್ ಗಾರ್ಡನ್ ಸ್ಟೇಡಿಯಂ ನಲ್ಲಿ ಎದುರಿಸಿತ್ತು ಮತ್ತು ಈ ಪಂದ್ಯದಲ್ಲಿ ಕೊಲ್ಕತ್ತಾ ತಂಡವು ಭರ್ಜರಿ 81 ರನ್ ಗಳ ಗೆಲುವು ಪಡೆದಿತ್ತು, ಆದರಿಂದ ಇವತ್ತು ನಡೆಯುವ ಪಂದ್ಯ ಬೆಂಗಳೂರಿಗೆ ಸೇಡಿನ ಪಂದ್ಯ ಎಣಿಸಿಕೊಳ್ಳಲಿದೆ, ಹಾಗಾಗಿ ಇವತ್ತಿನ ಪಂದ್ಯ ರೋಚಕತೆಯಿಂದ ಕೂಡಿರುತ್ತೆ ಎಂಬುದು ಕ್ರಿಕೆಟ್ ಅಭಿಮಾನಿಗಳ ಆಶಯ. ಇನ್ನು ಇವತ್ತಿನ ಪಂದ್ಯದಲ್ಲಿ ಆಡಬಹುದಾದ ಆಟಗಾರರ ಪಟ್ಟಿ ಮತ್ತು ನೇರಪ್ರಸಾರದ ಬಗ್ಗೆ ತಿಳಿಯೋಣ ಬನ್ನಿ.
ಅಂಕಪಟ್ಟಿಯಲ್ಲಿ ಮೇಲಕ್ಕೇರಲು ಎರಡು ತಂಡಗಳ ಸೆಣಸಾಟ :
RCB vs KKR: Indian Premier League 2023: ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದುವರೆಗೂ ಆಡಿದ 7 ಪಂದ್ಯದಲ್ಲಿ 4 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ, ಮತ್ತೊಂದು ಕಡೆ ಕೊಲ್ಕತ್ತಾ ತಂಡವು ಆಡಿರುವ 7 ಪಂದ್ಯದಲ್ಲಿ 2 ಪಂದ್ಯಗಳನ್ನು ಮಾತ್ರ ಗೆದ್ದಿದೆ. ಗೆದ್ದಿರುವ ಎರಡು ಪಂದ್ಯದಲ್ಲಿ ಬೆಂಗಳೂರಿನ ವಿರುದ್ದದ ಪಂದ್ಯದಲ್ಲಿ ಗೆದ್ದಿದೆ ಎಂಬುದು ಗಮನಾರ್ಹ. ಆರ್ಸಿಬಿ ತಮ್ಮ ಕೊನೆಯ ೨ ಪಂದ್ಯಗಳನ್ನು ಗೆದ್ದು ಮುನ್ನುಗ್ಗುತ್ತಿದೆ, ಆದರೆ ಕೊಲ್ಕತ್ತಾ ತಂಡ ಕಳೆದ ನಾಲ್ಕು ಪಂದ್ಯಗಳನ್ನು ಸೋಲುತ್ತಾ ಬಂದಿದೆ, ಹಾಗಾಗಿ ಅಂಕಪಟ್ಟಿಯಲ್ಲಿ ಮೇಲೇರಲು ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಪರಿಸ್ಥಿತಿ ಕೊಲ್ಕತ್ತಾ ತಂಡಕ್ಕೆ ಬಂದೊದಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಲ್ಲಿಯವರೆಗೂ ತಮ್ಮ ಬ್ಯಾಟಿಂಗ್ ಮತ್ತು ಬೌಲಿಂಗ್ ಅದ್ಭುತವಾಗಿ ಮಾಡುತ್ತಿದ್ದರೆ, ಮತ್ತೊಂದು ಕಡೆ ಮೊದಲ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಉತ್ತಮ ಬ್ಯಾಟಿಂಗ್ ಮಾಡಿದ್ದರು ಸಹ ಬೌಲಿಂಗ್ ನಲ್ಲಿ ಎಡುವುತ್ತಿದ್ದಾರೆ. ಬೆಂಗಳೂರು ತಂಡ 32 ನೇ ಪಂದ್ಯದಲ್ಲಿ ಬಲಿಷ್ಠ ರಾಜಸ್ಥಾನ್ ತಂಡವನ್ನು ಸೋಲಿಸಿತ್ತು, ಕೊಲ್ಕತ್ತಾ ತಂಡವು ಚೆನ್ನೈ ಮೇಲೆ ನಡೆದ ಪಂದ್ಯದಲ್ಲಿ ಸೋಲುಂಡಿತ್ತು. ಸಧ್ಯಕ್ಕೆ ಆರ್ಸಿಬಿ ಯಾ ಬ್ಯಾಟಿಂಗ್ ಬಲಿಷ್ಠವಾಗಿದೆ, ನಾಯಕ ವಿರಾಟ್ ಕೊಹ್ಲಿ, ಆರೆಂಜ್ ಕ್ಯಾಪ್ ಹೋಲ್ಡರ್ ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಭರ್ಜರಿಯಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆದರೆ ಮಾಧ್ಯಮ ಕ್ರಮಾಂಕದ ಆಟಗಾರ ಸಾದಾರಣ ಬ್ಯಾಟಿಂಗ್ ಬೆಂಗಳೂರಿಗೆ ತೊಂದರೆ ಎನಿಸಿಕೊಂಡಿದೆ. ಬೌಲಿಂಗ್ ಅದ್ಭುತ ಪ್ರದರ್ಶನ ಈ ಬಾರಿ ಮೊಹಮ್ಮದ್ ಸಿರಾಜ್ ನಿಂದ ಬಂದಿದೆ, ವನಿಂದು ಹಸರಂಗ, ಹರ್ಷಲ್ ಪಟೇಲ್, ವಿಜಯ್ ಕುಮಾರ್ ವೈಶಾಕ್ ಮತ್ತು ಡೇವಿಡ್ ವಿಲ್ಲಿ ಪ್ರಮುಖ ಬೌಲರ್ ಗಳು ಎನಿಸಿಕೊಂಡಿದ್ದಾರೆ. ಕೊಲ್ಕತ್ತಾ ತಂಡದಲ್ಲಿ ಸಹ ಉತ್ತಮ ಆಟಗಾರರಿದ್ದು, ಜಾಸನ್ ರಾಯ್, ವೆಂಕಟೇಶ್ ಐಯ್ಯರ್, ನಾಯಕ ನಿತೀಶ್ ರಾಣಾ, ರಿಂಕು ಸಿಂಗ್ ಮತ್ತು ಡ್ರೆ ರುಸ್ಸೆಲ್ ಪ್ರಮುಖ ಆಟಗಾರರೆನಿಸಿಕೊಂಡಿರುತ್ತಾರೆ. ಇನ್ನು ಬೌಲಿಂಗ್ ನಲ್ಲಿ ಉತ್ತಮ ಬೌಲರ್ ಗಳಿದ್ದರು ಸಹ ಪ್ರತಿ ಮ್ಯಾಚ್ನಲ್ಲೂ ಉತ್ತಮ ಪ್ರದರ್ಶನ ನೀಡಲು ಎಡವುತ್ತಿದ್ದಾರೆ. ಇಂದು ನಡೆಯುವ ಪಂದ್ಯದಲ್ಲಿ ಸುಯಶ್ ಶರ್ಮ, ಉಮೇಶ್ ಯಾದವ್, ನರೈನ್ ಮತ್ತು ಶ್ರಾಧುಲ್ ಥಾಕುರ್ ಒಳ್ಳೆಯ ಪ್ರದರ್ಶನ ನೀಡಲು ತಂಡ ಬಯಸುತ್ತದೆ. ಈ ಪಂದ್ಯದಲ್ಲಿ ಬೆಂಗಳೂರು ತಂಡಕ್ಕೆ ವಿರಾಟ್ ಕೊಹ್ಲಿ ತಂಡಕ್ಕೆ ನಾಯಕನಾಗಿ ಮುನ್ನಡೆಸುತ್ತಿದ್ದರೆ, ಕೊಲ್ಕತ್ತಾ ಪರ ನಿತೀಶ್ ರಾಣಾ ಅವರು ನಾಯಕರಾಗಿ ಕಣಕ್ಕಿಳಿಯಲಿದ್ದಾರೆ.
