CSK vs RR : IPL 2023ನ 17ನೇ ಪಂದ್ಯ ಇಂದು (ಏಪ್ರಿಲ್ 12) ಚೆನ್ನೈ ನ ಎಂ.ಎ ಚಿದಂಬರಂ ಸ್ಟೇಡಿಯಂ ನಲ್ಲಿ ಸಂಜೆ 7.30 ಕ್ಕೆ ನಡೆಯಲಿದೆ. ಈ ಎರಡು ತಂಡಗಳು ತುಂಬಾ ಬಲಿಷ್ಠವಾಗಿವೆ, ಇವತ್ತಿನ ಪಂದ್ಯ ಯಾರು ಗೆಲ್ಲಬಹುದು ಎಂದು ತಿಳಿಯೋಣ ಬನ್ನಿ.
CSK vs RR today match prediction: IPL 2023 – ಇವತ್ತಿನ ಪಂದ್ಯ ಯಾರು ಗೆಲ್ಲಲಿದ್ದಾರೆ:
ಐಪಿಎಲ್ ೨೦೨೩ ರಲ್ಲಿ ಇಲ್ಲಿಯವರೆಗೂ ರಾಜಸ್ತಾನ್ ರಾಯಲ್ಸ್ ತಂಡ ಆಡಿರುವ 3 ಪಂದ್ಯದಲ್ಲಿ 2 ನ್ನು ಗೆದ್ದು 2ನೇ ಸ್ಥಾನದಲ್ಲಿ ಕುಳಿತಿದೆ. ಹಾಗೆ ಚೆನ್ನೈ ಸೂಪರ್ ಕಿಂಗ್ಸ್ ಸಹ ಆಡಿರುವ 3 ಪಂದ್ಯದಲ್ಲಿ 2 ನ್ನು ಗೆದ್ದು 5ನೇ ಸ್ಥಾನದಲ್ಲಿದೆ, ರನ್ ರೇಟ್ ನ ಸರಾಸರಿ ಗೆಲುವಿನಿಂದ ತಂಡಗಳ ಸ್ಥಾನವನ್ನುಕೊಡಲಾಗಿದೆ, ಆದರೆ ಎರಡು ತಂಡಗಳು ಟೂರ್ನಿಯಲ್ಲಿ ಸರಿಸಮನಾಗಿ ಅಡಿವೆ. ಹಾಗಾಗಿ ಇವತ್ತಿನ ಪಂದ್ಯ ಯಾರು ಗೆಲ್ಲಬಹುದೆಂಬ ಕುತೂಹಲ ಮೂಡಿದೆ.
ಐಪಿಎಲ್ ನಲ್ಲಿ CSK vs RR ಮುಖಾಮುಖಿ, ಯಾರಿಗೆ ಹೆಚ್ಚು ಗೆಲುವು?
ಇಲ್ಲಿಯವರೆಗಿನ ಐಪಿಎಲ್ ಚೆನ್ನೈ ಮತ್ತು ರಾಜಸ್ಥಾನ ತಂಡಗಳು 27 ಬಾರಿ ಅಡಿವೆ ಅದರಲ್ಲಿ ಬರೋಬ್ಬರಿ 15 ಬಾರಿ ಚೆನ್ನೈ ತಂಡ ಗೆದ್ದಿದಾರೆ, 12 ಪಂದ್ಯಗಳಲ್ಲಿ ರಾಜಸ್ಥಾನ ತಂಡ ಗೆದ್ದಿದೆ. ಕಡೆಯದಾಗಿ ಹೋದ ವರ್ಷ ಐಪಿಎಲ್ ೨೦೨೨ ರಲ್ಲಿ ರಾಜಸ್ಥಾನ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿ ಆಗಿದ್ದು ೨೦ ಮೇ ೨೦೨೨ ಮುಂಬೈನಲ್ಲಿ, ಈ ಪಂದ್ಯದಲ್ಲಿ ಚೆನ್ನೈನ ಸಾಧಾರಣ 109 ರನ್ ಗಳ ಗುರಿ ಬೆನ್ನಟ್ಟಿದೆ ರಾಜಸ್ಥಾನ ಕೇವಲ 14.2 ಓವರ್ ನಲ್ಲಿ ಅಂದರೆ ಇನ್ನು5.4 ಓವರ್ ಗಳ ಆಟ ಬಾಕಿ ಇರುವ ಮುಂಚೆ ೫ ವಿಕೆಟ್ಗಳ ಅಂತರದಲ್ಲಿ ರಾಜಸ್ಥಾನ ತಂಡ ಗೆದ್ದಿತ್ತು.
ಇವತ್ತಿನ ಪಂದ್ಯದ ಪಿಚ್ ರಿಪೋರ್ಟ್ :
ಇವತ್ತಿನ್ಡ್ ಪಂದ್ಯ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ , ಇಲ್ಲಿ ಬೌಲಿಂಗ್ ಮಾಡುವವರಿಗೆ ಹೆಚ್ಚಿನ ಲಾಭ ಪಡೆಯಲಿದ್ದಾರೆ, ಸ್ಪಿನ್ನರ್ ಬೌಲಿಂಗ್ ಗೆ ಒಳ್ಳೆಯ ಪಿಚ್ ಇದಾಗಲಿದೆ, ಆರಂಭದಲ್ಲಿ ಟಾಸ್ ಗೆದ್ದವರು ಬೌಲಿಂಗ್ ಮಾಡುವ ಸಾಧ್ಯತೆ ಹೆಚ್ಚು. ಮೊದಲು ಬೌಲಿಂಗ್ ಮಾಡುವ ತಂಡ, ತಮ್ಮ ಸ್ಪಿನ್ನರ್ ಗಳನ್ನು ಇಳಿಸಿ ಆರಂಭದಲ್ಲಿ ವಿಕೆಟ್ ಕಬಳಿಸಿ, ವಿರುದ್ಧ ತಂಡದ ಮೊತ್ತವನ್ನು150-170ಕ್ಕೆ ಕಟ್ಟಿಹಾಕಿದರೆ ಗೆಲುವು ಕಾಣುವ ಸಧ್ಯ ಈ ಪಿಚ್ನಲ್ಲಿ ಹೆಚ್ಚಿದೆ.
