IPL full form and Overview : ಐ.ಪಿ.ಎಲ್ ಎಂದರೇನು ಮತ್ತು ಇತಿಹಾಸ

IPL Full form – Indian Premier League: ಐ.ಪಿ.ಎಲ್ – ಇಂಡಿಯನ್ ಪ್ರೀಮಿಯರ್ ಲೀಗ್ IPL 2023

ipl 2023
source: Google

 

IPL History :
ಐಪಿಎಲ್- IPL : ಐಪಿಎಲ್ ಎಂದರೆ ಇಂಡಿಯನ್ ಪ್ರೀಮಿಯರ್ ಲೀಗ್. 2008 ರಲ್ಲಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಶುರುಮಾಡಿದರು. ಇದು 20 ಓವೆರ್ಸ್ಗಳ ಕ್ರಿಕೆಟ್ ಲೀಗ್, ಮೊದಲಿಗೆ ಐಪಿಲ್ಅನ್ನು 13 ಸೆಪ್ಟೆಂಬರ್ 2007 ರಲ್ಲಿ ಅನೌನ್ಸ್ ಮಾಡಿದರು, ಇದರ ಆರಂಭದ ಮೊದಲ ಆವೃತ್ತಿಯನ್ನು18 ಏಪ್ರಿಲ್ 2008 ರಲ್ಲಿ ಶುರುಮಾಡಿದರು, ಪ್ರತಿ ವರ್ಷ ಭಾರತದಲ್ಲಿ ಐಪಿಎಲ್ ನಡೆಸುತ್ತಾರೆ ಈ ಲೀಗ್ ನಲ್ಲಿ ವಿವಿಧ ಭಾರತೀಯ ರಾಜ್ಯಗಳ ವಿವಿಧ ರಾಜ್ಯಗಳ, ನಗರಗಳ ಹೆಸರಿನಲ್ಲಿ ತಂಡಗಳು ಆಡುತ್ತದೆ (ಈಗ IPL 2023 ರಲ್ಲಿ10 ತಂಡಗಳು ಆಡುತ್ತದೆ), ಈ ಲೀಗ್ ನಲ್ಲಿ ಮೊದಲ ಬಾರಿಗೆ ದೇಶೀಯ ಆಟಗಾರರು ಮಾತ್ರವಲ್ಲದೆ ಬೇರೆ ಬೇರೆ ದೇಶದ ವಿದೇಶಿ ಆಟಗಾರರನ್ನು ಸೇರಿಸಿಕೊಂಡು ಟಿ೨೦ ಪಂದ್ಯಗಳನ್ನು ಆಡಿಸಲಾಗುತ್ತದೆ. ಪ್ರತಿಯೊಂದು ತಂಡಕ್ಕೆ ಆದರೆ ಆದಂತ ಮಾಲೀಕರು, ಕೋಚ್ ಗಳು, ತರಬೇತುದಾರರು ಮತ್ತು ಸ್ಟ್ಯಾಫ್ಗಳು ಇರುತ್ತಾರೆ.

IPL Overview :

ಐಪಿಎಲ್ ಶುರುಮಾಡಿದ ಮೂಲ ಉದ್ದೇಶ, ಕ್ರಿಕೆಟ್ ನ ಇತಿಹಾಸದಲ್ಲಿ ಹೊಸ ರೀತಿಯ ೨೦ ಓವರ್ ಗಳ ಆಟವನ್ನು ಪರಿಚಯಿಸಿದರು ಮತ್ತು ವಿಶ್ವ ಕ್ರಿಕೆಟ್ ನಲ್ಲಿ ಇದು ಹೊಸ ಅಲೆ ಸೃಷ್ಟಿಸಿತು. ಈಗ ಐಪಿಎಲ್ ಒಂದು ವಿಶ್ವ ಕ್ರಿಕೆಟ್ ನಲ್ಲಿ ಎಲ್ಲಾ ಕ್ರಿಕೆಟ್ ಲೀಗ್ ಗಳ ಅಪ್ಪನಂತೆ ಬೆಳೆದು ನಂಬರ್ 1 ಸ್ಥಾನದಲ್ಲಿದೆ ಮತ್ತು ಪ್ರಪಂಚದ ಕ್ರಿಕೆಟ್ ಲೀಗ್ ಗಳಲ್ಲಿ ಅತಿ ಶ್ರೀಮಂತ ಹಾಗು ಅತಿ ಹೆಚ್ಚು ಫಾಲ್ಲೋರ್ಸ್ ಗಳನ್ನೂ ಹೊಂದಿದೆ.

