Indian Premier league: RR vs PBKS Live Stream: ರಾಜಸ್ಥಾನ್ ರಾಯಲ್ಸ್ ಇಂದು ಪಂಜಾಬ್ ವಿರುದ್ಧ ಗುವಾಹಟಿಯಲ್ಲಿ ಸೆಣೆಸಾಡಲಿದೆ, ಆಡುವ ೧೧ ಮತ್ತು ಲೈವ್ ಸ್ಟ್ರೀಮಿಂಗ್ ಮಾಹಿತಿ.

Indian Premier league: RR vs PBKS Live Stream: ರಾಜಸ್ಥಾನ್ ರಾಯಲ್ಸ್ ಇಂದು ಪಂಜಾಬ್ ವಿರುದ್ಧ ಗುವಾಹಟಿಯಲ್ಲಿ ಸೆಣೆಸಾಡಲಿದೆ, ಆಡುವ ೧೧ ಮತ್ತು ಲೈವ್ ಸ್ಟ್ರೀಮಿಂಗ್ ಮಾಹಿತಿ.

IPL 2023 ಇಂದು (ಏಪ್ರಿಲ್ 5) ನಡೆಯಲಿರುವ ಟೂರ್ನಿಯ 8ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಪಂಜಾಬ್ ಕಿಂಗ್ಸ್ ಅನ್ನು ಎದುರಿಸಲಿದೆ. ಈ ಪಂದ್ಯ ಗುವಾಹಟಿಯಲ್ಲಿರುವ ಬರ್ಸಪರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದ ನೇರಪ್ರಸಾರದ ಮಾಹಿತಿ ಮತ್ತು ಆಡಬಹುದಾದ 11ರ ಆಟಗಾರರ ಮಾಹಿತಿ ತಿಳಿಯೋಣ.

RR vs PBKS
Image Source: SportsTiger               RR vs PBKS

Indian Premier League 2023, RR vs PBKS:

IPLನ 8 ನೇ ಪಂದ್ಯ ಇಂದು (ಏಪ್ರಿಲ್ ೮) ಗುವಾಹಟಿಯ ಬರ್ಸಪರ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಪರಸ್ಪರ ಸೆಣೆಸಾಡಲಿವೆ. ಎರಡು ತಂಡಗಳು ಆಡಿದ ಮೊದಲ ಪಂದ್ಯದಲ್ಲಿ ಗೆಲುವನ್ನು ಪಡೆದು ಟೂರ್ನಿಯಲ್ಲಿ ಶುಭಾರಂಭ ಮಾಡಿವೆ. ಹಾಗಾಗಿ ಈ ಪಂದ್ಯ ಯಾರು ಗೆಲ್ಲುತ್ತಾರೆಂಬ ಕುತೂಹಲ ಹುಟ್ಟುಹಾಕಿದೆ. ಉಭಯ ತಂಡಗಳ ಆಡಬಹುದಾದ 11ರ ಆಟಗಾರ ಪಟ್ಟಿ ಮತ್ತು ನೇರಪ್ರಸಾರ ಎಲ್ಲಿ ನೋಡಬಹುದು ಎಂದು ತಿಳಿಯೋಣ.

ರಾಜಸ್ಥಾನ್ ಮತ್ತು ಪಂಜಾಬ್ ತಂಡಗಳು ಎರಡು ಸರಿಸಮನಾಗಿ ಆಡಲಿವೆ:

