ಐಪಿಎಲ್ ೨೦೨೩(IPL 2023): RCB vs LSG ರೋಚಕ ಪಂದ್ಯದಲ್ಲಿ ಲಕ್ನೋಗೆ ಗೆಲುವು! ಈ ಐಪಿಎಲ್ ನ ಅತಿ ವೇಗದ ಅರ್ಧ ಶತಕ ಬಾರಿಸಿದ ನಿಕೋಲಸ್!

ನೆನ್ನೆ (10 ಏಪ್ರಿಲ್ 2023), ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜಯಂಟ್ಸ್ 15ನೇ ಪಂದ್ಯ ಎಂ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆಯಿತು. ಈ ಪಂದ್ಯ ಐಪಿಎಲ್ ಅಭಿಮಾನಿಗಳಿಗೆ ರನ್ ಗಳ ರಸದೌತಣ ನೀಡಿತ್ತು. ಈ ರೋಚಕ ಪಂದ್ಯ ಕೊನೆ ಓವರ್ ನ ಕೊನೆ ಬಾಲ್ ತನಕ ಕುತೂಹಲ ಕೆರಳಿಸಿತ್ತು. ಆದರೆ ಈ ಬಲಿಷ್ಠ ತಂಡಗಳ ಕಾಳಗದಲ್ಲಿ ಕೊನೆಗೆ ಗೆದ್ದಿದ್ದು ಲಕ್ನೋ ಸೂಪರ್ ಜಯಂಟ್ಸ್.

IPL 2023: RCB vs LSG : ಸೂಪರ್ ಆಗಿತ್ತು ಕೆ.ಜಿ.ಫ್(ಕೊಹ್ಲಿ, ಫಾಫ್, ಮ್ಯಾಕ್ಸ್ವೆಲ್) ಆಟ!

rcb
Image source: Outlook india

 

ಟಾಸ್ ಗೆದ್ದು ಫೀಲ್ಡಿಂಗ್ ಮಾಡಲು ನಿರ್ಧರಿಸಿದ ಕೆ.ಎಲ್.ರಾಹುಲ್ ನಾಯಕತ್ವದ ಲಕ್ನೋ ತಂಡ, ಬೆಂಗಳೂರು ತಂಡಕ್ಕೆ ಬ್ಯಾಟಿಂಗ್ ಮಾಡಲು ಆಹ್ವಾನಿಸುತ್ತೆ. ಇನ್ನಿಂಗ್ಸ್ ಶುರುಮಾಡಿದ ಆರ್ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಪವರ್ ಪ್ಲೇ ನಲ್ಲಿ ಸಮೊಯೋಚಿತ ಆಟ ದೊಡ್ಡ ಮೊತ್ತ ಕಲೆಹಾಕುವಲ್ಲಿ ಸಹಕಾರಿಯಾಯಿತು. ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಬೆಂಗಳೂರು ತಂಡದ ಮೊದಲ ೩ ಬ್ಯಾಟ್ಸ್ ಮ್ಯಾನ್ ಗಳು (ಕೆ.ಜಿ.ಫ್) ಕೊಹ್ಲಿ, ಫಾಫ್ ಮತ್ತು ಮ್ಯಾಕ್ಸ್ವೆಲ್, ತಲಾ ಅರ್ಧ ಶತಕ ಬಾರಿಸಿದರು. ಇದು ಐಪಿಎಲ್ ನಲ್ಲೆ ಮೊದಲ ಬಾರಿ, ಮೊದಲ ಮೂರು ಬ್ಯಾಟ್ಸ್ಮನ್ಗಳು ತಲಾ ಅರ್ಧ ಶತಕ ಬಾರಿಸಿರುವುದು. ಇವರ ಬ್ಯಾಟಿಂಗ್ ಪ್ರದರ್ಶನಕ್ಕೆ ಲಕ್ನೋ ಬೌಲರ್ಸ್ಗಳು ತಲೆದೂಗಿದರು. ವಿರಾಟ್ 44 ಬಾಲ್ ನಲ್ಲಿ ತಲಾ 4 ಸಿಕ್ಸ್ ಮತ್ತು 4 ಫೋರ್ ಒಳಗೊಂಡಂತೆ 61 ರನ್ ಗಳಿಸಿದರು, ನಂತರ ಅಮಿತ್ ಮಿಶ್ರರ ಬೌಲಿಂಗ್ ನಲ್ಲಿ ಮಾರ್ಕಸ್ ಸ್ಟೋಯಿನಿಸ್ ಕ್ಯಾಚ್ ಕೊಟ್ಟು ಔಟಾದರು. ನಂತರ ಬಂದ ಮ್ಯಾಕ್ಸ್ವೆಲ್ ರವರು ಫಾಫ್ ಡು ಪ್ಲೆಸಿಸ್ ಜೊತೆಗೂಡಿ ಭರ್ಜರಿ ಆಟ ಮುಂದುವರಿಸಿದರು, ಮ್ಯಾಕ್ಸ್ವೆಲ್ 29 ಬಾಲ್ ನಲ್ಲಿ ಬರೋಬ್ಬರಿ 59 ರನ್ ಗಳಿಸಿದರು, ಇದರಲ್ಲಿ 3 ಫೋರ್ ಮತ್ತು 6 ಸಿಕ್ಸ್ ಒಳಗೊಂಡಿತ್ತು, ಕೊನೆಯ ಓವರ್ನಲ್ಲಿ ಮ್ಯಾಕ್ಸ್ವೆಲ್ ರವರು ಮಾರ್ಕ್ವುಡ್ ಗೆ ವಿಕೆಟ್ ಕೊಟ್ಟು ಔಟಾದರು. ಕೊನೆವರೆಗೂ ಎಚ್ಚರವಾಗಿ ಮತ್ತು ಅತಿ ಅವಶ್ಯಕವಾಗಿ ಆಟ ಆಡಿದ ನಾಯಕ ಫಾಫ್ ಡು ಪ್ಲೆಸಿಸ್ ಅತ್ಯಮೂಲ್ಯ ಆಡಿದ 46 ಬಾಲ್ ಗಳಲ್ಲಿ 79 ರನ್ ಗಳಿಸಿದರು, ಇದರಲ್ಲಿ ತಲಾ 5 ಸಿಕ್ಸ್ ಮತ್ತು 5 ಫೋರ್ ಬಾರಿಸಿದ್ದರು, ಇವುಗಳ ಪೈಕಿ ಓದು ಸಿಕ್ಸ್ ಬರೋಬ್ಬರಿ 114 ಮೀಟರ್ ದೂರ ಬಾರಿಸಿದರು, ಇದು ಈ ಐಪಿಎಲ್ ನ ಇಲ್ಲಿಯವರೆಗಿನ ಅತಿ ದೊಡ್ಡ ಸಿಕ್ಸ್. ಈ ಮೂವರ ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದ ಆರ್.ಸಿ.ಬಿ ತಂಡ 212 ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಯಿತು.

