IPL 2023: ನೆನ್ನೆ ನಡೆದ ಈ ಐಪಿಎಲ್ ಆವೃತ್ತಿಯ 20 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಗೆಲುವೇ ಸಾಧಿಸಿದೆ.
IPL 2023 RCB vs DC :ಈ ವರ್ಷದ ಐಪಿಎಲ್ ನ 20 ನೇ ಪಂದ್ಯ ನೆನ್ನೆ (15th ಏಪ್ರಿಲ್ 2023) ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಜೆ ೩.೩೦ ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಉಭಯ ತಂಡಗಳು ಗೆಲುವಿಗಾಗಿ ಕಾಯುತ್ತಿದ್ದರು, ಅದರಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ಸತತ ೪ ಸೋಲುಗಳನ್ನು ಕಂಡದೆ. ಟೂರ್ನಿಯಲ್ಲಿ ಮೊದಲ ಗೆಲುವು ಗಳಿಸಲು ತಡವಡಿಸುತಿದ್ದ ದೆಹಲಿ ಕ್ಯಾಪಿಟಲ್ಸ್ ಗೆ ಬೆಂಗಳೂರು ತಂಡ ದೊಡ್ಡ ಶಾಕ್ ನೀಡಿದೆ.
IPL 2023 : ಬೆಂಗಳೂರು ಭರ್ಜರಿ ಬ್ಯಾಟಿಂಗ್, ವಿರಾಟ್ ಅರ್ಧಶತಕ!
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಇಳಿದ ಬೆಂಗಳೂರು ತಂಡ, ತಂಡಕ್ಕೆ ಅಮೂಲ್ಯವಾದ ರನ್ ಗಳಿಸಿದರು, ಪವರ್ ಪ್ಲೇನಲ್ಲಿ ಬೆಂಗಳೂರು ತಂಡದ ನಾಯಕ ಡು ಪ್ಲೆಸಿಸ್ 22 ರನ್ ಗಳಿಸಿ ಮಿಚೆಲ್ ಮಾರ್ಷ್ ಬೌಲಿಂಗ್ ನಲ್ಲಿ ಔಟಾದರು. ವಿರಾಟ್ ಕೊಹ್ಲಿ ಮತ್ತು ಮಹಿಪಾಲ್ ಲೋಮರೋರ್ ಇಬ್ಬರು ಜೊತೆಗೂಡಿ ತಂಡವನ್ನು ಮುನ್ನಡಿಸಿದರು. ಈ ಮಧ್ಯ ವಿರಾಟ್ ಕೊಹ್ಲಿ ಈ ಟೂರ್ನಿಯ ಭರ್ಜರಿ 3ನೇ ಅರ್ಧ ಶತಕ ಗಳಿಸಿದರು. ಆಡಿದ 34 ಬಾಲ್ಸ್ ನಲ್ಲಿ 1 ಸಿಕ್ಸ್ ಸಮೇತ 6 ಬೌಂಡರಿಗಳು ಒಳಗೊಂಡಿದ್ದವು, ನಂತರ ಲಲಿತ್ ಯಾದವ್ ಬೌಲಿಂಗ್ ನಲ್ಲಿ ಯಶ್ ಧುಳ್ ಗೆ ಕ್ಯಾಚ್ ಕೊಟ್ಟು ಔಟಾದರು. ಇದಾದ ಬಳಿಕ ಬಂಡ ಮಹಿಪಾಲ್ ಲೋಮರೋರ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ತಂಡದ ರನ್ ವೇಗ ಹೆಚ್ಚಿಸಿದರು, ತಂಡಕ್ಕೆ ಉತ್ತಮ ರನ್ ಗಳಿಸಲು ಸಹಕಾರಿಯಾದರು ಆದರೆ ಇಬ್ಬರು ಅಲ್ಪ ಮೊತ್ತಕ್ಕೆ ಔಟಾದರು, ಮ್ಯಾಕ್ಸ್ವೆಲ್ 24 ಮತ್ತು ಲೋಮರೋರ್ 26 ರನ್ ಗಳಿಸಿದ್ದರು. ನಂತರ ಬಂದ ದಿನೇಶ್ ಕಾರ್ತಿಕ್ ಶೂನ್ಯಕ್ಕೆ ಔಟಾದರು. ಶಾಬಾಜ್ ಅಹಮದ್ ಮತ್ತು ಅನುಜ್ ರಾವತ್ ತಂಡಕ್ಕೆ ಕೆಲವು ರನ್ ಗಳು ಕೊಡುಗೆಯಾಗಿ ನೀಡಿದರು ಮತ್ತು ರನ್ ನಿಧಾನ ಗತಿಯಲ್ಲಿ ಸಾಗಿತು. ಈ ಮೂಲಕ ಡೆಲ್ಲಿ ಅವರ ಕರಾರುವಾಕ್ ಬೌಲಿಂಗ್ ನಿಂದ ಆರ್ಸಿಬಿ 6 ವಿಕೆಟ್ ಕಳೆದುಕೊಂಡು 174 ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು.