ಬೆಂಗಳೂರು ತಂಡಕ್ಕೆ ಮತ್ತಷ್ಟು ಬೌಲಿಂಗ್ ಬಲ ಸಿಗುವ ಸಾಧ್ಯತೆ!
ಹೌದು, ಇಂದು ನಡೆಯಲಿರುವ ಕೋಲ್ಕತಾದ ಪಂದ್ಯದಲ್ಲಿ ಜೋಷ್ ಹ್ಯಾಝೆಲ್ ವುಡ್ ಆಡುವ ಸಾಧ್ಯತೆ ಇದೆ, ಇನ್ನು ಸಿರಾಜ್ ಬೌಲಿಂಗ್ ನಲ್ಲಿ ಬೆಂಕಿ ಫಾರ್ಮ್ನಲ್ಲಿದ್ದಾರೆ, ಇವರ ಜೊತೆ ಡೇವಿಡ್ ವಿಲ್ಲಿ, ಹರ್ಷಲ್ ಪಟೇಲ್ ಮತ್ತು ವನಿಂದು ಹಸರಂಗ ಒಳ್ಳೆಯ ಬೌಲಿಂಗ್ ಮಾಡಲಿದ್ದಾರೆ, ಇದರ ಮೂಲಕ ಆರ್ಸಿಬಿ ಗೆ ಬೌಲಿಂಗ್ ಬಲ ಹೆಚ್ಚುತ್ತದೆ.
RCB vs KKR ಹೆಡ್ ಟು ಹೆಡ್ :
ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ಇದುವರೆಗೂ 31 ಪಂದ್ಯಗಳು ಮುಖಾಮುಖಿಯಾಗಿವೆ, ಇದರಲ್ಲಿ 14 ಬಾರಿ ಬೆಂಗಳೂರು ತಂಡ ಗೆದ್ದಿದ್ದರೆ, ಉಳಿದ 17 ಪಂದ್ಯದಲ್ಲಿ ಕೊಲ್ಕತ್ತಾ ತಂಡ ಗೆದ್ದಿದೆ, ಆದರೆ ಈ ಅಂಕಿ ಅಂಶದ ಪ್ರಕಾರ ಕೊಲ್ಕತ್ತಾ ಬೆಂಗಳೂರಿನ ವಿರುದ್ಧ ಭರ್ಜರಿ ಪ್ರದರ್ಶನ ನೀಡಿ ಗೆಲುವು ಸಾಧಿಸಿದ್ದರು ಸಹ, ಈ ವರ್ಷದ ಐಪಿಎಲ್ ನಲ್ಲಿ ಕೊಲ್ಕತ್ತಾ ಉತ್ತಮ ಪ್ರದರ್ಶನ ನೀಡಲು ವಿಫಲವಾಗುತ್ತಿದೆ, ಬೆಂಗಳೂರು ತಂಡ ಈ ಆವೃತ್ತಿಯಲ್ಲಿ ತಮ್ಮ ಗೆಲುವಿನ ನಾಗಾಲೋಟ ಮುಂದುವರೆಸುತ್ತಿದೆ, ಈ ಪಂದ್ಯವನ್ನು ಸಹ ಗೆದ್ದು ತಮ್ಮ ಸೇಡನ್ನು ತೀರಿಸಿಕೊಳ್ಳಲು ಕಾಯುತ್ತಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂದಲ್ಲಿ ಆಡಬಹುದಾದ 11 :
ವಿರಾಟ್ ಕೊಹ್ಲಿ(ನಾಯಕ), ಫಾಫ್ ಡು ಪ್ಲೇಸೆಸ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್ವೆಲ್, ಮೈಕಲ್ ಬ್ರೇಸ್ ವೆಲ್, ಸುಯಶ್ ಪ್ರುಭುದೇಸಾಯ್, ಮಹಿಪಾಲ್ ಲೋಮರೋರ್, ವನಿಂದು ಹಸರಂಗ, ಜೋಷ್ ಹ್ಯಾಝೆಲ್ವುಡ್, ಶಾಬಾಜ್ ಅಹ್ಮದ್, ಡೇವಿಡ್ ವಿಲ್ಲಿ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್.