Indian Premier League 2023: ರಾಜಸ್ಥಾನ್ ರಾಯಲ್ಸ್ ಆಡಿದ ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ಹೈದೆರಾಬಾದ್ ವಿರುದ್ಧ 72 ರನ್ಗಳ ಭರ್ಜರಿ ಗೆಲುವನ್ನು ಸಾಧಿಸಿತ್ತು. ಟೂರ್ನಿ ಯಲ್ಲಿ ಶುಭಾರಂಭ ಮಾಡಿದ ರಾಜಸ್ಥಾನ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಬೊಂಬಾಟ್ ಪ್ರದರ್ಶನ ನೀಡಿತ್ತು. ಮತ್ತೊಂದು ಕಡೆ ಪಂಜಾಬ್ ಕಿಂಗ್ಸ್ ಸಹ ತಮ್ಮ ಭರ್ಜರಿ ಬ್ಯಾಟಿಂಗ್ ಮತ್ತು ಬೌಲಿಂಗ್ ನಿಂದ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ದದ ಪಂದ್ಯದಲ್ಲಿ 7 ರನ್ಸ್ ಗಳ(DLS method) ಜಯಗಳಿಸಿತ್ತು. ರಾಜಸ್ಥಾನದ ಪರ ಬ್ಯಾಟಿಂಗ್ ನಲ್ಲಿ ಬಲಿಷ್ಠ ತಂಡ ಹೊಂದಿದ್ದು ಕಳೆದ ಪಂದ್ಯದ ಶ್ರೇಷ್ಠ ಆಟಗಾರ ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಪಡಿಕ್ಕಲ್ ಮತ್ತು ಮಧ್ಯಮ ಕ್ರಮಾಂಕದಲ್ಲಿ ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್ ಆಡಲಿದ್ದಾರೆ, ಬೌಲಿಂಗ್ ನಲ್ಲಿ ಟ್ರೆಂಟ್ ಬೋಲ್ಟ್, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಹಾಲ್ ಅದ್ಬುತ ಪ್ರದರ್ಶನ ನೀಡಬಲ್ಲರು. ಪಂಜಾಬ್ ತಂಡವು ಸಹ ತಮ್ಮ ಪಾಳಯದಲ್ಲಿ ಪ್ರಭಾಸಿಮ್ರನ್, ಶಿಖರ್ ಧವನ್, ರಾಜಪಕ್ಷ, ಸ್ಯಾಮ್ ಕರನ್, ಜಿತೇಶ್ ಶರ್ಮ ಅದ್ಬುತ ಆಟಗಾರರನ್ನು ಒಳಗೊಂಡಿದೆ, ಇನ್ನು ಬೌಲಿಂಗ್ ನಲ್ಲಿ ಅರ್ಶದೀಪ್, ನಾಥನ್ ಎಲ್ಲಿಸ್, ರಾಹುಲ್ ಚಾಹರ್ ರನ್ನು ಹೊಂದಿದೆ. ರಾಜಸ್ಥಾನ್ ತಂಡಕ್ಕೆ ಸಂಜು ಸ್ಯಾಮ್ಸನ್ ನಾಯಕರಾಗಿ ಮತ್ತು ಪಂಜಾಬ್ ತಂಡಕ್ಕೆ ಶಿಖರ್ ಧವನ್ ಅವರು ನಾಯಕರಾಗಿ ಮುಖಾಮುಖಿಯಾಗಲಿದ್ದಾರೆ.

ರಾಜಸ್ಥಾನ್ ತಂಡದ ಆಡುವ 11 :
ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (WK/C), ದೇವದತ್ ಪಡಿಕ್ಕಲ್, ರಿಯಾನ್ ಪರಾಗ್, ಶಿಮ್ರಾನ್ ಹೆಮ್ಮೆಯರ್, ರವಿಚಂದ್ರನ್ ಅಶ್ವಿನ್, ಯುಜೇಂದ್ರ ಚಹಾಲ್ ಜೇಸನ್ ಹೋಲ್ಕರ್, ಟ್ರೆಂಟ್ ಬೌಲ್ಟ್, ಕೆಎಂ ಆಸಿಫ್.

ಪಂಜಾಬ್ ತಂಡದ ಆಡುವ 11 :
ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಶಿಖರ್ ಧವನ್ (ನಾಯಕ), ಭಾನುಕಾ ರಾಜಪಕ್ರ, ಸಿಕಂದರ್ ರಜಾ, ಜಿತೇಶ್ ಶರ್ಮಾ, ಸ್ಯಾಮ್ ಕರನ್, ಶಾರುಖ್ ಖಾನ್, ನಾಥನ್ ಎಲ್ಸಿಸ್, ಅರ್ಶ್‌ದೀಪ್ ಸಿಂಗ್, ರಾಹುಲ್ ಚಾಹರ್, ಹರ್‌ಪ್ರೀತ್‌ ಬ್ರಾರ್.

RR vs PBKS Live ಎಲ್ಲಿ ಮತ್ತು ಹೀಗೆ ನೋಡಬಹುದು:

ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ IPL 2023 ರ 8ನೇ ಪಂದ್ಯ ಇಂದು ಗುವಾಹಟಿಯ ಬರ್ಸಪರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಇಂದು ಸಂಜೆ 7.30 ಕ್ಕೆ ಪಂದ್ಯ ಆರಂಭವಾಗಲಿದೆ, ಇದರ ನೇರ ಪ್ರಸಾರ ಸ್ಟಾರ್ ಸ್ಪೋರ್ಟ್ಸ್ ನ ವಿವಿಧ ಚಾನೆಲ್ಗಳಲ್ಲಿ ನೋಡಬಹುದು ಮತ್ತು ಲೈವ್ ಸ್ಟ್ರೀಮಿಂಗ್ ಅನ್ನು ‘ಜಿಯೋ ಸಿನಿಮಾ’ ಅಪ್ಲಿಕೇಶನ್ ನಲ್ಲಿ 10 ಭಾಷೆಗಳಲ್ಲಿ ಉಚಿತವಾಗಿ ವೀಕ್ಷಿಸಬಹುದು.

 

Leave a Comment