IPL 2023 Gujrat Titans vs Kolkata Knight Riders, Final Over Thrill.
ಏಪ್ರಿಲ್ 9 2023 : GT vs KKR :ನೆನ್ನೆ ನಡೆದ ಐಪಿಎಲ್ ಗುಜರಾತ್ ಟೈಟಾನ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆದ ರೋಚಕ ಪಂದ್ಯದಲ್ಲಿ ಕೊಲ್ಕತ್ತಾ ತಂಡ ಗುಜರಾತ್ ತಂಡವನ್ನು ಮಣಿಸಿದೆ. ಕೊನೆಯ ಓವರ್ ತನಕ ನಡೆದ ರೋಚಕ ಪಂದ್ಯದಲ್ಲಿ KKR ತಂಡದ ರಿಂಕು ಸಿಂಗ್ ರ ಅಮೋಘ ಆಟದಿಂದ ಸೋಲುವ ಕ್ಷಣದಲ್ಲಿದ್ದ ಕೋಲ್ಕತಾಗೆ ಜಯ ತಂದುಕೊಟ್ಟಿದ್ದಾರೆ.
ಐಪಿಎಲ್ ೨೦೨೩ರ ೧೩ನೆ ಪಂದ್ಯ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆಯಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಇಳಿದ ಗುಜರಾತ್ ಟೈಟಾನ್ಸ್ ತಂಡ ಉತ್ತಮ ಮೊತ್ತ ಕಲೆ ಹಾಕುವಲ್ಲಿ ಯಶಸ್ವಿಯಾಯಿತು, ಅನಾರೋಗ್ಯದ ಕಾರಣ ಹಾರ್ದಿಕ್ ಪಾಂಡ್ಯಬದಲಿಗೆ ರಶೀದ್ ಖಾನ್ ರವರು ನಾಯಕನಾಗಿ ಈ ಪಂದ್ಯವನ್ನು ಮುನ್ನಡಿಸಿದರು. ಗುಜರಾತ್ ಟೈಟಾನ್ಸ್ ತಂಡದ ಆಟಗಾರರಿಂದ ಉತ್ತಮ ಆರಂಭ ಪಡೆಯಿತು, ಮೊದಲ ಪವರ್ ಪ್ಲೇ ನಲ್ಲಿ 1 ವಿಕೆಟ್ ಕಳೆದು ಕೊಂಡು 6 ಓವರ್ನಲ್ಲಿ 54 ರನ್ ಗಳಿಸಿತ್ತು. ಬ್ಯಾಟಿಂಗ್ ನಲ್ಲಿ ಮಿಚಿದಾದ ಗುಜರಾತ್ ಆಟಗಾರರು ಶುಭ್ಮಂ ಗಿಲ್ ರನ್ ಗಳಿಸಿ ಔಟ್ ಆದರೆ, ಸಾಯಿ ಸುಧರ್ಶನ್ 38 ಬಾಲ್ಸ್ ನಲ್ಲಿ 53 ರನ್ ಗಳಿಸಿದರು, ನಂತರ ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ವಿಜಯ್ ಶಂಕರ್ ಭರ್ಜರಿ ಆಟ ಆಡಿ ಕೇವಲ 24 ಬಾಲ್ಸ್ ನಲ್ಲಿ 63 ರನ್ ಚಚ್ಚಿದರು, ಇದರಲ್ಲಿ ೪ ಬೌಂಡರಿ ಜೊತೆ ೫ ಸಿಕ್ಸ್ ಒಳಗೊಂಡಿತ್ತು. ಕೊಲ್ಕತ್ತಾ ತಂಡದ ಪರ ಆಡಿದ ಬೌಲರ್ಸ್ಗಳಲ್ಲಿ ಸುನಿಲ್ ನರೈನ್ 3 ವಿಕೆಟ್ ಕಬಳಿಸಿದರು, ಸುಯಶ್ ಶರ್ಮ 1ವಿಕೆಟ್ ಗಳಿಸಿದರು. ಉಳಿದಂತೆ ಬೇರೆ ಆಟಗಾರರು ವಿರುದ್ಧ ತಂಡದ ವಿಕೆಟ್ ಗಳಿಸಲು ವಿಫಲರಾದರು. ಇದರಿಂದ ಗುಜರಾತ್ ತಂಡ 4 ವಿಕೆಟ್ ಕಳೆದುಕೊಂಡು 204 ರನ್ ಗಳಿಸಿತು
