IPL 2023: ಕಳೆದ ವರ್ಷ 2022, ಡಿಸೆಂಬರ್ 30ನೇ ತಾರೀಕು ರಂದು ಹೊಸ ವರ್ಷದ ಸರ್ಪ್ರೈಸ್ ಕೊಡಲು ತಮ್ಮ ಮರ್ಸಿಡಿಸ್ ಬೆಂಜ್ ನಲ್ಲಿ ದೆಹಲಿಯಿಂದ ಡೆಹ್ರಾಡೂನ್ ನ ತಮ್ಮ ಮನೆಗೆ ತೆರಳುತ್ತಿದ್ದರು, 25ರ ವಯಸ್ಸಿನ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರಿಷಬ್ ಪಂತ್ ರವರು ಡ್ರೈವಿಂಗ್ ಮಾಡುತ್ತಿದ್ದರು. ಇದ್ದಕಿದ್ದಂತೆ ಮೊಹಮ್ಮದ್ಪುರ್ ಜಾಟ್ ಬಳಿ ಪಂತ್ ರ ಕಾರ್ ಡಿವೈಡರ್ ಗೆ ಬಡಿದು ಅಪಘಾತವಾಯಿತು, ಈ ಅಪಘಾತದ ಪರಿಣಾಮ ರಿಷಬ್ ಪಂತ್ ಗೆ ಗಂಭೀರ ಗಾಯವಾಗಿತ್ತು, ಅಧೃಷ್ಠವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು ಮತ್ತು ಸಾವನ್ನೇ ಗೆದ್ದಿದ್ದರು. ಅದೇ ರೀತಿ ಒಬ್ಬ ವೆಸ್ಟ್ ಇಂಡೀಸ್ ಸ್ಟಾರ್ ಆಟಗಾರ ನಿಕೋಲಸ್ ಪೂರನ್ ಸಹ ಇದೆ ರೀತಿ ರಸ್ತೆಯ ಭೀಕರ ಅಪಗಾತಕ್ಕೆ ಒಳಗಾಗಿದ್ದರು ಮತ್ತು ತಮ್ಮ ಸಾವನ್ನು ಗೆದ್ದಿದ್ದರು.

IPL 2023 Details : ಹೌದು, ವೆಸ್ಟ್ ಇಂಡೀಸ್ ಆಟಗಾರ ನಿಕೋಲಸ್ ಪೂರನ್ ಸಹ ರಸ್ತೆ ಅಪಘಾತಕ್ಕೆ ಸಿಲುಕ್ಕಿದರು. ಕಳೆದ ವರ್ಷ ಭಾರತದ ವಿಕೆಟ್ ಕೀಪರ್ ಆಟಗಾರ ರಿಷಬ್ ಪಂತ್ ರ ಕಾರು ಅಪಘಾತಕ್ಕೆ ಒಳಗಾಗಿತ್ತು, ಅಧೃಷ್ಠವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಅದೇ ರೀತಿ ನಿಕೋಲಸ್ ಪೂರನ್ ತಮ್ಮ ಸಾವನ್ನು ಗೆದ್ದು ತಮ್ಮ ಕ್ರಿಕೆಟ್ ಪಯಣ ಮುಂದುವರಿಸಿದ್ದಾರೆ.
ಅಧೃಷ್ಠವಶಾತ್ ಪ್ರಾಣಾಪಾಯದಿಂದ ಪಾರಾದ ನಿಕೋಲಸ್ :
ನಿಕೋಲಸ್ ಗೆ ಕೇವಲ 19 ವರ್ಷ ವಯಸ್ಸು, ಈ ಘಟನೆ ನಡೆದದ್ದು 2016ನೇ ಇಸವಿ, ಪೂರನ್ ರವರು ಆಗ ತಾನೇ ತಮ್ಮ ಪ್ರಾಕ್ಟೀಸ್ ಮುಗಿಸಿ ತಮ್ಮ ಕಾರ್ ನಲ್ಲಿ ಮನೆಗೆ ಹಿಂತಿರುಗಿದ್ದರು. ಆದರೆ ದುರದೃಷ್ಟವಶಾತ್ ಹಿಂದಿನಿಂದ ಬಂದ ಕಾರು ಪೂರನ್ ರ ಕಾರಿಗೆ ಡಿಕ್ಕಿ ಹೊಡೆದು ಮರಳಿನ ದಿಬ್ಬಕ್ಕೆ ಹಾರಿ ರಸ್ತೆಗೆ ಬಂದಿದೆ, ಅದೇ ವೇಳೆ ಬಂದ ಮತ್ತೊಂದು ಕಾರು ನಿಕೋಲಸ್ ಇದ್ದ ಕಾರಿನ ಹಿಂಬದಿಗೆ ಡಿಕ್ಕಿ ಹೊಡದಿದೆ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು, ಆದರೆ ಈ ಅಪಘಾತದಿಂದ ನಿಕೋಲಸ್ ರ ಕಾಲಿನ ಮೂಲೆ ಮುರಿದಿತ್ತು ಇದರಿಂದ ಧೀರ್ಘಾವದಿಯ ಕಾಲ ತಾವು ವೀಲ್ ಚೇರ್ ನಲ್ಲಿ ಸಮಯ ಕಳೆಯುವ ಹಾಗೆ ಮಾಡಿತು. ಮತ್ತೊಮ್ಮೆ ತಮ್ಮ ಕ್ರಿಕೆಟ್ ಜೀವನದ ಮೈದಾನಕ್ಕೆ ಕಾಲಿಡಲು ಒಂದೂವರೆ ವರ್ಷವೇ ಬೇಕಾಯಿತು. ಇಷ್ಟು ಕಷ್ಟ ಅನುಭವಿಸಿದರು ತಮ್ಮ ಕಷ್ಟಕ್ಕೆ ಇಂದು ಒಳ್ಳೆಯ ಪ್ರತಿಫಲ ಸಿಕ್ಕಿದೆ. ತಮ್ಮ ಕ್ರಿಕೆಟ್ ಬದುಕಿದೆ ಕಾಲಿಟ್ಟ ನಂತರ ಅದ್ಭುತ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದರು. ಅದರಂತೆ ಇಂದು ಐಪಿಎಲ್ ನಲ್ಲಿ ಅತಿ ಹೆಚ್ಚು ಬೇಡಿಕೆಯಿರುವ ಆಟಗಾರ.