IPL Teams & Players :

ಐಪಿಎಲ್ 2008 ರಲ್ಲಿ ಒಟ್ಟು 8 ತಂಡಗಳು ಒಳಗೊಂಡಿದ್ದವು, ೨೦೨೩ ರಲ್ಲಿ ೧೦ ತಂಡಗಳು ಭಾಗವಹಿಸುತ್ತವೆ, ಪ್ರತ್ಯೇಕ ತಂಡಗಳು ಕನಿಷ್ಠ 18 ಮತ್ತು ಗರಿಷ್ಟ 25 ಆಟಗಾರನ್ನು ಒಳಗೊಂಡಿರುತ್ತವೆ, ಇದರಲ್ಲಿ ಗರಿಷ್ಟ 8 ಆಟಗಾರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಬಹುದು. ತಂಡಗಳು ತಮಗೆ ಬೇಕಾದ ಬಲಿಷ್ಠ ಆಟಗಾರರನ್ನು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಖರೀದಿಸುತ್ತಾರೆ.
ಐಪಿಎಲ್ ನಲ್ಲಿ ಭಾಗವಹಿಸುವ ತಂಡಗಳ ಹೆಸರು ಇಂತಿವೆ(IPL 2023) :

1. ಚೆನ್ನೈ ಸೂಪರ್ ಕಿಂಗ್ಸ್ – Chennai Super Kings (CSK) – ಚೆನ್ನೈ
2. ರಾಯಲ್ ಚಾಲೆಂಜರ್ಸ್ ಬೆಂಗಳೂರು – Royal Challengers Bangalore (RCB) – ಬೆಂಗಳೂರು
3. ಮುಂಬೈ ಇಂಡಿಯನ್ಸ್ – Mumbai Indians (MI) – ಮುಂಬೈ
4. ಕೊಲ್ಕತ್ತಾ ನೈಟ್ ರೈಡರ್ಸ್ – Kolkata Knight Riders (KKR) – ಕೊಲ್ಕತ್ತಾ
5. ಸನ್ ರೈಸರ್ಸ್ ಹೈದರಾಬಾದ್ – Sunrisers Hyderabad (SRH) – ಹೈದರಾಬಾದ್
6. ದೆಹಲಿ ಕ್ಯಾಪಿಟಲ್ಸ್ – Delhi Capitals (DC) – ದೆಹಲಿ
7. ರಾಜಸ್ಥಾನ್ ರಾಯಲ್ಸ್ – Rajasthan Royals (RR) – ರಾಜಸ್ಥಾನ್
8. ಗುಜರಾತ್ ಟೈಟಾನ್ಸ್ – Gujrat Titans (GT) – ಗುಜರಾತ್
9. ಪಂಜಾಬ್ ಕಿಂಗ್ಸ್ – Punjab Kings (PBKS) – ಪಂಜಾಬ್
10. ಲಕ್ನೋ ಸೂಪರ್ ಜಯಂಟ್ಸ್ – Lucknow Super Giants (LSG) – ಲಕ್ನೋ

IPL Winners Till 2022 :

2008 ರಲ್ಲಿ ರಾಜಸ್ಥಾನ್ ರಾಯಲ್ಸ್
2009 ರಲ್ಲಿ ಡೆಕ್ಕನ್ ಚಾರ್ಜರ್ಸ್(ಹೈದೆರಾಬಾದ್)
2010 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್
2011 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್
2012 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್
2013 ರಲ್ಲಿ ಮುಂಬೈ ಇಂಡಿಯನ್ಸ್
2014 ರಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್
2015 ರಲ್ಲಿ ಮುಂಬೈ ಇಂಡಿಯನ್ಸ್
2016 ರಲ್ಲಿ ಸನ್ ರೈಸರ್ಸ್ ಹೈದರಾಬಾದ್
2017 ರಲ್ಲಿ ಮುಂಬೈ ಇಂಡಿಯನ್ಸ್
2018 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್
2019 ರಲ್ಲಿ ಮುಂಬೈ ಇಂಡಿಯನ್ಸ್
2020 ರಲ್ಲಿ ಮುಂಬೈ ಇಂಡಿಯನ್ಸ್
2021 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್
2022 ರಲ್ಲಿ ಗುಜರಾತ್ ಟೈಟಾನ್ಸ್
ಅತಿ ಹೆಚ್ಚು 5 ಬಾರಿ ಐಪಿಎಲ್ ಟ್ರೋಪಿ ಯನ್ನು ಮುಂಬೈ ಇಂಡಿಯನ್ಸ್ ಗೆದ್ದಿದೆ.

