IPL 2023: RCB vs CSK : ಆರ್ಸಿಬಿ ಗೆ ಮತ್ತೊಂದು ಸೋಲು! ಮ್ಯಾಕ್ಸ್ವೆಲ್ ಮತ್ತು ಫಾಫ್ ಹೋರಾಟ ವ್ಯರ್ಥ!

RCB vs CSK IPL 2023(ಐಪಿಎಲ್ ೨೦೨೩) : ನೆನ್ನೆ ನಡೆದ (17 ಏಪ್ರಿಲ್ ೨೦೨೩) ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆದ ಪಂದ್ಯದಲ್ಲಿ ಚೆನ್ನೈ ತಂಡ ಗೆಲುವು ಸಾಧಿಸಿದೆ.

(IPL 2023) ಐಪಿಎಲ್ ೨೦೨೩: ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ಬ್ಯಾಟಿಂಗ್, ಆರ್ಸಿಬಿ ಬೌಲರ್ಸ್ ಗಳ ಪರದಾಟ!

ipl 2023
Image source: Jagranjosh        maxwell & dhoni

 

ಐಪಿಎಲ್ ೨೦೨೩ ರ ಆವೃತಿಯ 24 ನೇ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಸಂಜೆ 7.30 ಕ್ಕೆ ನಡೆಯಿತು. ಸೌಥೆರ್ನ್ ಡರ್ಬಿ ಎಂದೇ ಹೆಸರುವಾಸಿ ಆಗಿದ್ದ ಪಂದ್ಯವು ವೀಕ್ಷಕರಿಗೆ ರಸದೌತಣ ನೀಡುವಲ್ಲಿ ಯಶಸ್ವಿಯಾಯಿತು. ಐಪಿಎಲ್ ನ ಈ ಹೈ ವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಲು ಆಯ್ದುಕೊಂಡರು. ಈ ಪಂದ್ಯದಲ್ಲಿ ಬೆಂಗಳೂರಿನ ನಾಯಕತ್ವ ಫಾಫ್ ಡು ಪ್ಲೆಸಿಸ್ ಜವಾಬ್ದಾರಿ ವಹಿಸಿದ್ದರೆ, ಎಂ.ಸ್.ಧೋನಿ ಚೆನ್ನೈ ತಂಡಕ್ಕೆ ನಾಯಕನಾಗಿ ಕಣಕ್ಕಿಳಿದರು. ಆರ್ಸಿಬಿ ತಂಡ ತಮ್ಮ ಆಡಿದ ಕೊನೆ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲುವು ಕಂಡಿದ್ದ ಈ ಪಂದ್ಯವನ್ನು ಗೆಲ್ಲಲ್ಲು ಬಯಸಿತ್ತು. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಡಿದ ಕೊನೆಯ ಪಂದ್ಯ ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ ಸೋತಿತ್ತು. ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಈ ಪಂದ್ಯದ ಗೆಲುವು ಅನಿವಾರ್ಯವಾಗಿತ್ತು.
ಚೆನ್ನೈ ಪರ ಬ್ಯಾಟಿಂಗ್ ಮಾಡಲು ಬಂದ ರುತುರಾಜ್ ಗೈಕ್ವಾಡ್ ಮತ್ತು ಡೆವನ್ ಕಾನ್ವೆ ಮೊದಲ ಎರಡು ಓವರ್ ಗಳಲ್ಲಿ ನಿಧಾನಗತಿಯಲ್ಲಿ ಆಡಿದರು, ಮೂರನೇ ಓವರ್ ಮಾಡಲು ಬಂದ ಸಿರಾಜ್ ಅವರು ರುತುರಾಜ್ ಗೆ ಶಾಕ್ ನೀಡಿದರು, ಸಿರಾಜ್ ಮಾಡಿದ ಬೌಲಿಂಗ್ ನಲ್ಲಿ ಪಾರ್ನೆಲ್ ಗೆ ಕ್ಯಾಚ್ ಕೊಟ್ಟು ಔಟಾದರು. ಇದರ ನಂತರ ನಡೆದಿದ್ದು ಚೆನ್ನೈ ಬ್ಯಾಟ್ಸ್ ಮೆನ್ ಗಳ ಅಬ್ಬರ, ಅಜಿಂಕ್ಯ ರಹಾನೆ ಮತ್ತು ಡೆವನ್ ಕಾನ್ವೆ ಆರ್ಸಿಬಿ ಬೌಲರ್ ಗಳನ್ನೂ ಬೆಂಡೆತ್ತಿದರು. ಪ್ರತಿ ಓವರ್ ಗೆ 10 ಕ್ಕೂ ಹೆಚ್ಚು ಸರಾಸರಿಯಲ್ಲಿ ಬ್ಯಾಟಿಂಗ್ ಪ್ರದರ್ಶಿಸಿದರು. ಅಜಿಂಕ್ಯ ರಹಾನೆ ಅವರು 20 ಬಾಲ್ ಗಳಲ್ಲಿ 37 ರನ್ ಗಳಿಸಿದ್ದಾಗ 10 ನೇ ಓವರ್ನಲ್ಲಿ ಹಸರಂಗ ಗೆ ಔಟಾದರು, ಮೊತ್ತೊಂದು ಕಡೆ ಕಾನ್ವೆ ಅವರು ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದರು, ಇವರೊಂದಿಗೆ ಜೊತೆಗೂಡಿದ ಶಿವಂ ದುಬೆ ಸಹ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ತಂಡದ ಮೊತ್ತ 170 ಆಗಿದ್ದಾಗ 16 ನೇ ಓವರ್ನಲ್ಲಿ ಹರ್ಷಲ್ ಪಟೇಲ್ ಗೆ ಔಟ್ದಾದರೂ, ತಾವು ಆಡಿದ 45 ಬಾಲ್ ಗಳಲ್ಲಿ 83 ಬಾರಿಸಿದರು ಇದರಲ್ಲಿ 6 ಸಿಕ್ಸ್ ಮತ್ತು 6 ಬೌಂಡರಿ ಒಳಗೊಂಡಿತ್ತು. ಅದರ ಮುಂದಿನ ಓವರ್ ನಲ್ಲಿ ಶಿವಂ ದುಬೆ ಅವರು ಪಾರ್ನೆಲ್ ಬಾಲ್ನಲ್ಲಿ ಸಿರಾಜ್ ಗೆ ಕ್ಯಾಚ್ ಕೊಟ್ಟು ಔಟಾದರು. ಆಡಿದ 27 ಬಾಲ್ ಗಳಲ್ಲಿ 52 ರನ್ ಗಳಿಸಿದರು. ಇದರಲ್ಲಿ 5 ಸಿಕ್ಸ್ ಮತ್ತು 2 ಬೌಂಡರಿ ಬಾರಿಸಿದ್ದರು. ಈ ಇಬ್ಬರು ಆರ್ಸಿಬಿ ಬೌಲರ್ಸ್ ಗಳಿಗೆ ಮನಬಂದಂತೆ ಥಳಿಸಿದರು. ಇವರಿಬ್ಬರ ಅರ್ಧ ಶತಕದ ಸಹಾಯದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅತಿ ದೊಡ್ಡ ಮೊತ್ತ ಕಲೆ ಹಾಕಲು ಸಹಾಯವಾಯಿತು, ನಂತರ ಬಂದ ರಾಯುಡು, ಮೊಯಿನ್, ಜಡೇಜಾ ತಂಡಕ್ಕೆ ಮತ್ತಷ್ಟು ರನ್ ಸೇರಿಸಿದರು, ಕೊನೆಗೆ ಬಂದ ಧೋನಿ ಅವರು 1 ರನ್ ಗಳಿಸಿದರು. ಹೀಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ 20 ಓವರ್ಗಳ ಅಂತ್ಯಕ್ಕೆ 6 ವಿಕೆಟ್ ಗಳ ನಷ್ಟಕ್ಕೆ 226 ರನ್ ಗಳ ದೊಡ್ಡ ಮೊತ್ತ ಗಳಿಸಲು ಶಕ್ತವಾಯಿತು. ಬೆಂಗಳೂರು ತಂಡದ ಬೌಲರ್ಗಳು ಅತಿ ಹೆಚ್ಚು ರನ್ ಗಳನ್ನೂ ನೀಡಿ ಸಂಕಷ್ಟಕ್ಕೆ ಸಿಲುಕಿದರು. ಆದರೆ ಸಿರಾಜ್ ಮಾತ್ರ ಮಾಡಿದ 4 ಓವರ್ನಲ್ಲಿ 30 ರನ್ ನೀಡಿ 1 ವಿಕೆಟ್ ಕಿತ್ತು ಯಶಸ್ವಿ ಬೌಲರ್ ಎನಿಸಿಕೊಂಡರು. ಡೆಲ್ಲಿ ವಿರುದ್ಧ ಪಂದ್ಯದಲ್ಲಿ ಕನ್ನಡಿಗ ವಿಜಯ್ ಕುಮಾರ್ ವೈಶಾಕ್ ಅವರು ಮೂರು ವಿಕೆಟ್ ಕಿತ್ತು ಭರ್ಜರಿ ಪ್ರಧರ್ಶನ ನೀಡಿದ್ದರು, ಆದರೆ ಈ ಪಂದ್ಯದಲ್ಲಿ ಮಾಡಿದ 4 ಓವರ್ನಲ್ಲಿ ಬರೋಬ್ಬರಿ 62 ರನ್ ನೀಡಿ, ದುಬಾರಿ ಬೌಲರ್ ಎನಿಸಿಕೊಂಡರು.

