ಐಪಿಎಲ್ ೨೦೨೩: RCB vs CSK : ಸೌಥೆರ್ನ್ ಡರ್ಬಿ ಅಂತಲೇ ಹೆಸರುವಾಸಿಯಾಗಿರುವ RCB vs CSK ಪಂದ್ಯ ಇಂದು(17 ಏಪ್ರಿಲ್ 2023) ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ.
IPL 2023(RCB vs CSK) ಮ್ಯಾಚ್ ಡೀಟೇಲ್ಸ್:
ಐಪಿಎಲ್ ೨೦೨೩ ರ ಆವೃತಿಯ 24 ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಸಂಜೆ 7.30 ಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೆಣೆಸಾಡಲಿದ್ದಾರೆ. ಇವತ್ತಿನ ಪಂದ್ಯವು ಐಪಿಎಲ್ ನ ಹೈ ವೋಲ್ಟೇಜ್ ಪಂದ್ಯ ಎಣಿಸಿಕೊಳ್ಳಲಿದೆ, ಕ್ರಿಕೆಟ್ ಅಭಿಮಾನಿಗಳಿಗೆ ಈ ಪಂದ್ಯವು ರಸದೌತಣವಾಗಲಿದೆ.
ಇವತ್ತಿನ ಗೆಲುವು ರಾಯಲ್ ಚಾಲೆಂಜರ್ಸ್ ಬೆಂಗಳೂರಿಗಾ ಅಥವಾ ಚೆನ್ನೈ ಸೂಪರ್ ಕಿಂಗ್ಸ್ ಗಾ?
ಇವತ್ತು (17 ಏಪ್ರಿಲ್ ೨೦೨೩) ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಬೆಂಗಳೂರಿನ ಪರ ನಾಯಕನಾಗಿ ಫಾಫ್ ಡು ಪ್ಲೆಸಿಸ್ ಮುನ್ನಡೆಸಲಿದ್ದಾರೆ ಮತ್ತು ಎಂ.ಸ್.ಧೋನಿ ನಾಯಕನಾಗಿ ಚೆನ್ನೈ ತಂಡಕ್ಕೆ ಕಣಕ್ಕಿಳಿಯಲಿದ್ದಾರೆ. ಆರ್ಸಿಬಿ ತಂಡ ತಮ್ಮ ಕೊನೆಯ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಿತ್ತು ಮತ್ತು 23 ರನ್ ಗಳ ಅಂತರದಿಂದ ಬೆಂಗಳೂರು ತಂಡ ಗೆಲುವು ಸಾಧಿಸಿತ್ತು. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಕೊನೆಯ ಪಂದ್ಯ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಿದ ಪಂದ್ಯದಲ್ಲಿ 3 ರನ್ ಗಳಿಂದ ಸೋತಿತ್ತು. ಇದರಿಂದ ಚೆನ್ನೈ ಸೂಪರ್ ಕಿಂಗ್ಸ್ ಈ ಪಂದ್ಯವನ್ನು ಗೆಲ್ಲುವ ತವಕದಲ್ಲಿದ್ದಾರೆ, ಬೆಂಗಳೂರು ತಂಡ ತಮ್ಮ ವಿಜಯ ಯಾತ್ರೆ ಮುಂದುವರಿಸಲು ರೆಡಿಯಾಗಿದೆ. ಇವತ್ತಿನ ಈ ಸೌಥೆರ್ನ್ ಡರ್ಬಿಯ ಪಂದ್ಯದ ಗೆಲುವು ಯಾರಿಗೆ ಲಭಿಸಲಿದೆ ಎಂದು ಕಾದು ನೋಡಬೇಕಿದೆ.
IPL Points table – ಪಾಯಿಂಟ್ಸ್ ಟೇಬಲ್ ನಲ್ಲಿ ಬೆಂಗಳೂರು ಮತ್ತು ಚೆನ್ನೈ ತಂಡಗಳ ಸ್ಥಾನ :
ಚೆನ್ನೈ ಸೂಪರ್ ಕಿಂಗ್ಸ್ ತಂಡ ಇದುವರೆಗೂ ಐಪಿಎಲ್ ೨೦೨೩ ರಲ್ಲಿ ಆಡಿರುವ 4 ಪಂದ್ಯಗಳಲ್ಲಿ 2 ಗೆದ್ದು, 2 ಪಂದ್ಯ ಗಳನ್ನು ಸೋತಿದೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸಹ 4 ಪಂದ್ಯಗಳನ್ನು ಆಡಿದೆ, 2 ಗೆದ್ದು, 2 ಪಂದ್ಯ ಗಳನ್ನು ಸೋತಿದೆ. ಈ ಎರಡು ತಂಡಗಳು ಸರಿಸಮನಾಗಿ ಮ್ಯಾಚ್ ಗೆದ್ದಿದ್ದರು ರನ್ ರೇಟ್ ನ ಸರಾಸರಿಯಿಂದ ಚನ್ನೈ ತಂಡ ಪಾಯಿಂಟ್ಸ್ ಟೇಬಲ್ ನಲ್ಲಿ 6 ನೇ ಸ್ಥಾನದಲ್ಲಿದ್ದರೆ, ಬೆಂಗಳೂರು ತಂಡ 7 ಸ್ಥಾನದಲ್ಲಿದೆ.