ಲಕ್ನೋ ತಂಡಕ್ಕೆ ಆರಂಭದಲ್ಲಿ ಆಘಾತ, ನಂತರ ನಡೆದಿದ್ದು ಪವಾಡ!

ಬೆಂಗಳೂರು ತಂಡದ ದೊಡ್ಡ ಮೊತ್ತವನ್ನು ಬೆನ್ನಟ್ಟಲು ಬಂದ ಲಕ್ನೋ ತಂಡದ ಬ್ಯಾಟ್ಸ್ ಮ್ಯಾನ್ ಗಳಿಗೆ ದೊಡ್ಡ ಆಘಾತ ಕಾದಿತ್ತು. ಲಕ್ನೋ ತಂಡದ ಸ್ಟಾರ್ ಆಟಗಾರ ಕೈಲ್ ಮೇಯೆರ್ಸ್ ಕಳೆದ ಎರಡು ಪಂದ್ಯಗಳಲ್ಲಿ ಭರ್ಜರಿ ರನ್ ಗಳಿಸಿದ್ದರು, ಆದರೆ ಈ ಆಟದಲ್ಲಿ ಸಿರಾಜ್ ಬೌಲಿಂಗ್ ದಾಳಿಗೆ ಮೊದಲ ಓವರ್ನಲ್ಲೇ ತಮ್ಮ ವಿಕೆಟ್ ಒಪ್ಪಿಸಿ ಶೂನ್ಯಕ್ಕೆ ಔಟಾದರು. ನಿಧಾನಗತಿಯ ಬ್ಯಾಟಿಂಗ್ ಆಡಿದ ಲಕ್ನೋ ಬ್ಯಾಟ್ಸ್ ಮ್ಯಾನ್ ಗಳು, ಇದೆ ಮೊದಲ ಬಾರಿ ಟೂರ್ನಿಯಲ್ಲಿ ಬೆಂಗಳೂರು ತಂಡಕ್ಕೆ ಆಡುತ್ತಿರುವ ವೆನ್ ಪಾರ್ನೆಲ್ ಅವರ ತಮ್ಮ ಮೊದಲನೇ ಓವರ್ ನಲ್ಲಿ ಒಂದರ ಹಿಂದೆ ಒಂದು ದೀಪಕ್ ಹೂಡಾ ಮತ್ತು ಕ್ರುನಾಲ್ ಪಾಂಡ್ಯ ರವರ ವಿಕೆಟ್ ಗಳಿಸಿದರು, ಹೀಗೆ ಇನ್ನೇನು ಬೆಂಗಳೂರು ತಂಡ ಗೆದ್ದೇಬಿಡುತ್ತದೆ ಎಂದು ನಂಬಿದ್ದ ಆರ್ಸಿಬಿ ಅಭಿಮಾನಿಗಳಿಗೆ ಶಾಕ್ ಕೊಟ್ಟ ಲಕ್ನೋ ತಂಡದ ಮಾರ್ಕಸ್ ಸ್ಟೋಯಿನಿಸ್ ಮತ್ತು ನಿಕೋಲಸ್ ಪೂರನ್ ಮ್ಯಾಚ್ ನ ಗತಿಯನ್ನೇ ಬದಲಿಸಿದರು. ಇವರಿಬ್ಬರ ಆಟ ಲಕ್ನೋ ಸೂಪರ್ ಜಯಂಟ್ಸ್ ಗೆ ಗೆಲುವು ತಂದು ಕೊಡುವಲ್ಲಿ ಯಶಸ್ವಿಯಾಯಿತು.

