SRH vs KKR : ಐಪಿಎಲ್ 2023 (IPL 2023): ಇಂದು(4 ಮೇ 2023) ನಡೆಯಲಿರುವ 47 ನೇ ಐಪಿಎಲ್- ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯ, ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಸ್ಟೇಡಿಯಂ ಹೈದರಾಬಾದ್ ನಲ್ಲಿ ನಡೆಯಲಿದೆ. ಐಡೆಂ ಮಕ್ರಂ ರವರು ಸನ್ ರೈಸರ್ಸ್ ತಂಡಕ್ಕೆ ನಾಯಕನಾಗಿದ್ದರೆ, ಕೊಲ್ಕತ್ತಾ ತಂಡಕ್ಕೆ ನಿತೀಶ್ ರಾಣಾ ಮುನ್ನಡೆಸಲಿದ್ದಾರೆ.
ಕೊಲ್ಕತ್ತಾ ತೀರಿಸಿಕೊಳ್ಳಲಿದ್ದಾರಾ ಹೈದರಾಬಾದ್ ಮೇಲೆ ಸೇಡು!
ಈ ಆವೃತ್ತಿಯ 19 ನೇ ಪಂದ್ಯದಲ್ಲಿ ಮೊದಲಬಾರಿ ಮುಖಾಮುಖಿಯಾದ ಸನ್ ರೈಸರ್ಸ್ ಹೈದರಾಬಾದ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು, ಹೈದರಾಬಾದ್ ತಂಡ ಭರ್ಜರಿ 23 ರನ್ ಗಳಿಂದ ಗೆದ್ದಿತ್ತು. ಹಾಗಾಗಿ ಈ ಪಂದ್ಯ ಕೊಲ್ಕತ್ತಾ ತಂಡ ಈ ಪಂದ್ಯ ಗೆದ್ದು ತನ್ನ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ. ಸನ್ ರೈಸರ್ಸ್ ತಂಡ ಈ ಪಂದ್ಯವನ್ನು ಗೆದ್ದು ಅಂಕಪಟ್ಟಿಯಲ್ಲಿ ಮೇಲಕ್ಕೇರಲು ಪರಿತಪಿಸುತ್ತಿದೆ.
ಕೊಲ್ಕತ್ತಾ ತಂಡ ಇಲ್ಲಿಯವರೆಗೆ ಆಡಿರುವ 9 ಪಂದ್ಯದಲ್ಲಿ 6 ಪಂದ್ಯವನ್ನು ಸೋತು 3 ರಲ್ಲಿ ಗೆದ್ದಿದೆ, 6 ಪಾಯಿಂಟ್ಸ್ ಪಡೆದು ಅಂಕ ಪಟ್ಟಿಯಲ್ಲಿ 8 ನೇ ಸ್ಥಾನದಲ್ಲಿದೆ. ಸನ್ ರೈಸರ್ಸ್ ಹೈದರಾಬಾದ್ ತಂಡ ಆಡಿರುವ 8 ಪಂದ್ಯ ಗಳಲ್ಲಿ 3 ಪಂದ್ಯವನ್ನು ಗೆದ್ದು, 5 ಪಂದ್ಯಗಳಲ್ಲಿ ಸೋತಿದೆ. ಈ ಪಂದ್ಯ ಎರಡು ತಂಡಗಳಿಗೆ ಅತ್ಯವಶ್ಯಕ ಗೆಲುವು ಬೇಕಾಗಿದೆ.
ಐಪಿಎಲ್ ೨೦೨೩: SRH vs KKR : ತಂಡದ ಬಲಾಬಲ ನೋಡೋಣ! :
ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಅಭಿಷೇಕ್ ಶರ್ಮ, ಹೆನ್ನ್ರಿಕ್ ಕ್ಲಾಸ್ಸೆನ್, ರಾಹುಲ್ ತ್ರಿಪಾಠಿ, ಅಬ್ದುಲ್ ಸಮದ್ ಬ್ಯಾಟಿಂಗ್ ನಲ್ಲಿ ಬಲ ತುಂಬಿಸುತ್ತಾರೆ, ಬೌಲಿಂಗ್ ನಲ್ಲಿ ಭುವನೇಶ್ ಕುಮಾರ್, ಟಿ ನಟರಾಜನ್, ಮಾಯಾಂಕ್ ಮಾರ್ಕಂಡೇ, ಉಮ್ರಾನ್ ಮಾಲಿಕ್ ಉತ್ತಮ ಪ್ರದರ್ಶನ ನೀಡಲಿದ್ದಾರೆ.
ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಎನ್.ಜಗದೀಶನ್, ಗುರ್ಬಾಜ್, ವೆಂಕಟೇಶ್ ಐಯ್ಯರ್, ನಿತೀಶ್ ರಾಣಾ, ರಿಂಕು ಸಿಂಗ್ ಮತ್ತು ಡ್ರೆ ರುಸ್ಸೇಲ್ ನಂತ ಬಲಿಷ್ಠ ಆಟಗಾರರು ಬಲ ತುಂಬಿಸುತ್ತಾರೆ. ಹರ್ಷಿತ್ ರಾಣಾ, ಡ್ರೆ ರುಸ್ಸೇಲ್, ಸುನಿಲ್ ನಾರೈನ್, ಸುಯಶ್ ಶರ್ಮ ಮತ್ತು ವರುಣ್ ಚಕ್ರವರ್ತಿ ಬೌಲಿಂಗ್ ನಲ್ಲಿ ಮಿಂಚಲಿದ್ದಾರೆ.
ಸನ್ ರೈಸರ್ಸ್ ಹೈದರಾಬಾದ್ ತಂಡ ಆಡಬಹುದಾದ 11 :
ಎನ್ ಜಗದೀಶನ್, ರಹಾಮುನುಲ್ಲಾಹ್ ಗುರ್ಬಾಜ್(ವಿಕೆಟ್ ಕೀಪರ್), ವೆಂಕಟೇಶ್ ಐಯ್ಯರ್, ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ಡ್ರೆ ರುಸ್ಸೇಲ್, ಸುನಿಲ್ ನರೈನ್, ಡೇವಿಡ್ ವೀಸ್, ಶ್ರಾದುಲ್ ಥಾಕುರ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಸುಯಶ್ ಶರ್ಮ, ಕುಲ್ವಾನ್ಥ್ ಕೇಜ್ಹ್ರೋಲಿಯ
ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಆಡಬಹುದಾದ ೧೧ :
ಐಡೆಂ ಮಾರ್ಕ್ರಮ್(ನಾಯಕ), ಹೆನ್ರಿಚ್ ಕ್ಲಾಸಿನ್(ವಿಕೆಟ್ ಕೀಪರ್), ಮಾಯಾಂಕ್ ಅಗರ್ವಾಲ್, ಅಭಿಷೇಕ್ ಶರ್ಮ, ರಾಹುಲ್ ತ್ರಿಪಾಠಿ, ಹ್ಯಾರಿ ಬ್ರೂಕ್, ಅಬ್ದುಲ್ ಸಮದ್, ಮಾಯಾಂಕ್ ಮಾರ್ಖಂಡೇ, ಭುವನೇಶ್ ಕುಮಾರ್, ಆಕೆಯಲ್ ಹೊಸೈನ್, ಟಿ ನಟರಾಜನ್, ಉಮ್ರಾನ್ ಮಲಿಕ್, ಮಾರ್ಕೋ ಯಾನ್ಸನ್
IPL 2023: SRH vs KKR match live : ಪಂದ್ಯ ಎಲ್ಲಿ, ಹೀಗೆ ನೋಡುವುದು?
ಇವತ್ತು ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ನ 47ನೆ ಪಂದ್ಯ ಸಂಜೆ 7.30 ಕ್ಕೆ ಹೈದೆರಾಬಾದ್ ನಲ್ಲಿ ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಸ್ಟೇಡಿಯಂ ನಲ್ಲಿ ನಡೆಯಲಿದೆ, ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನ ಹಲವು ಚಾನೆಲ್ ನಲ್ಲಿ ಟಿವಿ ಯಲ್ಲಿ ನೋಡಬಡಹುದು, ಜಿಯೋ ಸಿನಿಮಾ ಓಟಿಟಿ ಆಪ್ ನಲ್ಲಿ ಉಚಿತವಾಗಿ ನೋಡಬಹುದು.