ಏಪ್ರಿಲ್ ೧೩ ನೇ ತಾರೀಕು ನೆನ್ನೆ ನಡೆದ (IPL 2023) ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಪಂಜಾಬ್ ಕಿಂಗ್ಸ್ ತಂಡವನ್ನು ಕಡೆಯ ಓವರ್ ತನಕ ನಡೆದ ಪಂದ್ಯದಲ್ಲಿ ಪಂಜಾಬ್ ತಂಡವನ್ನು 6 ವಿಕೆಟ್ ಗಳ ಅಂತರದಿಂದ ಸೋಲಿಸಿದೆ.
PBKS vs GT – IPL 2023 :
ಈ ವರ್ಷದ ಐಪಿಎಲ್ 18ನೇ ಪಂದ್ಯ ಪಂಜಾಬ್ ತಂಡ ಮತ್ತು ಗುಜರಾತ್ ತಂಡಗಳ ನಡುವೆ ಮೋಹಲಿಯಲ್ಲಿರುವ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐ ಸ್ ಬಿಂದ್ರಾ ಸ್ಟೇಡಿಯಂನಲ್ಲಿ ನೆನ್ನೆ ನಡಿಯಿತು. ಈ ಪಂದ್ಯ ಕೊನೆಯವರೆಗೂ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಮೂಡಿಸಿತ್ತು, ಆದರೂ ಗುಜರಾತ್ ತಂಡದ ಸಮಯೋಚಿತ ಆಟದಿಂದ ಈ ಟೂರ್ನಿಯಾ ಮೂರನೇ ಗೆಲುವು ಪಡೆಯಿತು. ಗುಜರಾತ್ ತಂಡಕ್ಕೆ ಹಾರ್ದಿಕ್ ಪಾಂಡ್ಯರವರು ನಾಯಕರಾಗಿ ಮರಳಿದರು, ಶಿಖರ್ ಧವನ್ ಪಂಜಾಬ್ ತಂಡಕ್ಕೆ ನಾಯಕತ್ವ ವಹಿಸಿದರು.
ಗುಜರಾತ್ ನ ಬೌಲಿಂಗ್ ದಾಳಿಗೆ ರನ್ ಗಳಿಸಲು ಪರದಾಡಿದ ಪಂಜಾಬ್ ಬ್ಯಾಟ್ಸಮನ್ ಗಳು!
ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿದ ಗುಜರಾತ್ ಟೈಟಾನ್ಸ್ ತಂಡ, ತನ್ನ ಪವರ್ ಪ್ಲೇ ಆಟದಲ್ಲೇ ಪಂಜಾಬ್ ತಂಡದ 2 ವಿಕೆಟ್ ಕಿತ್ತು ಶಾಕ್ ನೀಡಿತ್ತು. ಶಮಿ ಅವರು ಬೌಲಿಂಗ್ ಮಾಡಿದ ಮೊದಲ ಓವರ್ನಲ್ಲೇ ಪ್ರಭ್ಸಿಮ್ರನ್ ಅವರು ರಶೀದ್ ಖಾನ್ ಗೆ ಕ್ಯಾಚ್ ನೀಡಿ ಔಟಾದರು. ಮುಂದಿನ ೨ ಓವರ್ನಲ್ಲಿ ನಾಯಕ ಶಿಖರ್ ಧವನ್ ರವರು ಜೋಶುವಾ ಲಿಟಲ್ ಬೌಲಿಂಗ್ ನಲ್ಲಿ ಅಲ್ಜಾರಿ ಜೋಸೆಫ್ ಗೆ ಕ್ಯಾಚ್ ನೀಡಿ ಔಟಾದರು. ಇದರಿಂದ ಪಂಜಾಬ್ ತಂಡ ರನ್ ಗಳಿಸುವ ವೇಗದ ಗತಿ ಕಡಿಮೆಯಾಯಿತು. ನಂತರ ಬಂದ ಮ್ಯಾಥ್ಯೂ ಶಾರ್ಟ್ ಉತ್ತಮ ರನ್ ಕೊಡುಗೆ ನೀಡಿದರು, ಆಡಿದ 24 ಬಾಲ್ಸ್ ಗಳಲ್ಲಿ36 ರನ್ ಗಳಿಸಿ ರಶೀದ್ ಖಾನ್ ಗೆ ಔಟಾದರು. ಇದರಲ್ಲಿ 6 ಬೌಂಡರಿ ಸಹಿತ ೧ ಸಿಕ್ಸ್ ಬಾರಿಸಿದ್ದರು.