IPL 2023 : ಬೆಂಗಳೂರಿನ ಬೌಲಿಂಗ್ ದಾಳಿಗೆ ತತ್ತರಿಸಿದ ದೆಹಲಿ ಬ್ಯಾಟ್ಸ್ಮನ್ಗಳು!
ಬೆಂಗಳೂರು ಬಾರಿಸಿದ 174 ರನ್ ಬೆನ್ನಟ್ಟಿದ ದೆಹಲಿ ತಂಡ, ಸುಲಭವಾಗಿ ಗೆಲ್ಲಬಹುದೆಂಬ ಭರವಸೆಯಿಂದ ಬ್ಯಾಟಿಂಗ್ ಇಳಿಯಿತು. ಆದರೆ ಆರಂಭದಲ್ಲೇ ಬೆಂಗಳೂರಿನ ಬೌಲರ್ಗಳು ದೆಹಲಿ ಬ್ಯಾಟ್ಸ್ ಮ್ಯಾನ್ ಗಳಿಗೆ ಶಾಕ್ ಮೇಲೆ ಶಾಕ್ ನೀಡಿದರು. ಮೊದಲ ಓವರ್ನಲ್ಲೇ ಆರ್ಸಿಬಿಯ ಇಂಪ್ಯಾಕ್ಟ್ ಪ್ಲೇಯರ್ ಅನುಜ್ ರಾವತ್ ರವರು ಪ್ರಿಥ್ವಿ ಶಾ ಅವರನ್ನು ಶೂನ್ಯಕ್ಕೆ ರನ್ ಔಟ್ ಮಾಡಿದರು, ತದ ನಂತರ ಬಂದಂತಹ ಮಿಚೆಲ್ ಮಾರ್ಷ್ ಆರ್ಸಿಬಿ ಬೌಲರ್ ವೇನ್ ಪಾರ್ನೆಲ್ ಬೌಲಿಂಗ್ ನಲ್ಲಿ ವಿರಾಟ್ ಕೊಹ್ಲಿ ಗೆ ಕ್ಯಾಚ್ ಕೊಟ್ಟು ಶೂನ್ಯಕ್ಕೆ ಔಟಾದರು. ಬಳಿಕ ಬಂದ ಯಶ್ ಧುಲ್ 1 ರನ್ ಗಳಿಸಿ ಸಿರಾಜ್ ಬೌಲಿಂಗ್ ನಲ್ಲಿ ಎಲ್ಬಿಡಬ್ಲೂ ಔಟಾದರು. ಹೀಗೆ ನೋಡನೋಡುತ್ತ 3 ಓರ್ವರ್ಗಳು ಮುಗಿಸುವ ಒಳಗೆ ತನ್ನದ ದೆಹಲಿ ತಂಡ ಕೇವಲ 2 ರನ್ ಗಳಿಸಿ ತನ್ನ ಪ್ರಮುಖ 3 ವಿಕೆಟ್ ಗಳನ್ನೂ ಕಳೆದುಕೊಂಡಿತ್ತು, ಮತ್ತೊಂದು ಕಡೆ ದೆಹಲಿ ತಂಡದ ನಾಯಕ ಡೇವಿಡ್ ವಾರ್ನರ್ ರನ್ ಗಳಿಸಲು ಹೋರಾಟ ನಡೆಸಿದರು, ಆದರೆ 19 ರನ್ ಗಳಿಸಿ ಕರ್ನಾಟಕದ ವಿಜಯ್ ಕುಮಾರ್ ವೈಶಾಕ್ ಬೌಲಿಂಗ್ ದಾಳಿಗೆ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿ ಔಟಾದರು. ಹೀಗೆ ಒಂದರಂತೆ ಒಂದು ವಿಕೆಟ್ಗಳು ಆರ್ಸಿಬಿ ತಂಡದ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ದೆಹಲಿ ಬ್ಯಾಟ್ಸ್ ಮಂಗಳೂ ತಲೆದೂಗಿದರು. ಆದರೆ ದೆಹಲಿ ಪರ ಆಡುತ್ತಿರುವ ಕನ್ನಡಿಗ ಮನೀಶ್ ಪಾಂಡೆ ಬೆಂಗಳೂರು ತಂಡಕ್ಕೆ ತಮ್ಮ ಬ್ಯಾಟಿಂಗ್ ನಿಂದ ಕಾಟ ಕೊಟ್ಟರು, ತಮ್ಮ ಸಮಯೋಚಿತ ಆಟದಿಂದ ಅರ್ಧಶತಕ ಗಳಿಸಿದರು, ದೆಹಲಿ ತಂಡಕ್ಕೆ ಗೆಲುವಿನ ದಡ ಸೇರಿಸಲು ಶ್ರಮ ಪಟ್ಟರು. ಈ ಆವೃತ್ತಿಯಲ್ಲಿ ತಮ್ಮ ಮೊದಲ ಮ್ಯಾಚ್ ಆಡುತ್ತಿರುವ ಹಸರಂಗ, 50 ರನ್ ಗಳಿಸಿದ್ದ ಮನೀಶ್ ಪಾಂಡೆ ಅವರನ್ನು ಔಟ್ ಮಾಡಿದರು. 8 ರನ್ ಗಳಿಸಿದ್ದ ಡೆಲ್ಲಿ ವಿಕೆಟ್ ಕೀಪರ್ ಅಭಿಷೇಕ್ ಪೊರಲ್ ಹರ್ಷಲ್ ಪಟೇಲ್ ರ ಬೌಲಿಂಗ್ ನಲ್ಲಿ ಪಾರ್ನೆಲ್ ಗೆ ಕ್ಯಾಚ್ ಕೊಟ್ಟು ಔಟಾದರು. ನಂತರ ಬಂದ ಅಕ್ಷರ್ ಪಟೇಲ್ ರವರು ದೆಹಲಿ ತಂಡಕ್ಕೆ ಗೆಲುವು ತಂದು ಕೊಡುವ ಭರವಸೆ ಮೂಡಿಸಿದರು, 21 ರನ್ ಗಳಿಸಿ ವಿಜಯ್ ಕುಮಾರ್ ವೈಶಾಕ್ ಬೌಲಿಂಗ್ ನಲ್ಲಿ ಸಿರಾಜ್ ಗೆ ಕ್ಯಾಚ್ ಕೊಟ್ಟು ಔಟಾದರು. ಕಡೆಯಲ್ಲಿ ಆಡಿದ ಅಮನ್ ಹಕೀಮ್, ಲಲಿತ್ ಯಾದವ್ ಮತ್ತು ಅನ್ರಿಚ್ ನೋಕಿಯಾ ಅವರ ಹೋರಾಟ ವ್ಯರ್ಥವಾಯಿತು. ಇದರಿಂದ ಡೆಲ್ಲಿ ತಂಡ 9 ವಿಕೆಟ್ ಕಳೆದುಕೊಂಡು ೧೫೧ ರನ್ ಗಳಿಸಲು ಶಕ್ತವಾಯಿತು, ಕೊನೆಗೆ ಬೆಂಗಳೂರು ತಂಡ 23 ರನ್ ಗಳ ಅಂತರದಿಂದ ಗೆಲುವು ಸಾಧಿಸಿತು. ಇದರೊಂದಿಗೆ ಆಡಿದ 4 ಪಂದ್ಯಗಳಲ್ಲಿ 2 ಪಂದ್ಯ ಗೆಲುವು ಕಂಡ ಬೆಂಗಳೂರಿನ ತಂಡ, ಆದರೆ ದೆಹಲಿ ತಂಡ ಆಡಿದ 5 ಪಂದ್ಯಗಳಲ್ಲಿ 5 ಪಂದ್ಯಗಲ್ಲಿ ಸೋಲುಂಡಿದೆ.
3 ಪ್ರಮುಖ ವಿಕೆಟ್ ಗಳಿಸಿದ, ಕನ್ನಡದ ವೈಶಾಕ್ ಭರ್ಜರಿ ಬೌಲಿಂಗ್:
ನೆನ್ನೆ ನಡೆದ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ ಕನ್ನಡಿಗ ವಿಜಯ್ ಕುಮಾರ್ ವೈಶಾಕ್, ತನ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ಬ್ಯಾಟ್ಸ್ ಮೆನ್ಗಳನ್ನು ಕಾಡಿದರು, ಮಾಡಿದ 4 ಓವರ್ಗಳಲ್ಲಿ ಕೇವಲ 20 ರನ್ ಕೊಟ್ಟು 3 ಪ್ರಮುಖ ವಿಕೆಟ್ ಗಳಿಸಿದರು. ಅದರಲ್ಲೂ ಮುಖ್ಯವಾಗಿ ಭರ್ಜರಿ ಫಾರ್ಮ್ ನಲ್ಲಿದ್ದ ಡೆಲ್ಲಿ ನಾಯಕ ಡೇವಿಡ್ ವಾರ್ನರ್ ಮತ್ತು ಅಕ್ಷರ್ ಪಟೇಲ್ ಅವರ ಪ್ರಮುಖ ವಿಕೆಟ್ ಪಡೆದು ಬೆಂಗಳೂರು ತಂಡ ಗೆಲ್ಲಲ್ಲು ಪ್ರಮುಖ ಕಾರಣರಾದರು.