ಚೆನ್ನೈ ನ ಹವಾಮಾನ ಹೇಗಿರಲಿದೆ ?
ಚೆನ್ನೈನಲ್ಲಿ ಬೇಸಿಗೆಯ ಬಿಸಿಲಿರುವ ಕಾರಣ, ಪಂದ್ಯಕ್ಕೆ ಮಳೆ ಬರುವ ಚಾನ್ಸ್ ಇಲ್ಲ, ಆದರೆ ಆಟಗಾರರು ಮೈದಾನದಲ್ಲಿ ಹೆಚ್ಚು ಶ್ರಮ ಪಡಲಿದ್ದಾರೆ, ಏಕೆಂದರೆ ಬಿಸಿಲು ಕನಿಷ್ಠ 26 ರಿಂದ ಗರಿಷ್ಠ 35 ಡಿಗ್ರಿ ಸೆಲ್ಸಿಯಸ್ ಇದೆ. ಮೋಡಗಳು ಮುಚ್ಚಿಕೊಳ್ಳುವ ಸಾಧ್ಯತೆ ಕಡಿಮೆ ಇದೆ.
ಮತ್ತಷ್ಟು ಓದಿ – Read more here : https://iplgang.com/ipl-2023-rcb-vs-lsg-thirller-match/
ಐಪಿಎಲ್ ೨೦೨೩ ೧೭ನೇ ಪಂದ್ಯ ಯಾರು ಗೆಲ್ಲಬಹುದು?
ಇವತ್ತಿನ ಪಂದ್ಯದ ಚೆನ್ನೈ ತಂಡವನ್ನು ನಾಯಕ ಎಂ ಎಸ್ ಧೋನಿ ಮತ್ತು ರಾಜಸ್ಥಾನ ರಾಯಲ್ಸ್ ತಂಡವನ್ನು ನಾಯಕ ಸಂಜು ಸ್ಯಾಮ್ಸನ್ ಮುನ್ನಡೆಸಲಿದ್ದಾರೆ.
ಈ ಪಂದ್ಯ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ಆಡುವುದರಿಂದ, ಇದು ಚೆನ್ನೈ ತಂಡದ ತವರು, ಹಾಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಆದರೂ ರಾಜಸ್ಥಾನ ರಾಯಲ್ಸ್ ತಂಡ ಹೀಗಿರುವ ಫಾರ್ಮ್ ಮುಂದುವರಿಸಿದರೆ ಚೆನ್ನೈ ತಂಡಕ್ಕೆ ಮುಳುವಾಗಬಹುದು.
ಚೆನ್ನೈ ತಂಡಕ್ಕೆ ಆಡಬಹುದಾದ 11 :
ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ರುತುರಾಜ್ ಗೈಕ್ವಾಡ್, ದ್ವೈನ್ ಪ್ರೆಟೋರಿಯೂಸ್, ಮಿಚೆಲ್ ಸ್ಯಾಂಟನರ್, ಮೊಯಿನ್ ಅಲಿ, ರವೀಂದ್ರ ಜಡೇಜಾ, ಶಿವಂ ದುಬೆ, ಡೆವನ್ ಕಾನ್ವೆ, ಎಂ ಎಸ್ ಧೋನಿ, ದೀಪಕ್ ಚಾಹರ್, ಮಹೀಶ ತೀಕ್ಷಣ, ಸೀಸಂದ ಮಗಳ, ತುಷಾರ್ ದೇಶಪಾಂಡೆ.
ರಾಜಸ್ಥಾನ್ ತಂಡಕ್ಕೆ ಆಡಬಹುದಾದ 11 :
ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (WK/C), ದೇವದತ್ ಪಡಿಕ್ಕಲ್, ರಿಯಾನ್ ಪರಾಗ್, ಶಿಮ್ರಾನ್ ಹೆಮ್ಮೆಯರ್, ರವಿಚಂದ್ರನ್ ಅಶ್ವಿನ್, ಧ್ರುವ್ ಜುರೇಲ್, ಯುಜೇಂದ್ರ ಚಹಾಲ್, ಜೆಸನ್ ಹೋಲ್ಕರ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮ, ಮುರುಗನ್ ಅಶ್ವಿನ್.
CSK vs RR ಹೇಗೆ ನೋಡಬಹುದು?
ಐಪಿಎಲ್ ೨೦೨೩ ರ ಇವತ್ತಿನ ಪಂದ್ಯ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ಸಂಜೆ 7.30 ಕ್ಕೆ ನೇರಪ್ರಸಾರವಾಗಲಿದೆ. ಈ ನೇರಪ್ರಸಾರ ಟಿವಿ ಯಲ್ಲಿ ಸ್ಟಾರ್ ಸ್ಪೋರ್ಟ್ಸ್ ನ ವಿವಿಧ ಚಾನೆಲ್ ನಲ್ಲಿ ನೋಡಬಹುದು, ಹಾಗೆ ಉಚಿತವಾಗಿ ೧೦ ಭಾಷೆಯಲ್ಲಿ ನೋಡಬಹುದು, ಹೇಗೆ ಎಂದರೆ ಜಿಯೋ ಸಿನಿಮಾ ಆಪ್ ನಲ್ಲಿ ನೋಡಬಹುದಾಗಿದೆ.