ಐಪಿಎಲ್ ೨೦೨೩ ರ ಮ್ಯಾಚ್ ರಾಜಸ್ಥಾನ್ VS ದೆಹಲಿ ಮತ್ತು ಮುಂಬೈ VS ಚೆನ್ನೈ ತಂಡಗಳ ಎರಡು ದೊಡ್ಡ ಮ್ಯಾಚ್ ನಂತರ ಪಾಯಿಂಟ್ಸ್ ಟೇಬಲ್ನಲ್ಲಿ ದೊಡ್ಡ ಬದಲಾವಣೆಯಾಗಿದೆ. ಭರ್ಜರಿ ಗೆಲುವು ಕಂಡ ರಾಜಸ್ಥಾನ್ ತಂಡ ನಂಬರ್ 1 ಸ್ಥಾನವನ್ನು ಅಲಂಕರಿಸಿದೆ.
IPL 2023 ಅಂಕ ಪಟ್ಟಿ- Points table :
ಶನಿವಾರ ನಡೆದ ಐಪಿಎಲ್ ೨೦೨೩ ರ ಮ್ಯಾಚ್ ನ ನಂತರ ಅಂಕ ಪಟ್ಟಿಯಲ್ಲಿ ದೊಡ್ಡ ಬದಲಾವಣೆ ಆಗಿದೆ, ನೆನ್ನೆ (08 ಏಪ್ರಿಲ್ 22) ಎರಡು ಪಂದ್ಯಗಳು ನಡೆಯಿತು. ಮೊದಲು ನಡೆದ ಪಂದ್ಯದದಲ್ಲಿ ಸಂಜು ಸ್ಯಾಮ್ಸನ್ ಉಪಸ್ಥಿತಿಯ ರಾಜಸ್ಥಾನ್ ರಾಯಲ್ಸ್ ತಂಡ, ಡೇವಿಡ್ ವಾರ್ನರ್ ನಾಯಕತ್ವದ ದೆಹಲಿ ಕ್ಯಾಪಿಟಲ್ಸ್ ತಂಡವನ್ನು ನಿರಾಯಾಸವಾಗಿ 57 ಅಂತರದಿಂದ ಸೋಲಿಸಿತು. IPL 2023 ರಲ್ಲಿ ಇದು ದೆಹಲಿ ಕ್ಯಾಪಿಟಲ್ಸ್ ನ ಮೂರನೇ ಸೋಲು ಇದಾಗಿದೆ. ಇದರ ನಂತರದ ಎರಡನೇ ಮ್ಯಾಚ್ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಜೊತೆ ಸೆಣೆಸಾಡಿ 7 ವಿಕೆಟ್ಗಳ ಅಂತರದ ಸೋಲನುಭವಿಸಿತು.
ನಂಬರ್ ೧ ಸ್ಥಾನದಲ್ಲಿ ರಾಜಸ್ಥಾನ್ ರಾಯಲ್ಸ್!
ರಾಜಸ್ಥಾನ್ ರಾಯಲ್ಸ್ ತಂಡ ನೆನ್ನೆ ನಡೆದ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯದಲ್ಲಿ ದೊಡ್ಡ ಗೆಲುವು ಕಂಡಿದೆ, ಇದರ ಜೊತೆ ಐಪಿಎಲ್ ೨೦೨೩ ಟೂರ್ನಿಯ ಅಂಕ ಪಟ್ಟಿಯಲ್ಲಿ ನಂಬರ್ 1 ಸ್ಥಾನವನ್ನು ಅಲಂಕರಿಸಿ ಮುನ್ನುಗ್ಗುತ್ತಿದೆ. ರಾಜಸ್ಥಾನ್ ರಾಯಲ್ಸ್ ತಂಡ ಇದುವರೆಗೂ ಮೂರು ಪಂದ್ಯಗಳನ್ನು ಆಡಿದ್ದು ಮೊದಲ ಪಂದ್ಯ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದಿತ್ತು, ಆದರೆ ಎರಡನೇ ಪಂದ್ಯ ಪಂಜಾಬ್ ಮೇಲೆ ಸೋತಿತ್ತು ಹಾಗು ನೆನ್ನೆ ನಡೆದ ಮ್ಯಾಚ್ನಲ್ಲಿ ಗೆದ್ದು ಮೊದಲನೇ ಸ್ಥಾನಕ್ಕೆ ಜಿಗಿದಿದೆ. ಸದ್ಯಕ್ಕೆ 3 ಮ್ಯಾಚ್ ನಿಂದ 2 ಮ್ಯಾಚ್ ಗೆದ್ದು, 1 ಮ್ಯಾಚ್ ಸೋತು 4 ಅಂಕ ಗಳಿಸಿದೆ, ನೆಟ್ ರನ್ ರೇಟ್ +2.067ಗೆ ಏರಿಸಿಕೊಂಡಿದೆ. ಮುಂದಿನ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಜೊತೆ ಸೆಣೆಸಾಡಲಿದೆ.
ಚೆನ್ನೈ ಸೂಪರ್ ಕಿಂಗ್ಸ್ 4ನೇ ಸ್ಥಾನದಲ್ಲಿ ನೆಮ್ಮದಿಯಾಗಿದೆ.