ಪಂದ್ಯ ಶ್ರೇಷ್ಠ ವಿರಾಟ್ ಕೊಹ್ಲಿ :
34 ಬಾಲ್ ಗಳಲ್ಲಿ 50 ರನ್ ಗಳಿಸಿರುವ ವಿರಾಟ್ ಕೊಹ್ಲಿ, ತಂಡದ ಗೆಲುವಿಗೆ ಒಬ್ಬ ಪ್ರಮುಖ ಕಾರಣವಾದರು, ಇದರೊಂದಿಗೆ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಗಳಿಸಿಕೊಂಡರು.
IPL 2023 ಪಾಯಿಂಟ್ಸ್ ಟೇಬಲ್ನಲ್ಲಿ ಬದಲಾವಣೆ :
ಪಾಯಿಂಟ್ಸ್ ಟೇಬಲ್ನಲ್ಲಿ 8ನೇ ಸ್ಥಾನದಲ್ಲಿದ್ದ ಬೆಂಗಳೂರು ತಂಡ, ನೆನ್ನೆಯ ಗೆಲುವಿನ ಬಳಿಕ 7 ನೇ ಸ್ಥಾನಕ್ಕೆ ಏರಿಕೆ ಗೊಂಡಿದೆ, ಮೊದಲನೇ ಸ್ಥಾನ ರಾಜಸ್ಥಾನ್ ತಂಡವಿದೆ, ಎರಡನೇ ಸ್ಥಾನ ಲಕ್ನೋ ಸೂಪರ್ ಜಯಂಟ್ಸ್, ಗುಜರಾತ್ ಟೈಟಾನ್ಸ್ ಮೂರನೇ ಸ್ಥಾನ ಹಾಗು ಪಂಜಾಬ್ ತಂಡ 4 ನೇ ಸ್ಥಾನದಲ್ಲಿದೆ, ಕೊನೆಯ ಅಂದರೆ 10 ನೇ ಸ್ಥಾನದಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡವಿದೆ.
ಲಕ್ನೋ ಸೂಪರ್ ಜಯಂಟ್ಸ್ vs ಪಂಜಾಬ್ ಸೂಪರ್ ಕಿಂಗ್ಸ್, ಪಂಜಾಬ್ ಗೆ ಗೆಲುವು :
IPL 2023 ರ ೨೧ ನೇ ಪಂದ್ಯ ನೆನ್ನೆ ಸಂಜೆ 7.30 ಕ್ಕೆ ಲಕ್ನೋದಲ್ಲಿರುವ ಭಾರತ್ ರತ್ನ ಶ್ರೀ ಅಟಲ್ ಭೀಹಾರಿ ವಾಜಪೇಯೀ ಏಕನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜಯಂಟ್ಸ್ ನೀಡಿದ್ದ 159 ರನ್ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡ 19.3 ಓವರ್ ಗಳಲ್ಲಿ 161 ಗಳಿಸಿ ಪಂದ್ಯವನ್ನು ಗೆದ್ದುಕೊಂಡರು.
IPL 2023 : ಇಂದು(ಏಪ್ರಿಲ್ ೧೬, ೨೦೨೩) 2 ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ನಡುವೆ ಮಧ್ಯಾಹ್ನ 3.30 ಕ್ಕೆ ವಾಂಖಡೆ ಸ್ಟೇಡಿಯಂನಲ್ಲಿ ನಡೆಯಲಿದೆ, ಎರಡನೇ ಪಂದ್ಯ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ಸಂಜೆ 7.30 ಕ್ಕೆ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ಸೆಣೆಸಾಡಲಿದೆ.
ಐಪಿಎಲ್ ೨೦೨೩ : live streaming, ನೇರ ಪ್ರಸಾರ :
ಈ ಪಂದ್ಯಗಳ ನೇರಪ್ರಸಾರ ವೀಕ್ಷಣೆ ನೀವು ಸ್ಟಾರ್ ಸ್ಪೋರ್ಟ್ಸ್ ನ ಟಿವಿ ಚಾನೆಲ್ ಗಳಲ್ಲಿ ನೋಡಬಹುದು, ಮತ್ತು ಜಿಯೋ ಆಪ್ ನಲ್ಲಿ ಉಚಿತವಾಗಿ ನೋಡಬಹುದಾಗಿದೆ.