ತದನಂತರ ಬಂದಂತಹ ಜಿತೇಶ್ ಶರ್ಮ ಮತ್ತು ಸ್ಯಾಮ್ ಕರಣ್ ನಿದಾನ ಗತಿಯ ಬ್ಯಾಟಿಂಗ್ ಮಾಡಿದರು ಸಹ ತಂಡಕ್ಕೆ ಅತ್ಯಮೂಲ್ಯ ರನ್ ಸೇರಿಸಿದರು. ಈ ವರ್ಷದ ಟೂರ್ನಿಯಲ್ಲಿ ಮೊದಲ ಬಾರಿ ಬೌಲಿಂಗ್ ಮಾಡಲು ಬಂದ ಮೋಹಿತ್ ಶ್ರಮ ಜಿತೇಶ್ ಮಾತು ಸ್ಯಾಮ್ ಅವರ 2 ವಿಕೆಟ್ ಗಳನ್ನು ತೆಗೆದು ಗುಜರಾತ್ ತಂಡಕಕ್ಕೆ ಯಶಸ್ವಿ ಬೌಲರ್ ಆಗಿ ಗುರುತಿಸಿಕೊಂಡರು. ಶಮಿ, ಜೋಶುವಾ, ಅಲ್ಜಾರಿ ಮತ್ತು ರಶೀದ್ ರವರು ತಲಾ೧ ವಿಕೆಟ್ ಪಡೆದರು. ಪಂಜಾಬ್ ಪರ ಆಡಿದ ಯಾರೊಬ್ಬ ಆಟಗಾರರು ಅರ್ಧ ಶತಕ ಗಳಿಸಲು ವಿಫಲರಾದರು.
ಪಂಜಾಬ್ 150 ದಾಟಲು ಕಾರಣವಾಯಿತು ಶಾರುಖ್ ಖಾನ್ ಆಟ!
ಒಂದು ಕಡೆ ವಿಕೆಟ್ ಕಳೆದುಕೊಂಡು ಪಂಜಾಬ್ ತಂಡ ಸಂಕಷ್ಟಕ್ಕೆ ಸಿಲುಕಿತ್ತು, ಆಗ ಬಂದ ಶಾರುಖ್ ಖಾನ್ ತಂಡದ ರನ್ ವೇಗ ಹೆಚ್ಚು ಮಾಡಿದರು, ಭರ್ಜರಿ ಆಟ ಪ್ರದರ್ಶಿಸಿದ ಶಾರುಖ್ ಕೇವಲ 9 ಬಾಲ್ನಲ್ಲಿ 2 ಸಿಕ್ಸ್ ಸಮೇತ 1 ಬೌಂಡರಿ ಬಾರಿಸಿದರು. ಒಂದು ಕಾಲ ಘಟ್ಟದಲ್ಲಿ 150 ಅಂಕಿ ದಾಟಲು ಸಂಶಯವಿದ್ದ ಪಂಜಾಬ್ ತಂಡಕ್ಕೆ ಆಸರೆಯಾಗಿ ಶಾರುಖ್ ಖಾನ್ ತಂಡದ ಮೊತ್ತ 150 ದಾಟಲು ಸಹಾಯ ಮಾಡಿದರು. ಆದರೆ ಕಡೆಯ ಓವರ್ನಲ್ಲಿ ರನ್ ಆಟದರು. ಕೊನೆಗೆ ಪಂಜಾಬ್ ತಂಡ 8 ವಿಕೆಟ್ ಕಳೆದುಕೊಂಡು 153 ರನ್ ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಗುಜರಾತ್ ಭರ್ಜರಿ ಓಪನಿಂಗ್! ಪಂಜಾಬ್ ಕರಾರುವಾಕ್ ಬೌಲಿಂಗ್!