27 ಕೋಟಿ, ಕೇವಲ ನಾಲ್ಕು ತಿಂಗಳಲ್ಲಿ!
ವೆಸ್ಟ್ ಇಂಡೀಸ್ ನ ನಿಕೋಲಸ್ ಪೂರನ್ ಸಹ ರಿಷಬ್ ಪಂತ್ ರಂತೆ ವಿಕೆಟ್ ಕೀಪರ್ ಬ್ಯಾಟ್ಸ್ ಮ್ಯಾನ್, ತಮ್ಮ ಒಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ, ಈ ವಿಡಿಯೋದಲ್ಲಿ ತಾವು ಅಪಘಾತವಾದಾಗಿನಿಂದ ತಮ್ಮ ಸಾದಾರಣ ಜೀವನಕ್ಕೆ ಮರಳುವವರೆಗೆ ತೋರಿಸಿದ್ದಾರೆ. ಈ ಅಪಘಾತ ದಿಂದ ಪೂರನ್ ಅವರ ಕ್ರಿಕೆಟ್ ಜೀವನ ಕೊನೆಗೊಂಡಿತು ಎಂದು ಕೆಲವರು ಹೇಳುತ್ತಿದ್ದರು. ಆದರೆ ಈ ಕೆರಿಬಿಯನ್ ಆಟಗಾರ ಅದೆಲ್ಲ ಸುಳ್ಳು ಎಂದು ನಿರೂಪಿಸಿ ಆಡುವವರ ಬಾಯನ್ನು ಮುಚ್ಚಿಸಿಬಿಟ್ಟರು. ಮತ್ತೊಮ್ಮೆ ಅತಿ ಬಲಿಷ್ಠವಾಗಿ ಹಿಂತಿರುಗಿ ತಮ್ಮ ಕ್ರಿಕೆಟ್ ಜೀವನಕ್ಕೆ ಮರಳಿದರು. ಹೀಗೆ ಎಲ್ಲರ ಹುಬ್ಬೇರಿಸುವಂತೆ ಕೇವಲ 4 ತಿಂಗಳಲ್ಲಿ 27 ಕೋಟಿ ಸಂಪಾದಿಸಿದ್ದಾರೆ.
https://www.instagram.com/reel/CndT_DGJNJs/?utm_source=ig_web_button_share_sheet
ಪಟ್ಟು ಬಿಡದ ಲಕ್ನೋ ಸೂಪರ್ ಜಾಯಿಂಟ್ಸ್ 16 ಕೋಟಿ ಹಣವನ್ನು ಸುರಿದಿತ್ತು:
ಪಂಜಾಬ್ ಗೆ ಆಡುತ್ತಿದ್ದ ನಿಕೋಲಸ್ ಪೂರನ್, ಕಳೆದ ಸೀಸನ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಗೆ ಆಡುತ್ತಿದ್ದರು, 2022 ರಲ್ಲಿ ನಿಕೋಲಸ್ ಪೂರನ್ ಗೆ 10.75 ಕೋಟಿಗೆ SRH ಖರೀದಿಸಿತ್ತು, ಆದರೆ 2023ರ ಐಪಿಎಲ್ ಸೀಸನ್ ನಲ್ಲಿ (IPL 2023) ಲಕ್ನೋ ಸೂಪರ್ ಜಾಯಿಂಟ್ಸ್ ಪಟ್ಟು ಬಿಡದೆ ಬಿಡ್ಡಿಂಗ್ನಲ್ಲಿ ನಿಕೋಲಸ್ ಪೂರನ್ ರನ್ನು ಬರೋಬ್ಬರಿ 16 ಕೋಟಿಗೆ ಖರೀದಿಸಿತ್ತು, ಇದರಿನ ನಿಕೋಲಸ್ ಪೂರನ್ ಸತತ ಎರಡು ಬಾರಿ(IPL 2022, IPL 2023) 10ಕ್ಕಿಂತ ಹೆಚ್ಚು ಕೋಟಿ ಗಳಿಸಿದ್ದಾರೆ. ಅಂದರೆ ೪ ತಿಂಗಳಲ್ಲಿ ಬರೋಬ್ಬರಿ 27ಕೋಟಿ ಗೆ ಹತ್ತಿರ ಸಂಭಾವನೆ ಪಡೆದಿದ್ದರೆ. ಇಂದು ನಡೆಯುವ ಪಂದ್ಯದಲ್ಲಿ ತಮ್ಮ ಹಾಲಿ ತಂಡ ಹೈದೆರಾಬಾದ್ ವಿರುದ್ಧ ಕಣಕ್ಕಿಳಿಯಲಿದ್ದಾರೆ.
ಮಾಹಿತಿ ಸೂಪರ್👌..