Read More : https://iplgang.com/ipl-2023-27crore-in-just-4-months-rishab-nicholas/

ಐಪಿಎಲ್ ೨೦೨೩ ಆರ್ಸಿಬಿಗೆ ಆರಂಭ ಆಘಾತ! ಫಾಫ್ ಮತ್ತು ಮ್ಯಾಕ್ಸಿ ಬೊಂಬಾಟ್ ಬ್ಯಾಟಿಂಗ್, ಕೊನೆಯಲ್ಲಿ ನಿರಾಸೆ!

ipl 2023
Image Souce: amarujala        CSK Team

226 ರನ್ ಗಳ ಬೃಹತ್ ಮೊತ್ತ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಮೊದಲ ಓವರ್ನಲ್ಲೇ ಆಘಾತ, 1 ಬೌಂಡರಿ ಗಳಿಸಿ ಆಡುತ್ತಿದ್ದ ವಿರಾಟ್ ಕೊಹ್ಲಿಗೆ, ಆಕಾಶ್ ಸಿಂಗ್ ಹಾಕಿದ ಬಾಲ್ ತಮ್ಮ ಕಾಲಿನ ಪ್ಯಾಡ್ ಗೆ ತಾಗಿ ವಿಕೆಟ್ ಗೆ ಬಡಿದು ಆತಂಕಕಾರಿಯಾಗಿ ಔಟ್ ಆಗಿ ಹೊರನಡೆದರು. ನಂತರ ಬಂದ ಮಹಿಪಾಲ್ ಲೋಮರೋರ್ ಸಹ ಶೂನ್ಯಕ್ಕೆ ತುಷಾರ್ ದೇಶಪಾಂಡೆಗೆ ಔಟಾದರು. ಇದಾದ ನಂತರ ನಡೆದದ್ದು ಅದ್ಭುತ ಎನ್ನಬಹುದು. ನಾಯಕ ಫಾಫ್ ಡು ಪ್ಲೆಸಿಸ್ ಜೊತೆಗೂಡಿ ಗ್ಲೆನ್ ಮ್ಯಾಕ್ಸ್ವೆಲ್ ಅಮೋಘ ಬ್ಯಾಟಿಂಗ್ ಮಾಡಿದರು, ಚೆನ್ನೈ ಬೌಲರ್ಗಳನ್ನು ಮನ ಬಂದಂತೆ ಥಳಿಸಿದರು. ಇವರಿಬ್ಬರ ಬ್ಯಾಟಿಂಗ್ ಅಬ್ಬರಕ್ಕೆ ಚೆನ್ನೈ ತಂಡದ ಬೌಲಿಂಗ್ ಅಕ್ಷರಸಹ ನಡುಗಿತ್ತು. ಇವರ ಜೊತೆ ಆಟ ನೋಡಿದ ಆರ್ಸಿಬಿ ತಂಡದ ಅಭಿಮಾನಿಗಳಿಗೆ ಪಂದ್ಯ ಗೆಲ್ಲುವ ಭರವಸೆ ಮೂಡಿತ್ತು. ಇಡೀ ಚಿನ್ನಸ್ವಾಮಿ ಸ್ಟೇಡಿಯಂ ಹರ್ಷೋದ್ಘಾರದಲ್ಲಿ ಮುಳುಗಿತ್ತು, 12 ಓವರ್ ಆಗುವ ಹೊತ್ತಿಗೆ ಬರೋಬ್ಬರಿ 140 ರನ್ ಗಡಿ ದಾಟಿತ್ತು ಬೆಂಗಳೂರು ತಂಡ, ಆದರೆ 12.1 ಓವರ್ನಲ್ಲಿ ತೀಕ್ಷಣ ಬೌಲಿಂಗ್ ನಲ್ಲಿ ಧೋನಿಗೆ ಕ್ಯಾಚ್ ಕೊಟ್ಟು ಮ್ಯಾಕ್ಸ್ವೆಲ್ ಔಟಾದರು, ಆಡಿದ 36 ಬಾಲ್ಲ್ಗಳಲ್ಲಿ 211 ಬ್ಯಾಟಿಂಗ್ ಸರಾಸರಿಯಲ್ಲಿ ಬರೋಬ್ಬರಿ 76 ರನ್ (ಅರ್ಧಶತಕ) ಚಚ್ಚಿದರು ಮ್ಯಾಕ್ಸ್ವೆಲ್, 8 ಸಿಕ್ಸ್ ಮತ್ತು 3 ಬೌಂಡರಿ ಬಾರಿಸಿದ್ದರು. ಇದಾದ ಬಳಿಕ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ ಮುಂದಿನ ಮೊಯಿನ್ ಅಲಿ ಓವರ್ನಲ್ಲಿ ಧೋನಿ ಗೆ ಕ್ಯಾಚ್ ಕೊಟ್ಟು ಔಟಾದರು, ಫಾಫ್ ಆಡಿದ 33 ಬಾಲ್ಲ್ಗಳಲ್ಲಿ 62 ರನ್ ಗಳಿಸಿದರು. ಇದರಲ್ಲಿ 4 ಸಿಕ್ಸ್ ಮತ್ತು 5 ಬೌಂಡರಿ ಒಳಗೊಂಡಿತ್ತು. ಅದರೊಂದಿಗೆ ಆರ್ಸಿಬಿ ತಂಡದ ಮೊತ್ತ 14 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 159 ಗಳಿಸಿತ್ತು. ಆರ್ಸಿಬಿ ತಂಡಕ್ಕೆ ಇನ್ನು ಗೆಲ್ಲುವ ಅವಕಾಶವಿತ್ತು, ನಂಬಿಕೆ ಕಳೆದುಕೊಳ್ಳದ ತಂಡ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರ ಬ್ಯಾಟಿಂಗ್ ಮೇಲೆ ನಂಬಿಕೆ ಇಟ್ಟಿತ್ತು, ಈ ನಂಬಿಕೆ ಉಳಿಸಲು ದಿನೇಶ್ ಕಾರ್ತಿಕ್ ಅವರು ತಮ್ಮ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. 14 ಬಾಲ್ಸ್ ನಲ್ಲಿ, 1 ಸಿಕ್ಸ್ ಸಮೇತ 3 ಬೌಂಡರಿ ಜೊತೆಗೆ 28 ರನ್ ಗಳಿಸಿದರು. ಆದರೆ ದಿನೇಶ್ ಕಾರ್ತಿಕ್ ತುಷಾರ್ ದೇಶಪಾಂಡೆ ಬೌಲಿಂಗ್ ನಲ್ಲಿ ತೀಕ್ಷಣ ಅವರಿಗೆ ಕ್ಯಾಚ್ ಕೊಟ್ಟು ಹೊರನಡೆದರು. ಇನ್ನು ಕೊನೆಗೆ ಬಂದ ಇಂಪ್ಯಾಕ್ಟ್ ಪ್ಲೇಯರ್ ಸುಯಶ್ ಪ್ರಭುದೇಸ್ಸಾಯಿ 2 ಸಿಕ್ಸ್ ಬಾರಿಸಿದರಾದರು ಹೆಚ್ಚು ಪರಿಣಾಮಕಾರಿಯಾಗಲಿಲ್ಲ, ಶಾಬಾಜ್ ಅಹಮದ್, ವೇನ್ ಪಾರ್ನೆಲ್ ಹೆಚ್ಚಿನ ರನ್ ಕೊಡುಗೆ ನೀಡದೆ ಔಟಾಗಿ ಹೊರನಡೆದರು, ಕೊನೆಯ ಓವರ್ನಲ್ಲಿ ಗೆಲ್ಲಲು ಬೆಂಗಳೂರಿಗೆ 6 ಬಾಲ್ಸ್ ಗಳಲ್ಲಿ19 ರನ್ ಗಳು ಬೇಕಿರುತ್ತದೆ, ಅತ್ಯುತ್ತಮ ಬೌಲಿಂಗ್ ಮಾಡುತ್ತಿದ್ದ ಪತಿರನ , ಬ್ಯಾಟಿಂಗ್ ಮಾಡುತ್ತಿದ್ದ ಸುಯಶ್ ಮತ್ತು ವನಿಂದು ಹಸರಂಗ 19 ರನ್ ಗಳಿಸಲು ಆಗಲಿಲ್ಲ. ಇದರಿಂದ ಬೆಂಗಳೂರು ತಂಡ 8 ರನ್ ಗಳ ಅಂತರ ದಿಂದ ಸೋತಿತ್ತು. ಇನ್ನು ಕೊನೆಯ 3 ಓವರ್ ಅದ್ಭುತವಾಗಿ ಬೌಲಿಂಗ್ ಮಡಿದ ಚೆನ್ನೈ ತಂಡ ಪಂದ್ಯ ಗೆದ್ದು ಸಂಭ್ರಮದಲ್ಲಿತ್ತು.