ಪಂಜಾಬ್ ತಂಡ ಕೊಟ್ಟ 153 ರನ್ ಬೆನ್ನಟ್ಟಿದ ಗುಜರಾತ್ ತಂಡ, ರುದ್ಧಿಮಾನ್ ಸಾಹ ಮತ್ತು ಶುಭ್ಮನ್ ಗಿಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಸಹಾ ಅವರು 19 ಬಾಲ್ ನಲ್ಲಿ 30 ರನ್ ಗಳಿಸಿ ರಾಬಾಡ ಬೌಲಿಂಗ್ ನಲ್ಲಿ ಮ್ಯಾಥ್ಯೂ ಅವರಿಗೆ ಕ್ಯಾಚ್ ಕೊಟ್ಟು ಔಟಾದರು. ಮೊತ್ತೊಂದು ಕಡೆ ಉತ್ತಮ ಫಾರ್ಮ್ನಲ್ಲಿದ್ದ ಶುಭ್ಮನ್ ಗಿಲ್ ಎಂದಿನಂತೆ ತಮ್ಮ ಭರ್ಜರಿ ಆತ ಪ್ರದರ್ಶಿಸಿದರು. ಮೊತ್ತೊಂದುಕಡೆ ಹಾರ್ಪಿತ್ ಬ್ರಾರ್, ಕಗಿಸೊ ರಾಬಾಡ, ಅರ್ಶದೀಪ್ ಸಿಂಗ್, ಸ್ಯಾಮ್ ಕರಣ್ ತಲಾ 1 ವಿಕೆಟ್ ಪಡೆದು ಗುಜರಾತ್ ತಂಡಕ್ಕೆ ವೇಗದ ರನ್ ಗಳಿಸಲು ಬಿಡಲಿಲ್ಲ. ಗುಜರಾತ್ ತಂಡದ ಪರ ಬ್ಯಾಟಿಂಗ್ ಆಡಿದ ಸಾಯಿ ಸುಧರ್ಶನ್, ನಾಯಕ ಹಾರ್ದಿಕ್ ಪಾಂಡ್ಯ ಅಲ್ಪ ಮೊತ್ತಕ್ಕೆ ಔಟ್ ಆಗಿ ಹೊರ ನಡೆದರೂ, ಹರ್ಪ್ರೀತ್ ಬ್ರಾರ್ ಮಡಿದ ಬೌಲಿಂಗ್ ನಲ್ಲಿ ಸ್ಯಾಮ್ ಕರಣ್ ಗೆ ಕ್ಯಾಚ್ ಕೊಟ್ಟು ಹಾರ್ದಿಕ್ ಹೊರನಡೆದರೆ, ಸಾಯಿ ಸುಧರ್ಶನ್ ರವರು ಅರ್ಶದೀಪ್ ಬೌಲಿಂಗ್ ನಲ್ಲಿ ಪ್ರಭ್ಸಿಮ್ರನ್ ಗೆ ಕ್ಯಾಚ್ ಕೊಟ್ಟು ಔಟಾದರು. ಒಂದು ಕಡೆ ವಿಕೆಟ್ಗಳು ಕಳೆದುಕೊಳ್ಳುತ್ತಿದರೇ, ಕೊನೆಯ ಓವರ್ ವರೆಗೂ ಬ್ಯಾಟಿಂಗ್ ಮಾಡಿದ ಶುಭ್ಮನ್ ಗಿಲ್ ಅವರು ತಮ್ಮ ಭರ್ಜರಿ ಬ್ಯಾಟಿಂಗ್ ನಿಂದ ಅಮೋಘ ಅರ್ಧ ಶತಕ ಬಾರಿಸಿದರು. 