IPL 2023 : ಗುಜರಾತ್ ಬ್ಯಾಟಿಂಗ್ ಗೆ ಪ್ರತಿಯುತ್ತರ ಕೊಟ್ಟ ಕೊಲ್ಕತ್ತಾ ತಂಡ, ಊಹಿಸದ ಗೆಲುವು :
ಕೊಲ್ಕತ್ತಾ ತಂಡದ ಸಾಧಾರಣ ಬೌಲಿಂಗ್ ನ ಕಾರಣದಿಂದ ಗುಜರಾತ್ ತಂಡ ಉತ್ತಮ ಬ್ಯಾಟಿಂಗ್ ಮಾಡಿ ಒಳ್ಳೆಯ ಮೊತ್ತ ಕಲೆ ಹಾಕುವಲ್ಲಿ ಯಶಸ್ವಿಯಾಯಿತು. ನಂತರ ಬ್ಯಾಟಿಂಗ್ ಗೆ ಇಳಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಪವರ್ ಪ್ಲೇನಲ್ಲಿ ಎರಡು ವಿಕೆಟ್ ಕಳೆದು ಕೊಂಡು ಆಘಾತ ಅನುಭವಿಸಿತು. ನಂತರ ಬ್ಯಾಟಿಂಗ್ ಮಾಡಲು ಬಂದ ವೆಂಕಟೇಶ್ ಅಯ್ಯರ್ ಅವರ ಭರ್ಜರಿ ಆಟ ಕೊಲ್ಕತ್ತಾ ಗೆಲುವಿಗೆ ಪಾತ್ರವಹಿಸಿದರು, 40 ಬಾಲ್ಸ್ ಗಳಲ್ಲಿ83 ರನ್ ಗಳಿಸಿದರು, ಇದರಲ್ಲಿ 8 ಫೋರ್ ಗಳಿದ್ದರೆ 5 ಸಿಕ್ಸ್ ಒಳಗೊಂಡಿತ್ತು. ಆದರೆ ಅಲ್ಜರ್ರಿ ಜೋಸೆಫ್ ನ ಬಾಲ್ನಲ್ಲಿ ಗಿಲ್ ಗೆ ಕ್ಯಾಚ್ ಕೊಟ್ಟು ಔಟ್ ಆದರು. ನಂತರ ಬಂದ ಕೊಲ್ಕತ್ತಾ ತಂಡದ ನಾಯಕ ನಿತೀಶ್ ರಾಣಾ ಸಮೊಯೋಚಿತ ಆಟದಿಂದ ಪಂದ್ಯಗೆಲ್ಲುವ ಭರವಸೆ ಮೂಡಿಸಿದರು, ಆದರೆ ಅವರು ಸಹ ಅಲ್ಜರ್ರಿ ಜೋಸೆಫ್ ಗೆ ಔಟ್ ಆದರು. ನಂತರ ಬಂದ ಬ್ಯಾಟ್ಸ್ ಮ್ಯಾನ್ ಗಳು ರಶೀದ್ ಖಾನ್ ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಆದರೆ ಕೊನೆಯವರೆಗೂ ಆಟ ಮುಂದುವರಿಸಿದ ರಿಂಕು ಸಿಂಗ್ ತಮ್ಮ ಭರ್ಜರಿ ಆಶ್ಚರ್ಯಚಕಿತ ಆಟದಿಂದ ಕೊಲ್ಕತ್ತಾ ತಂಡ 207 ರನ್ ಗಳಿಸಿ 3 ವಿಕೆಟ್ಗಳ ಅಮೋಘ, ಊಹಿಸಲಾಗದ ಗೆಲುವು ಪಡಿಯಿತು.
ರಶೀದ್ ಖಾನ್ ಹ್ಯಾಟ್ರಿಕ್! ಪ್ರಮುಖ ಆಟಗಾರರು ಪೆವಿಲಿಯನ್ ಕಡೆಗೆ!