ಹೌದು, ಚೆನ್ನೈ ಸೂಪರ್ ಕಿಂಗ್ಸ್ ತಂಡ ನೆನ್ನೆ ನಡೆದ ಮ್ಯಾಚ್ನ ನಂತರ ೪ ನೇ ಸ್ಥಾನಕ್ಕೆ ಜಿಗಿದಿದೆ. ತನ್ನ ಮೊದಲ ಪಂದ್ಯದಲ್ಲಿ ಗುಜರಾತ್ ವಿರುದ್ಧ ಪಂದ್ಯದಲ್ಲಿ ಸೋತಿದ್ದ ಚೆನ್ನೈ, ೨ ನೇ ಪಂದ್ಯ ಲಕ್ನೋ ಸೂಪರ್ ಜಯಂಟ್ಸ್ ಮತ್ತು ೩ ನೇ ಪಂದ್ಯ ಮುಂಬೈ ಇಂಡಿಯನ್ಸ್ ವಿರುದ್ದದ ಪಂದ್ಯಗಳಲ್ಲಿ ಸತತ ೨ ಗೆಲುವು ಪಡೆಯಿತು. ಇದರಿಂದ IPL 2023 ಯಲ್ಲಿ 3 ಮ್ಯಾಚುಗಳಿಂದ 2 ಗೆದ್ದು, 4 ಅಂಕಗಳನ್ನು ಪಡೆದಿದೆ, ನೆಟ್ ರನ್ ರೇಟ್ +0.356 ಇರುವುದರಿಂದ ಚೆನ್ನೈ 4ನೇ ಸ್ಥಾನದಲ್ಲಿದೆ. ಇನ್ನು ಮೂರು ಪಂದ್ಯಗಳಿಂದ 2 ಪಂದ್ಯಗಳನ್ನ ಗೆದ್ದ ಲಕ್ನೋ ಸೂಪರ್ ಜಾಯಿಂಟ್ಸ್, +1.358 ಸರಾಸರಿಯಿಂದ 2ನೇ ಸ್ಥಾನದಲ್ಲಿದೆ, ಇನ್ನು ಟೂರ್ನಿ ಯಲ್ಲಿ ಉತ್ತಮ ಪ್ರದರ್ಶನ ಕೊಡುತ್ತಿರುವ ಗುಜರಾತ್ ಟೈಟಾನ್ಸ್ ತಂಡ ಆಡಿರುವ 2 ಪಂದ್ಯದಲ್ಲಿ 2 ನ್ನು ಗೆದ್ದು +0.700 ಸರಾಸರಿಯಿಂದ 3ನೇ ಸ್ಥಾನವನ್ನು ಅಲಂಕರಿಸಿದೆ.
ಪಂಜಾಬ್, ಬೆಂಗಳೂರು, ಮುಂಬೈ, ದೆಹಲಿ, ಕೊಲ್ಕತ್ತಾ ಮತ್ತು ಹೈದೆರಾಬಾದ್ ತಂಡಗಳ ಸ್ಥಾನಗಳು :
5 ನೇ ಸ್ಥಾನದಲ್ಲಿ ಪಂಜಾಬ್ ತಂಡ ಆಡಿರುವ ೨ ಪಂದ್ಯದಲ್ಲಿ ಎರಡನ್ನು ಗೆದ್ದು 5 ನೇ ಸ್ಥಾನದಲ್ಲಿದೆ, ತಲಾ 2 ಪಂದ್ಯಗಲ್ಲಿ 1 ಪಂದ್ಯ ಗೆದ್ದು 6 ಮತ್ತು 7ನೇ ಸ್ಥಾನದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ರ್ಸ್ ಬೆಂಗಳೂರು ತಂಡಗಳು ಅಲಂಕರಿಸಿದೆ. ಇನ್ನು ಟೂರ್ನಿಯಲ್ಲಿ ಆಡಿರುವ ಎಲ್ಲವ ಪಂದ್ಯಗಳಲ್ಲೂ ಸೋತಿರುವ ಮುಂಬೈ ಇಂಡಿಯನ್ಸ್, ದೆಹಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು 8, 9 ಮತ್ತು 10 ನೇ ಸ್ಥಾನದಲ್ಲಿದೆ.
ಇನ್ನು ಈ ವರ್ಷವೂ ಸಹ 10 ತಂಡಗಳು ಆಡುತ್ತಿವೆ, ಎ ಮತ್ತು ಬಿ ಗ್ರೂಪ್ ಗಳಾಗಿ ವಿಂಗಡಿಸಿ ಆಡಲಿವೆ. ಐಪಿಎಲ್ ೨೦೨೩ರ ಪಂದ್ಯಗಳು ಹಳೆ ರೀತಿ ನಿಯಮಗಳೊಂದಿಗೆ ಕೆಲವು ಹೊಸ ಮಾದರಿಯಲ್ಲಿ ಆಡಲಿವೆ. ಈ ವರ್ಷ ತಂಡಗಳು ತಮ್ಮ ಮನೆ ಮತ್ತು ಹೊರಗೆ ಪಂದ್ಯಗಳನ್ನು ಆಡಲಿವೆ. ಇನ್ನು ಹೊಸ ರೂಲ್ಸ್ ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಎಂಬ ಹೊಸ ರೂಲ್ಸ್ ಪರಿಚಯಿಸಿದೆ. 10 ತಂಡಗಳಲ್ಲಿ ಪಾಯಿಂಟ್ಸ್ ಮತ್ತು ರನ್ ರೇಟ್ ಗಳ ಅಂತರದ ಮೇರೆಗೆ ಮೊದಲ 4 ಸ್ಥಾನ ಪಡೆದ ತಂಡಗಳು ಫೈನಲ್ಗೆ ಪ್ರವೇಶಿಸಲಿವೆ ಮತ್ತು ಉಳಿದ 6 ತಂಡಗಳಿಗೆ ನಿರಾಸೆಯಾಗಲಿವೆ. ಈ ಬಾರಿಯ ಐಪಿಎಲ್ 2023 ನಲ್ಲಿ ಯಾರು ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿಯಲಿದ್ದಾರೆ ಎಂದು ಕಾದು ನೋಡಬೇಕಿದೆ.