49 ಬಾಲ್ನಲ್ಲಿ 67 ರನ್ ಗಳಿಸುವಲ್ಲಿ ಯಶಸ್ವಿಯಾದರು. ಕಡೆಯ ಓವರ್ನಲ್ಲಿ ಬೌಲಿಂಗ್ ಮಾಡಲು ಸ್ಯಾಮ್ ಕರಣ್ ಬಂದರು. ಗುಜರಾತ್ ಟೈಟಾನ್ಸ್ ಗೆಲ್ಲಲು 6 ಬಾಲ್ ಗಳಲ್ಲಿ 7 ರನ್ ಗಳು ಬೇಕಿರುತ್ತದೆ, ಶುಭ್ಮನ್ ಅವರು 2 ನೇ ಬಾಲ್ನಲ್ಲಿ ಔಟಾಗುತ್ತಾರೆ. ಆದರೆ ಕ್ರೀಸ್ ಗೆ ಬಂದ ರಾಹುಲ್ ತೆವಾಟಿಯ ಮತ್ತು ಡೇವಿಡ್ ಮಿಲ್ಲರ್ ಜೊತೆ ಸೇರಿ ೧ ಬಾಲ್ ಬಾಕಿ ಇರುವ ಮುಂಚೆ ಪಾಂಡ್ಯ ಗೆಲ್ಲಿಸುತ್ತಾರೆ. ಇದರಿಂದ ಗುಜರಾತ್ ಟೈಟಾನ್ಸ್ ತಂಡ 154 ಕ್ಕೆ 4 ವಿಕೆಟ್ ಕಳೆದುಕೊಂಡು ಪಂಜಾಬ್ ಕಿಂಗ್ಸ್ ವಿರುದ್ಧ ಈ ಪಂದ್ಯವನ್ನು ಯಶಸ್ವಿಯಾಗಿ ಗೆಲ್ಲುತ್ತದೆ.
ಮೋಹಿತ್ ಶರ್ಮ ಪಂದ್ಯ ಶ್ರೇಷ್ಠ:
ಐಪಿಎಲ್ ೨೦೨೩ ಟೂರ್ನಿಯಲ್ಲಿ ಮೊದಲ ಬಾರಿ ಗುಜರಾತ್ ತಂಡದ ಪರ ಆಡಲು ಬಂದ ಮೋಹಿತ್ ಶರ್ಮ ತಮ್ಮ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಬೌಲಿಂಗ್ ಮಾಡಿದ 4 ಓವರ್ಗಳಲ್ಲಿ ಕೇವಲ 18 ರನ್ ನೀಡಿ ಪಂಜಾಬ್ ತಂಡದ ಪ್ರಮುಖ 2 ವಿಕೆಟ್ ಗಳಿಸಿದರು. ಈ ಪಂದ್ಯದ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಬಾಜನರಾದರು.
ಐಪಿಎಲ್ ೨೦೨೩ ಪಾಯಿಂಟ್ಸ್ ಟೇಬಲ್ನಲ್ಲಿ ಬದಲಾವಣೆ :
ಗುಜರಾತ್ ಟೈಟಾನ್ಸ್ ತಮ್ಮ ಮೂರನೇ ಪಂದ್ಯ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋತು ೪ ನೇ ಸ್ಥಾನದಲ್ಲಿತ್ತು. ನೆನ್ನೆ ನಡೆದ ತಮ್ಮ 4ನೇ ಪಂದ್ಯ ಗೆದ್ದು, ಮತ್ತೊಮ್ಮೆ ತಮ್ಮ ಗೆಲುವಿನ ಲಯಕ್ಕೆ ಮರಳಿದ ಗುಜರಾತ್ ಟೈಟಾನ್ಸ್ ಐಪಿಎಲ್ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಏರಿಕೆಯಾಗಿದೆ. ಇನ್ನು ಪಂಜಾಬ್ ತಂಡ ಮ್ಯಾಚ್ ಸೋತರು 6ನೇ ಸ್ಥಾನದಲ್ಲಿ ಉಳಿದಿದೆ.