ಬೆಂಗಳೂರು ಮತ್ತು ಚೆನ್ನೈ ತಂಡದ ಬಲಾಬಲ :
ಬೆಂಗಳೂರಿನ ತಂಡದ ಪರ ಭರ್ಜರಿ ಫಾರ್ಮ್ ನಲ್ಲಿ ಇರುವ ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡು ಪ್ಲೆಸಿಸ್ ತಂಡಕ್ಕೆ ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ, ಇನೂ ಇವರ ಓಪನಿಂಗ್ ನಲ್ಲಿ ಪವರ್ ಪ್ಲೇ ನಲ್ಲಿ ಹೆಚ್ಚು ರನ್ ಗಳಿಸಿದರೆ ಪಂದ್ಯ ಗೆಲ್ಲುವ ಅವಕಾಶ ಹೆಚ್ಚಿರುತ್ತದೆ. ಮಾಧ್ಯಮ ಕ್ರಮಾಂಕಕ್ಕೆ ಗ್ಲೆನ್ ಮ್ಯಾಕ್ಸ್ವೆಲ್ ವೇಗ ರನ್ ಗಳು , ಮಹಿಪಾಲ್ ಲೋಮರೋರ್, ಶಾಬಾಜ್ ಅಹ್ಮದ್ ಬ್ಯಾಟಿಂಗ್ ಪ್ರದರ್ಶನ ಮುಖ್ಯವಾಗಲಿದೆ, ಇನ್ನು ಬೌಲಿಂಗ್ ನಲ್ಲಿ ಮೊಹಮ್ಮನ್ ಸಿರಾಜ್ ಅದ್ಭುತ ಫಾರ್ಮ್ನಲ್ಲಿದ್ದಾರೆ, ಕನ್ನಡಿಗ ವಿಜಯ್ ಕುಮಾರ್ ವೈಶಾಕ್, ವಾಯ್ನ್ ಪಾರ್ನೆಲ್ ಬೌಲಿಂಗ್ ಮೇಲೆ ಆರ್ಸಿಬಿಗೆ ಹೊಸ ಭರವಸೆ ಮೂಡಿಸಿದೆ.
ಇನ್ನು ಚೆನ್ನೈ ತಂಡದ ಪರವಾಗಿ ನೋಡಿದರೆ ಋತುರಾಜ್ ಗೈಕ್ವಾಡ್, ಡೆವನ್ ಕಾನ್ವಾಯ್, ಅಜಿಂಕ್ಯ ರಹಾನೆ ಅದ್ಭುತ ಫಾರ್ಮ್ನಲ್ಲಿದ್ದಾರೆ, ರವೀಂದ್ರ ಜಡೇಜಾ ರ ಬೌಲಿಂಗ್ ಮತ್ತು ಬ್ಯಾಟಿಂಗ್ ಪ್ರದರ್ಶನ ಬೊಂಬಾಟಾಗಿದೆ, ನಾಯಕ ಧೋನಿ ಸಹ ಒಳ್ಳೆ ಬ್ಯಾಟಿಂಗ್ ಫಾರ್ಮ್ನಲ್ಲಿದ್ದಾರೆ. ಬೌಲಿಂಗ್ ಡಿಪಾರ್ಟ್ಮೆಂಟ್ ನಲ್ಲಿ ತುಷಾರ್ ದೇಶಪಾಂಡೆ, ಸ್ಯಾಂಟ್ನರ್, ಆಕಾಶ್ ಸಿಂಗ್ ಒಳ್ಳೆಯ ಬೌಲಿಂಗ್ ಮಾಡುತ್ತಿದ್ದಾರೆ. ಈ ಎರಡು ತಂಡಗಳ ಬಲಾಬಲ ನೋಡಿದರೆ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಮೂಡುವುದಂತೂ ಸಹಜ, ಎರಡು ತಂಡಗಳು ಸಮಬಲದಿಂದ ಕೂಡಿದೆ, ಆದರೂ ಬೆಂಗಳೂರು ತಂಡ ತಮ್ಮ ತವರಿನಲ್ಲಿ ಆಡುತ್ತಿರುವುದರಿಂದ ಈ ಪಂದ್ಯ ಗೆಲ್ಲಬಹುದೆಂಬ ನಿರೀಕ್ಷೆ ಇದೆ. ಕೊನೆಯ ಪಂದ್ಯವನ್ನು ಸಹ ಇದೆ ಸ್ಟೇಡಿಯಂನಲ್ಲಿ ಬೆಂಗಳೂರು ಆಡಿ ಗೆದ್ದಿತ್ತು.
