Indian Premier league : IPL ಗುಜರಾತ್ ಟೈಟಾನ್ಸ್ VS ದೆಹಲಿ ಬೌಲರ್ಸ್
ಮಂಗಳವಾರ IPL (Indian premier league) ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ದೆಹಲಿ ಕ್ಯಾಪಿಟಲ್ಸ್ ತಂಡ ತವರಿನಲ್ಲಿ ಸೆಣಸಾಡಲಿದೆ, ಈ ಬಾರಿ ತಮ್ಮ ಬೌಲರ್ಗಳ ಬಗ್ಗೆ ಹೆಚ್ಚು ವಿಶ್ವಾಸ ಇಟ್ಟುಕೊಂಡಿರುವ ದೆಹಲಿ ತಂಡ, ತಮ್ಮ ಬೌಲರ್ ಗಳು ಉತ್ತಮ ಪ್ರದರ್ಶನ ನೀಡುತ್ತಾರೆ ಎಂಬ ಭರವಸೆಯಲ್ಲಿದೆ.

ಖಲೀಲ್, ಸಕಾರಿಯಾ ಹಾಗು ಮಾರ್ಷ್ರ ಮೇಲೆ ಹೆಚ್ಚಿದ ನಿರೀಕ್ಷೆ!
ಇಂದು (ಮಂಗಳವಾರ) Indian premier league ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡ ತಮ್ಮ ತವರಿನಲ್ಲಿ ಹಾಲಿ IPL ಚಾಂಪಿಯನ್ ಗುಜರಾತ್ ಟೈಟಾನ್ಸ್ ವಿರುದ್ಧ ಸೆಣಸಲಿದೆ. ದೆಹಲಿ ಕ್ಯಾಪಿಟಲ್ ಆಡಿದ ಮೊದಲ ಪಂದ್ಯದಲ್ಲಿ ಲಕ್ನೋ ಸೂಪರ್ ಜಾಯಿಂಟ್ಸ್ ವಿರುದ್ಧ 50 ರನ್ಸ್ ಗಳ ಸೋಲುಂಡಿತ್ತು, ಆದರೆ ಮತ್ತೊಂದು ಕಡೆ ತಮ್ಮ ಮೊದಲ ಪಂದ್ಯದಲ್ಲೇ ಗುಜರಾತ್ ಟೈಟಾನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದು ತಮ್ಮ ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿದೆ. ಈ ಬಾರಿ ಬೌಲರ್ಗಳ ಮೇಲೆ ಹೆಚ್ಚಿನ ನೀರಿಕ್ಷೆ ಇಟ್ಟುಕೊಂಡಿದೆ ದೆಹಲಿ ಕ್ಯಾಪಿಟಲ್ಸ್.
ಬೌಲರ್ಸ್ ಗಳ ಪರ್ಫಾರ್ಮೆನ್ಸ್ :
ಲಕ್ನೋ ಸೂಪರ್ ಜಾಯಿಂಟ್ಸ್ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ದೆಹಲಿ ಬೌಲರ್ಸ್ ಗಳು ಒಳ್ಳೆಯ ಪ್ರದರ್ಶನ ನೀಡಲಿಲ್ಲ, ಅತಿ ಹೆಚ್ಚು ನೀರಾಸೆ ಮೂಡಿಸಿದ್ದರು ಹೆನ್ರಿಚ್ ನೋಕಿಯೋ ಅವರ ಅನುಪಸ್ಥಿತಿ ಇಲ್ಲದೆ ಬೌಲಿಂಗ್ ಮಾಡಿದ ದೆಹಲಿ ಹೆಚ್ಚಾಗಿ ಲಕ್ನೋ ವಿರುದ್ಧ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಮುಕೇಶ್ ಕುಮಾರ್ ಮತ್ತು ಚೇತನ್ ಸಕಾರಿಯಾ ಅವರು ಉತ್ತಮ ಬೌಲಿಂಗ್ ಮಾಡುತ್ತಾರೆ ಎಂಬ ನಿರೀಕ್ಷೆ ಮೊದಲ ಪಂದ್ಯದಲ್ಲಿ ಸಾಧ್ಯವಾಗಲಿಲ್ಲ. ಆದರೆ ಖಲೀಲ್ ಅಹ್ಮದ್ ಅವರು ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರಾದರೂ, ಫೀಲ್ಡಿಂಗ್ ನಲ್ಲಿ ಒಳ್ಳೆಯ ಪ್ರದರ್ಶನ ನೀಡಲಿಲ್ಲ. ಲಕ್ನೋ ತಂಡದ ಮೇಯೆರ್ಸ್ ಅವರ ಕ್ಯಾಚ್ ಬಿಟ್ಟರು, ಇದು