ಐಪಿಎಲ್ ಸೀಸನ್ ಗಳಲ್ಲಿ ಕೆಲವೊಂದು ರೋಚಕ, ಆಶ್ಚರ್ಯಕರ ರೀತಿ ಗೆಲುವು ಪಡಿದಿರುವುದನ್ನು ನೋಡಿದ್ದೇವೆ ಮತ್ತು ತಮ್ಮ ತಂಡಕ್ಕೆ ಹೀರೋ ಆಗಿರುವುದ್ದನ್ನು ನೋಡಿದ್ದೇವೆ, ಅದೇ ರೀತಿ ಈ ಐಪಿಎಲ್ 2023 ರ ನೆನ್ನೆ ನಡೆದ(09 ಏಪ್ರಿಲ್ 2023) ಈ ಗುಜರಾತ್ ಮತ್ತು ಕೊಲ್ಕತ್ತಾ ಪಂದ್ಯದಲ್ಲಿ ನಡೆಯಿತು, ಗುಜರಾತ್ ತಂಡ ನೀಡಿದ ಮೊತ್ತ ಕಲೆ ಹಾಕಲು ಇಳಿದ ಕೊಲ್ಕತ್ತಾ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದರು, ಗೆಲುವಿಗೆ ಸಮೀಪಿಸುತ್ತಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 17 ನೇ ಓವರ್ ಮಾಡಲು ಬಂದ ಗುಜರಾತ್ ತಂಡದ ನಾಯಕ ರಶೀದ್ ಖಾನ್ ದೊಡ್ಡ ಶಾಕ್ ನೀಡಿದರು, ಈ ಓವರ್ನಲ್ಲಿ ಐಪಿಎಲ್ ೨೦೨೩ ರ ಮೊದಲ ಹ್ಯಾಟ್ರಿಕ್ ವಿಕೆಟ್ ಪಡೆದರು, ಕೊಲ್ಕತ್ತಾದ ದೈತ್ಯ ಆಟಗಾರ ಡ್ರೆ ರಸೆಲ್, ಸುನಿಲ್ ನರೈನ್, ಮತ್ತು ಬೆಂಗಳೂರು ವಿರುದ್ದದ ಪಂದ್ಯದಲ್ಲಿ ಗೆಲುವಿಗೆ ಕಾರಣವಾದ ಶ್ರಾದುಲ್ ಥಾಕುರ್, ಈ ಮೂವರು ಶೂನ್ಯಕ್ಕೆ ಔಟಾದರು. ಇದರೊಂದಿಗೆ ಗುಜರಾತ್ ತಂಡ ಗೆದ್ದೇ ಗೆಲ್ಲುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದರು.
ಕೊನೆ ಓವರ್ ಥ್ರಿಲ್, ರಿಂಕು ಸಿಂಗ್(Rifku singh) ಆದ ಹೀರೋ! 5 ಬಾಲ್ 5 ಸಿಕ್ಸ್, KKR ಗೆ ಅಚ್ಚರಿ ಗೆಲುವು!
ಒಂದು ಕಡೆ ರಾಶಿದ್ ಖಾನ್ ಹ್ಯಾಟ್ರಿಕ್ ವಿಕೆಟ್ ಪಡೆದು ಗುಜರಾತ್ ತಂಡ ಗೆಲುವಿನ ಕಡೆ ಮುನ್ನುಗ್ಗುತ್ತಿದ್ದರೆ, ಮತ್ತೊಂದು ಕಡೆ ಸಮಯೋಚಿತ ಆಟವಾಡುತ್ತ, ಯಾರು ಊಹಿಸದ ರೀತಿ ಗುಜರಾತ್ ಗೆ ಗೆ ಸೋಲುಣಿಸಿದ ರಿಂಕು ಸಿಂಗ್, ಕಡೆಯ 3 ಓವರ್ ಗಳಲ್ಲಿ ಕೊಲ್ಕತ್ತಾ ಗೆಲ್ಲಲು 48 ರನ್ ಗಳು ಬೇಕಿರುತ್ತದೆ, ಆದರು ಛಲ ಬಿಡದೆ ರಿಂಕು ಸಿಂಗ್ ಆಟ ಮುಂದುವರಿಸುತ್ತಾರೆ. ಕಡೆಯ ಓವರ್ ನಲ್ಲಿ 29 ರನ್ಸ್ ಗಳು ಬೇಕಿರುತ್ತದೆ, ಗುಜರಾತ್ ತಂಡದ ಪರ ಯಶ್ ದಯಾಳ್ ಅವರು ಕೊನೆ ೨೦ನೇ ಓವರ್ ಬೌಲಿಂಗ್ ಮಾಡಲು ಬರುತ್ತಾರೆ, 20ನೇ ಓವರ್ ನ ಮೊದಲ ಬಾಲ್ನಲ್ಲಿ ಉಮೇಶ್ ಯಾದವ್ 1 ರನ್ ಗಳಿಸಿ ರಿಂಕು ಸಿಂಗ್ ಗೆ ಬ್ಯಾಟಿಂಗ್ ಕೊಡುತ್ತಾರೆ, ನಂತರ ನಡಿದಿದ್ದೆ ಪವಾಡ. ಗೆಲುವಿಗೆ 5 ಬಾಲ್ನಲ್ಲಿ 28 ರನ್ ಬೇಕಿರುತ್ತದೆ, ರಿಂಕು ಸಿಂಗ್ ಅವರು ಉಳಿದಿರುವ 5 ಬಾಲ್ ಗಳಲ್ಲಿ ಯಾರು ಊಹಿಸದ ರೀತಿ 5 ಸಿಕ್ಸರ್ ಗಳನ್ನೂ ಬಾರಿಸಿ ಕೋಲ್ಕತಾಗೆ ಥ್ರಿಲ್ಲಿಂಗ್ ಗೆಲುವನ್ನು ತಂದು ಕೊಡುತ್ತಾರೆ, ಗುಜರಾತ್ ತಂಡಕ್ಕೆ ನುಂಗಲಾಗದ ಸೋಲಾಗಿ ಪರಿಣಮಿಸುತ್ತದೆ. ಒಂದು ಸಮಯದಲ್ಲಿ ಗುಜರಾತ್ ತಂಡವೇ ಗೆಲುವು ಪಡೆಯುತ್ತೆ ಎಂದು ಊಹಿಸುತ್ತಿದ್ದ ಪ್ರೇಕ್ಷಕರಿಗೆ, ದೊಡ್ಡ ಶಾಕ್ ನೀಡಿತ್ತು, ಕೊಲ್ಕತ್ತಾ ತಂಡದ ಕ್ರಿಕೆಟ್ ಪ್ರೇಮಿಗಳಿಗೆ ಈ ಗೆಲುವು ದೊಡ್ಡಖುಷಿಯನ್ನು ನೀಡಿತು.
ಪಾಯಿಂಟ್ಸ್ ಟೇಬಲ್ ನಲ್ಲಿ ಕೊಲ್ಕತ್ತಾ ಮೇಲಕ್ಕೆ :
ಈ ಪಂದ್ಯಕ್ಕೂ ಮೊದಲು ಐಪಿಎಲ್ ೨೦೨೩ರ ಅಂಕ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದ ಕೊಲ್ಕತ್ತಾ ನೈಟ್ ರೈಡರ್ಸ್, ಈ ಗೆಲುವಿನ ನಂತರ 2 ನೇ ಸ್ಥಾನಕ್ಕೆ ಜಿಗಿದಿದೆ. ಮೂರನೇ ಸ್ಥಾನದಲ್ಲಿದ್ದ ಗುಜರಾತ್ ಟೈಟಾನ್ಸ್ ತಂಡ 4 ನೇ ಸ್ಥಾನಕ್ಕೆ ಕುಸಿದಿದೆ.
ಕೊಲ್ಕತ್ತಾ ನೈಟ್ ರೈಡರ್ಸ್ ತಮ್ಮ ಮುಂದಿನ ಪಂದ್ಯ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ. ಗುಜರಾತ್ ಟೈಟಾನ್ಸ್ ಮುಂದಿನ ಪಂದ್ಯ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣೆಸಾಡಲಿದೆ.
IPL 2023 today match : ಇಂದು 10 April 2023, (RCB vs LSG) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲಕ್ನೋ ಸೂಪರ್ ಜಯಂಟ್ಸ್ ವಿರುದ್ಧ ಆಡಲಿದೆ. ಈ ಮ್ಯಾಚ್ ಸಂಜೆ 7.30ಕ್ಕೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ.
ಇದರ ನೇರಪ್ರಸಾರ ಸ್ಟಾರ್ ಸ್ಪೋರ್ಟ್ಸ್ ಹಲವು ಚಾನೆಲ್ ಗಳಲ್ಲಿ ನೋಡಬಹುದು, ಮತ್ತು ಜಿಯೋ ಸಿನಿಮಾ ಆಪ್ ನಲ್ಲಿ ಉಚಿತವಾಗಿ ೧೦ ಭಾಷೆಗಳಲ್ಲಿ ವೀಕ್ಷಿಸಬಹುದು.