RCB vs CSK ಮುಖಾಮುಖಿ, ಯಾರಿಗೆ ಎಷ್ಟು ಗೆಲುವು?
ಇಲ್ಲಿಯವರೆಗೂ ಬೆಂಗಳೂರು ಮತ್ತು ಚೆನ್ನೈ ತಂಡಗಳು 30 ಪಂದ್ಯಗಳು ಮುಖಾಮುಖಿಯಾಗಿವೆ, ಇದರಲ್ಲಿ 19 ಪಂದ್ಯಗಳನ್ನು ಚೆನ್ನೈ ತಂಡ ಗೆದ್ದು ಮೇಲುಗೈ ಸಾಧಿಸಿದ್ದಾರೆ, ಬೆಂಗಳೂರು ತಂಡ 10 ಪಂದ್ಯಗಳನ್ನು ಗೆದ್ದಿದೆ ಮತ್ತು ಒಂದು ಪಂದ್ಯ ಪಲಿತಾಂಶವಿಲ್ಲದೆ ಆಡಲಾಗಲಿಲ್ಲ.ಚೆನ್ನೈ ತಂಡ ಬೆಂಗಳೂರಿನ ವಿರುದ್ಧ ಹೆಚ್ಚು ವಿಜಯ ಗಳಿಸಿದ್ದರು ಸಹ, ಒಳ್ಳೆಯ ಫಾರ್ಮ್ನಲ್ಲಿರುವ ಬೆಂಗಳೂರಿನ ತಂಡ ಚೆನ್ನೈ ತಂಡಕ್ಕೆ ಸರಿಸಮನಾಗಿ ಹೋರಾಟ ಕೊಡುವ ಸಾಧ್ಯತೆ ಇದೆ.
IPL 2023 : ಪಿಚ್, ವಾತಾವರಣ ರಿಪೋರ್ಟ್ :
ಇವತ್ತಿನ ಬೆಂಗಳೂರಿನ ವಾತಾವರಣ ಬಹುತೇಕ ಬಿಸಿಲಿನಿಂದ ಕೂಡಿದೆ, ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದೆ, ಮಳೆ ಬರುವ ಸಾಧ್ಯತೆ ಕಡಿಮೆಯಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಬ್ಯಾಟಿಂಗ್ ಪಿಚ್ ಎಂದು ಹೇಳಬಹುದು, ಬೌಲಿಂಗ್ ಮಾಡುವವರಿಗೆ ತುಂಬಾ ಕಷ್ಟ ಪಡಲಿದ್ದಾರೆ. ಟಾಸ್ ಗೆದ್ದ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ, ಮೊದಲು ಬ್ಯಾಟಿಂಗ್ ಮಾಡುವ ತಂಡ 200 ಕ್ಕೂ ಹೆಚ್ಚು ರನ್ ಬಾರಿಸಿದರೆ ಒಳಿತು. ಏಕೆಂದರೆ ಈ ಸ್ಟೇಡಿಯಂನ ಬೌಂಡರಿ ಚಿಕ್ಕದಿರುವುದರಿಂದ ರನ್ ಗಳಿಸುವುದು ಸುಲಭವಾಗುತ್ತದೆ. ಹಾಗಾಗಿ ಹೆಚ್ಚು ರನ್ ಮೊತ್ತ ಕಲೆ ಹಾಕಿದರೆ ಒಳ್ಳೆಯ ಪೈಪೋಟಿ ನೀಡಬಹುದು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಡಬಹುದಾದ 11 :
ಫಾಫ್ ಡು ಪ್ಲೇಸೆಸ್(ನಾಯಕ), ವಿರಾಟ್ ಕೊಹ್ಲಿ, ಮಹಿಪಾಲ್ ಲೋಮರೋರ್, ಗ್ಲೆನ್ ಮ್ಯಾಕ್ಸ್ವೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಶಾಬಾಜ್ ಅಹ್ಮದ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ವಿಜಯ್ ಕುಮಾರ್ ವೈಶಾಕ್, ವನಿಂದು ಹಸರಂಗ, ವಯ್ನ್ ಪಾರ್ನೆಲ್, ಅನುಜ್ ರಾವತ್, ಮೈಕಲ್ ಬ್ರೇಸ್ ವೆಲ್
ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಡಬಹುದಾದ 11:
ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ರುತುರಾಜ್ ಗೈಕ್ವಾಡ್, ದ್ವೈನ್ ಪ್ರೆಟೋರಿಯೂಸ್, ಎಂ ಎಸ್ ಧೋನಿ(ನಾಯಕ ಮತ್ತು ವಿಕೆಟ್ ಕೀಪರ್ಮಿ) ಮಿಚೆಲ್ ಸ್ಯಾಂಟನರ್, ಮೊಯಿನ್ ಅಲಿ, ರವೀಂದ್ರ ಜಡೇಜಾ, ಶಿವಂ ದುಬೆ, ಡೆವನ್ ಕಾನ್ವೆ, ದೀಪಕ್ ಚಾಹರ್, ಮಹೀಶ ತೀಕ್ಷಣ, ತುಷಾರ್ ದೇಶಪಾಂಡೆ.
RCB vs CSK Live streaming : ನೇರಪ್ರಸಾರ ಎಲ್ಲಿ ಮತ್ತು ಹೀಗೆ ನೋಡುವುದು?
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯುತ್ತಿರುವ ಈ ಐಪಿಎಲ್ ಆವೃತ್ತಿಯ 24 ನೇ ಪಂದ್ಯ ಇದಾಗಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಸಂಜೆ 7.30 ಕ್ಕೆ ಪಂದ್ಯವನ್ನು ನೀವು ಸ್ಟಾರ್ ಸ್ಪೋರ್ಟ್ಸ್ ನ ವಿವಿಧ ಟಿವಿ ಚಾನಲ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು. ಓಟಿಟಿಯಲ್ಲಿ ಜಿಯೋ ಸಿನಿಮಾ ಆಪ್ ನಲ್ಲಿ ೧೦ ಭಾಷೆಗಳಲ್ಲಿ ಉಚಿತವಾಗಿ ನೋಡಬಹುದಾಗಿದೆ.
ಐಪಿಎಲ್ ೨೦೨೩ : ನೆನ್ನೆ ನಡೆದ ಎರಡು ಪಂದ್ಯಗಳ ಫಲಿತಾಂಶ : MI vs KKR ಮತ್ತು GT vs RR :
ನೆನ್ನೆ(16 ನೇ ಏಪ್ರಿಲ್ ೨೦೨೩) ಐಪಿಎಲ್ ನ ಎರಡು ಪಂದ್ಯಗಳು ನಡೆಯಿತು, ಮುಂಬೈನ ವಾಂಖಡೆ ಸ್ಟೇಡಿಯಂನಲ್ಲಿ ಮಧ್ಯಾಹ್ನ ನಡೆದ ಮುಂಬೈ ಇಂಡಿಯನ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ನ ಈ ಆವೃತ್ತಿಯ 22ನೇ ಪಂದ್ಯದಲ್ಲಿ ಮುಂಬೈ ತಂಡ 5 ವಿಕೆಟ್ ಗಳ ಭರ್ಜರಿ ಗೆಲುವು ಕಂಡಿತು.
ಈ ಆವೃತ್ತಿಯ 23ನೇ ಪಂದ್ಯ ಅಹಮದಾಬಾದ್ ನ ನರೇಂದ್ರಮೋದಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವೆ ಸಂಜೆ ನಡೆಯಿತು. ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ 3 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. ಇದರಿಂದ ರಾಜಸ್ಥಾನ್ ರಾಯಲ್ಸ್ ತಂಡ ಈ ಐಪಿಎಲ್ ಆವೃತ್ತಿಯ ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನವನ್ನು ಗಟ್ಟಿಪಡಿಸಿಟ್ಟುಕೊಂಡಿದೆ ಗುಜರಾತ್ ಟೈಟಾನ್ಸ್ 3 ನೇ ಸ್ಥಾನದಲ್ಲಿ ಕುಳಿತುಕೊಂಡಿದೆ.