ಲಕ್ನೋ ತಂಡದ ಗೆಲುವಿಗೆ ಒಂದು ಕಾರಣವಾಯಿತು. ಹಾಗಾಗಿ ಶುಭ್ಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯರಂತಹ ಉತ್ತಮ ಬ್ಯಾಟ್ಸ್ ಮನ್ ಗಳನ್ನೂ ತಮ್ಮ ಬೌಲಿಂಗ್ ನಿಂದ ಹೇಗೆ ಕಟ್ಟಿ ಹಾಕುತ್ತಾರೆ ಎಂದು ಕಾದುನೋಡಬೇಕಿದೆ. ಈ ಪಂದ್ಯ ದಲ್ಲಿ ಹೆನ್ರಿಚ್ ನೋಕಿಯೋ ಮತ್ತು ಲುಂಗಿ ಎನ್ಗಿಡಿ ಲಭ್ಯವಿರುತ್ತಾರೆ ಎಂಬ ನಂಬಿಕೆ ಇರುವುದರಿಂದ, ತಂಡದ ಆಡಳಿತ ಹೇಗೆ ಆಡುವ ಹನ್ನೊಂದು ಆಟಗಾರರ ಆಯ್ಕೆ ಹೇಗೆ ಮಾಡುತ್ತದೆ ಎಂದು ನೋಡಬೇಕಿದೆ. ಇನ್ನು ತಂಡದಲ್ಲಿ ಬ್ಯಾಟಿಂಗ್ ನಲ್ಲಿ ಪ್ರಿಥ್ವಿ ಶಾ, ಡೇವಿಡ್ ವಾರ್ನರ್, ಸರ್ಫಾರಾಜ್ ಖಾನ್ ರಿಂದ ಒಳ್ಳೆಯ ಇನ್ನಿಂಗ್ಸ್ ಮತ್ತು ಉತ್ತಮ ಪ್ರದರ್ಶನವನ್ನು ನೀರಿಕ್ಷಿಸುತ್ತಾರೆ. ಇನ್ನು ಆಸ್ಟ್ರೇಲಿಯಾ ಆಟಗಾರ ಮಿಚೆಲ್ ಮಾರ್ಷ್ ರವರ ಉತ್ತಮ ಆಲ್ರೌಂಡ್ ಪ್ರದರ್ಶನ ತಂಡಕ್ಕೆ ಉತ್ತಮ ವೇಗ ತಂದು ಕೊಡಲಿದೆ.
ಪಾಂಡ್ಯ, ಗಿಲ್ ಮತ್ತು ರಶೀದ್ ತಂಡದ ನಂಬಿಕಸ್ತರು!
ಚೆನ್ನೈ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಶುಭ್ಮನ್ ಗಿಲ್ ಭರ್ಜರಿ ಆಕ್ರಮಣಕಾರಿ ಆಟ ಪ್ರದರ್ಶಿಸಿದರು, ಮುಂದಿನ ಪಂದ್ಯದಲ್ಲೂ ಇದೆ ಹೊರಪಿನಿಂದ ಆಟ ಮುಂದುವರಿಸುತ್ತಾರೆ ಎಂಬ ನಂಬಿಕೆ ತಂಡಕ್ಕಿದೆ, ಇನ್ನುಳಿದಂತೆ ಹಾರ್ದಿಕ್ ಪಾಂಡ್ಯ, ವೃದ್ಧಿಮಾನ್ ಸಾಹ ಅವರಿಂದ ತಂಡವು ಉತ್ತಮ ಪ್ರದರ್ಶನ ನಿರೀಕ್ಷಿಸುತ್ತಿದೆ. ರಶೀದ್ ಖಾನ್ ರ ಆಲ್ರೌಂಡ್ ಪ್ರದರ್ಶನ ತಂಡಕ್ಕೆ ಹೆಚ್ಚಿನ ಬಲ ಸಿಕ್ಕಿದೆ. ಇನ್ನು ಬೌಲಿಂಗ್ ನಲ್ಲಿ ಅನುಭವಿ ಮೊಹಮ್ಮದ್ ಶಮಿ ಜೊತೆ ಹಾರ್ದಿಕ್ ಮತ್ತು ಅಲ್ಜಾರಿ ಜೋಸೆಫ್ ರ ಬೌಲಿಂಗ್ ಮೇಲೆ ತಂಡ ಅವಲಂಬಿಸಿದೆ. ಮೊದಲ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಗಾಯಗೊಂಡು ಪಂದ್ಯಗಳಿಂದ ಹೊರ ಉಳಿದಿದ್ದಾರೆ, ಅದರಿಂದ ಇವರ ಬದಲಿ ಆಟಗಾರನನ್ನು ತಂಡದ 11ರಲ್ಲಿ ಬದಲಿಸಬೇಕಿದೆ, ತಂಡವನ್ನು ನೋಡಿದರೇ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಇಂದು ನಡೆಯಲಿರುವ ದೆಹಲಿ ವಿರುದ್ದದ ಪಂದ್ಯ ಗುಜರಾತ್ ಗೆ ಸುಲಭವೆನಿಸುವುದಿಲ್ಲ.
ಮ್ಯಾಚ್ ವೀಕ್ಷಣೆ – ನೇರ ಪ್ರಸಾರ : ಸಂಜೆ 7.30 ಕ್ಕೆ , ಸ್ಟಾರ್ ಸ್ಪೋರ್ಟ್ಸ್ ಚಾನೆಲ್ಸ್, ಜಿಯೋ ಸಿನಿಮಾ.