ಇವತ್ತಿನ ಪಂದ್ಯ KKR vs SRH :
ಏಪ್ರಿಲ್ ೧೪, ೨೦೨೩. ಇಂದು ನಡೆಯಲಿರುವ IPL 2023 ನ 19ನೇ ಪಂದ್ಯ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದೆರಾಬಾದ್ ವಿರುದ್ಧ ನಡೆಯಲಿದೆ. ಈ ಪಂದ್ಯವು ಕೋಲ್ಕತಾದ ಈಡನ್ ಗಾರ್ಡನ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ಆಡಲಿದ್ದಾರೆ. ಸಂಜೆ 7.30 ಕ್ಕೆ ಶುರುವಾಗಲಿದೆ. ಕೊಲ್ಕತ್ತಾ ತಂಡಕ್ಕೆ ನಿತೀಶ್ ರಾಣಾ ನಾಯಕನಾಗಿ ಮುನ್ನಡಿಸಲಿದ್ದಾರೆ, ಹೈದೆರಾಬಾದ್ ತಂಡವನ್ನು ಏಡೆನ್ ಮಕ್ರಂ ರವರು ಮುನ್ನಡೆಸಲಿದ್ದಾರೆ.
ಇವತ್ತು ಆಡಬಹುದಾದ ಕೊಲ್ಕತ್ತಾ ತಂಡದ ೧೧ ಆಟಗಾರರು:
ಮಂದೀಪ್ ಸಿಂಗ್, ರಹಮಾನುಲ್ಲಾಹ್ ಗುರ್ಬಾಜ್(ವಿಕೆಟ್ ಕೀಪರ್), ವೆಂಕಟೇಶ್ ಐಯ್ಯರ್, ನಿತೀಶ್ ರಾಣಾ(ನಾಯಕ), ಅನುಕೂಲ್ ರಾಯ್, ಸುನಿಲ್ ನರೈನ್, ರಿಂಕು ಸಿಂಗ್, ಡ್ರೆ ರುಸ್ಸೆಲ್, ಶ್ರಾದುಲ್ ಥಾಕುರ್, ಟಿಮ್ ಸೌಥೀ, ಉಮೇಶ್ ಯಾದವ್, ವರುಣ್ ಚಕ್ರವರ್ತಿ, ಸುಯಶ್ ಶರ್ಮಾ
ಇವತ್ತು ಆಡಬಹುದಾದ ಹೈದೆರಾಬಾದ್ನ ತಂಡದ ೧೧ ಆಟಗಾರರು :
ಏಡೆನ್ ಮಕ್ರಂ(C), ಹೆನ್ರಿಚ್ ಕ್ಲಾಸ್ಸೆನ್(WK), ಹ್ಯಾರಿ ಬ್ರೂಕ್, ಮಾಯಾಂಕ್ ಅಗರ್ವಾಲ್, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಮಾರ್ಕೋ ಜಾನ್ಸೆನ್, ಭುವನೇಶ್ವರ್ ಕುಮಾರ್, ಮಾಯಾಂಕ್ ಮಾರ್ಖಂಡೇ, ಉಮ್ರಾನ್ ಮಲಿಕ್, ಟಿ. ನಟರಾಜನ್.
KKR vs SRH live streaming : ಎಲ್ಲಿ ಮತ್ತು ಹೇಗೆ ನೋಡುವುದು :
ಇವತ್ತಿನ ಕೊಲ್ಕತ್ತಾ ಮತ್ತು ಹೈದರಾಬಾದ್ ಪಂದ್ಯವು ಕೋಲ್ಕತಾದ ಈಡನ್ ಗಾರ್ಡನ್ ನಲ್ಲಿ ಸಂಜೆ ೭.೩೦ ಕ್ಕೆ ನಡೆಯಲಿದೆ, ಇದರ ನೇರ ಪ್ರಸಾರ ಜಿಯೋ ಸಿನಿಮಾ ಆಫ್ ನಲ್ಲಿ ಉಚಿತವಾಗಿ ೧೦ ಭಾಷೆಯಲ್ಲಿ ವೀಕ್ಷಿಸಬಹುದು. ಟಿವಿ ಯಲ್ಲಿ ಸ್ಟಾರ್ ಸ್ಪೋರ್ಟ್ಸ್ ನ ಹಲವು ಚಾನೆಲ್ ನಲ್ಲಿ ನೋಡಬಹುದು.