IPL Points table – ಪಾಯಿಂಟ್ಸ್ ಟೇಬಲ್ ನಲ್ಲಿ ಚೆನ್ನೈ ತಂಡ ಮೇಲಕ್ಕೆ ಜಿಗಿತ , ಬೆಂಗಳೂರು 7 ಸ್ಥಾನ  :

ನೆನ್ನೆ ನಡೆದ IPL ೨೦೨೩ ರ 24 ನೇ ಪಂದ್ಯದಲ್ಲಿ ಬೆಂಗಳೂರು ತಂಡ ಸೋತ ನಂತರ ಆಡಿದ 5 ಪಂದ್ಯಗಳಲ್ಲಿ 2 ಗೆದ್ದು, 3 ಪಂದ್ಯ ಗಳನ್ನು ಸೋತಿದೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ನೆನ್ನೆ ಪಂದ್ಯ ಗೆದ್ದ ಬಳಿಕ 5 ಪಂದ್ಯಗಳಲ್ಲಿ , 3 ಗೆದ್ದು, 2 ಪಂದ್ಯ ಗಳನ್ನು ಸೋತಿದೆ. ಇದರಿಂದ ಚನ್ನೈ ತಂಡ ಪಾಯಿಂಟ್ಸ್ ಟೇಬಲ್ ನಲ್ಲಿ 6 ನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಜಿಗಿದಿದೆ, ಬೆಂಗಳೂರು ತಂಡ 7 ಸ್ಥಾನದಲ್ಲೆ ಉಳಿದುಕೊಂಡಿದೆ. ಇನ್ನು IPL 2023 ಪಾಯಿಂಟ್ಸ್ ಟೇಬಲ್ನಲ್ಲಿ ಮೊದಲನೇ ಸ್ಥಾನ ರಾಜಸ್ಥಾನ್ ರಾಯಲ್ಸ್ ಭದ್ರ ಪಡಿಸಿಕೊಂಡಿದೆ, ಎರಡನೇ ಸ್ಥಾನ, ಲಕ್ನೋ ಸೂಪರ್ ಜಯಂಟ್ಸ್, ನಾಲ್ಕನೇ ಸ್ಥಾನ ಗುಜರಾತ್ ಟೈಟಾನ್ಸ್, ಐದನೇ ಸ್ಥಾನ ಪಂಜಾಬ್ ಕಿಂಗ್ಸ್ , ಆರನೇ ಸ್ಥಾನ ಕೊಲ್ಕತ್ತಾ ನೈಟ್ ರೈಡರ್ಸ್, 8,9 ಮತ್ತು 10 ಕ್ರಮಾಂಕದಲ್ಲಿ ಮುಂಬೈ ಇಂಡಿಯನ್ಸ್, ಸನ್ ರಿಸೆರ್ಸ್ ಹೈದೆರಾಬಾದ್ ಮತ್ತು ದೆಹಲಿ ಕ್ಯಾಪಿಟಲ್ಸ್ ತಂಡಗಳು ಇವೆ.

 IPL points table
Image source: Google               IPL points table

 

IPL 2023 25th Match SRH vs MI Live streaming : ಸನ್ ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ :

ಈ ಐಪಿಎಲ್ ಆವೃತ್ತಿಯ 25ನೇ ಪಂದ್ಯ ಇಂದು (ಏಪ್ರಿಲ್ 18, 2023) ಸನ್ ರೈಸರ್ಸ್ ಹೈದೆರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಹೈದರಾಬಾದಿನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಸಂಜೆ 7.30 ಕ್ಕೆ ನಡೆಯಲಿದೆ. ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನ ಹಲವು ಟಿವಿ ಚಾನಲ್ ನಲ್ಲಿ ನೇರಪ್ರಸಾರ ನೋಡಬಹುದು. ಓಟಿಟಿಯಲ್ಲಿ ಜಿಯೋ ಸಿನಿಮಾ ಆಪ್ ನಲ್ಲಿ 10 ಭಾಷೆಗಳಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ.

 

 

 

Leave a Comment