ಬೆಂಗಳೂರು ತಂಡದ ಉಳಿದ ಆಟಗಾರರು :
ಅನುಜ್ ರಾವತ್, ಸೋನು ಯಾದವ್, ಸಿದ್ದಾರ್ಥ್ ಕೌಲ್, ಫಿನ್ ಅಲೆನ್, ಮನೋಜ್ ಭಾಂಡಗೆ, ರಾಜನ್ ಕುಮಾರ್, ಅವಿನಾಶ್ ಸಿಂಗ್, ಆಕಾಶ್ ದೀಪ್
ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಡುವ 11 :
ಎನ್ ಜಗದೀಶನ್(ವಿಕೆಟ್ ಕೀಪರ್), ಮಂದೀಪ್ ಸಿಂಗ್, ವೆಂಕಟೇಶ್ ಐಯ್ಯರ್, ನಿತೀಶ್ ರಾಣಾ(ನಾಯಕ), ಜೆಸನ್ ರಾಯ್, ಸುನಿಲ್ ನರೈನ್, ರಿಂಕು ಸಿಂಗ್, ಡ್ರೆ ರುಸ್ಸೆಲ್, ಶ್ರಾದುಲ್ ಥಾಕುರ್, ಡೇವಿಡ್ ವೀಸ್ , ಉಮೇಶ್ ಯಾದವ್, ವರುಣ್ ಚಕ್ರವರ್ತಿ ಮತ್ತು ಕುಲವಂತ್ ಖೇಜೆರೋಲಿಯ.
ಕೊಲ್ಕತ್ತಾ ತಂಡದ ಉಳಿದ ಆಟಗಾರರು :
ರಹಮಾನುಲ್ಲಾಹ್ ಗುರ್ಬಾಜ್, ಟಿಮ್ ಸೌಥೀ , ವೈಭವ್ ಅರೋರಾ, ಸುಯಶ್ ಶರ್ಮಾ, ಹರ್ಷಿತ್ ರಾಣಾ
RCB vs KKR ಪಂದ್ಯದ ನೇರಪ್ರಸಾರ ಎಲ್ಲಿ ಮತ್ತು ಹೇಗೆ ನೋಡುವುದು :
IPL 2023 36ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ಇಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಇಂದು ಸಂಜೆ 7.30 ಕ್ಕೆ ಪಂದ್ಯ ನಡೆಯಲಿದೆ, ಈ ಪಂದ್ಯದ ನೇರ ಪ್ರಸಾರ ಟಿವಿ ಯಲ್ಲಿ ಸ್ಟಾರ್ ಸ್ಪೋರ್ಟ್ಸ್ ನ ಹಲವು ಚಾನೆಲ್ ನಲ್ಲಿ ನೋಡಬಹುದು, ಈ ಪಂದ್ಯದ
ಲೈವ್ ಸ್ಟ್ರೀಮಿಂಗ್ ಅನ್ನು ಓಟಿಟಿ ಯಲ್ಲಿ ‘ಜಿಯೋ ಸಿನಿಮಾ’ ಅಪ್ಲಿಕೇಶನ್ ನಲ್ಲಿ 10 ಭಾಷೆಗಳಲ್ಲಿ ಉಚಿತವಾಗಿ ನೋಡಬಹುದಾಗಿದೆ.