IPL Prize Money :

IPL 2023ರಲ್ಲಿ ಐಪಿಎಲ್ ಟ್ರೋಫಿ ಗೆದ್ದ(ವಿನ್ನರ್) ತಂಡಕ್ಕೆ 20 ಕೋಟಿ ರೂಪಾಯಿಗಳನ್ನು, ದ್ವಿತೀಯ ಸ್ಥಾನ ಪಡೆದ(ರನ್ನರ್ ಅಪ್) ತಂಡಕ್ಕೆ 13 ಕೋಟಿ ರೂಪಾಯಿಗಳನ್ನು ಮತ್ತು ಪ್ಲೇ ಆಫ್ ಅರ್ಹ ಗೊಂಡ ಫೈನಲ್ ಗೆ ತಲುಪದ ಎರಡು ತಂಡಕ್ಕೆ ಟಾಲಾ 7 ಕೋಟಿ ರೂಪಾಯಿಗಳನ್ನು ಬಹುಮಾನವಾಗಿ ಕೊಡಲಾಗುತ್ತದೆ. ಇದರ ಜೊತೆ ಪ್ರತಿ ಪಂದ್ಯಕ್ಕೂ ಹಾಗು ಟೂರ್ನಮೆಂಟ್ ನ ಕೊನೆಯಲ್ಲಿ ವಿಶೇಷ ಬಹುಮಾನಗಳನ್ನು ಆಟಗಾರರಿಗೆ ನೀಡಲಾಗುತ್ತದೆ.

IPL Most Run Scorer and Most Wicket taker :
virat kohli
Image Source: Google      Virat Kohli & Dwayne Bravo

 

ಅತಿ ಹೆಚ್ಚು ರನ್ ಗಳಿಸಿರುವ ಆಟಗಾರ ( 2022ರ ವರೆಗೂ ) : 216 ಪಂದ್ಯಗಳಲ್ಲಿ 6411 ರನ್ಸ್ ಗಳಿಸಿದ್ದಾರೆ
ಅತಿ ಹೆಚ್ಚಿ ವಿಕೆಟ್ ಗಳಿಸಿರುವ ಆಟಗಾರ ( 2022ರ ವರೆಗೂ ) : 161 ಪಂದ್ಯಗಳಲ್ಲಿ 183 ವಿಕೆಟ್ಗಳನ್ನು ಗಳಿಸಿದ್ದಾರೆ.

ಐಪಿಎಲ್ ನಲ್ಲಿ ಅತಿ ಹೆಚ್ಚು ತಂಡದ ಮೊತ್ತ : ರಾಯಲ್ ಚಾಲೆಂಜರ್ಸ್ ಬೆಂಗಳೂರು – 263
ಅತಿ ಕಡಿಮೆ ತಂಡದ ಮೊತ್ತ : ರಾಯಲ್ ಚಾಲೆಂಜರ್ಸ್ ಬೆಂಗಳೂರು – 49

When and Where to Watch IPL : IPL 2023 ಎಲ್ಲಿ ಮತ್ತು ಹೇಗೆ ವೀಕ್ಷಿಸುವುದು :

ಐಪಿಎಲ್ ಲೈವ್ – ಟಿವಿ ಯಲ್ಲಿ Star Sports ನಲ್ಲಿ ನೋಡಬಹುದು
ಆನ್ಲೈನ್ OTT ಪ್ಲಾಟ್ಫಾರ್ಮ್ JIO Cinema ದಲ್ಲಿ ಉಚಿತವಾಗಿ 12 ಭಾಷೆಗಳಲ್ಲಿ ನೋಡಬಹುದಾಗಿದೆ.
ಮೊದಲ ಪಂದ್ಯ ಪ್ರಾರಂಭದ ಸಮಯ : ಸಂಜೆ 7.30 ಕ್ಕೆ

 

Leave a Comment