rcb vs lsg

ಕೇವಲ 4 ದಿನದಲ್ಲಿ 27 ಕೋಟಿ – ಇಲ್ಲಿ ಓದಿ : https://iplgang.com/ipl-2023-27crore-in-just-4-months-rishab-nicholas/

ಪೂರನ್ ವೇಗದ ಅರ್ಧ ಶತಕ ಮತ್ತು ಸ್ಟೋಯಿನಿಸ್ ಅಬ್ಬರ!
ಒಂದು ಕಡೆ ವಿಕೆಟ್ ಕಳೆದುಕೊಂಡು ಸೋಲುವ ಬೀತಿಯಲ್ಲಿದ್ದ ಲಕ್ನೋ ತಂಡಕ್ಕೆ ಆಸರೆ ಯಾಗಿದ್ದು ಸ್ಟೋಯಿನಿಸ್ ಮತ್ತು ಪೂರನ್. ಮತ್ತೊಂದು ಕಡೆ ನಿಧಾನ ಗತಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಲಕ್ನೋ ತಂಡದ ನಾಯಕ ಕೆ.ಲ್.ರಾಹುಲ್ ೨೦ ಬಾಲ್ನಲ್ಲಿ ೧೮ ರನ್ ಗಳಿಸಿ ಔಟಾದರು, ಆದರೆ ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಲು ಬಂದ ಮಾರ್ಕಸ್ ಸ್ಟೋಯಿನಿಸ್ ಆರ್ಸಿಬಿ ಬೌಲರ್ಸ್ ಗಳ ಬೆಂಡೆತ್ತಿದರು. 30 ಬಾಲ್ಸ್ ಗಳಲ್ಲಿ 5 ಸಿಕ್ಸ್ ಮತ್ತು 4 ಫೌರ್ಸ್ ನೊಂದಿಗೆ ಉತ್ತಮ 65 ರನ್ ಗಳಿಸಿದರು. ನಂತರ ಕರಣ್ ಶರ್ಮ ಮಾಡಿದ ಬೌಲಿಂಗ್ ನಲ್ಲಿ ಶಾಬಾಜ್ ಅಹಮದ್ ಗೆ ಕ್ಯಾಚ್ ಕೊಟ್ಟು ಔಟಾದರು. ನಂತರ ಬ್ಯಾಟಿಂಗ್ ಗೆ ಇಳಿದ ನಿಕೋಲಸ್ ಪೂರನ್ ಆರ್ಸಿಬಿ ಬೌಲರ್ಸ್ಗಳಿಗೆ ಸಮಯಕೊಡದೆ ಸಿಕ್ಸ್ ಮತ್ತು ಫೌರ್ಸ್ ಗಳ ಸುರಿಮಳೆ ಸುರಿಸಿದರು, ಇದರಿಂದ ಕಂಗೆಟ್ಟ ಬೆಂಗಳೂರು ತಂಡಕ್ಕೆ ಗೆಲ್ಲುವ ಅವಕಾಶ ಕೈ ತಪ್ಪಲು ಒಂದು ಕಾರಣವಾಯಿತು. ಕೇವಲ 15 ಬಾಲ್ ನಲ್ಲಿ ಅರ್ಧ ಶತಕ ಬಾರಿಸಿದರು. ಇದು ಈ ಐಪಿಎಲ್ ನ ಅತಿ ವೇಗದ ಅರ್ಧ ಶತಕ, ಇದಕ್ಕೂ ಮೊದಲು ಚೆನ್ನೈ ತಂಡದ ಭಾರತೀಯ ಆಟಗಾರ ಅಜಿಂಕ್ಯ ರಹಾನೆ ೧೯ ಬಾಲ್ ನಲ್ಲಿ ಅರ್ಧಶತಕ ಗಳಿಸಿದ್ದರು, ಈಗ ಆ ದಾಖಲೆಯನ್ನು ನಿಕೋಲಸ್ ಪೂರನ್ ಮುರಿದಿದ್ದಾರೆ. ನಿಕೋಲಸ್ ಪೂರನ್ 19 ಬಾಲ್ಸ್ ನಲ್ಲಿ 7 ಸಿಕ್ಸ್ ಸಹಿತ 4 ಬೌಂಡರಿ ನೊಂದಿಗೆ 62 ರನ್ ಗಳಿಸಿದರು. ನಂತರ ಸಿರಾಜ್ ಬೌಲಿಂಗ್ ನಲ್ಲಿ ಶಾಬಾಜ್ ಅಹಮದ್ ಗೆ ಕ್ಯಾಚ್ ಕೊಟ್ಟು ಔಟಾದರು. ನೀಚೋಸ್ ಔಟ್ ಆದ ನಂತರ ಲಕ್ನೋ ಗೆ ಗೆಲ್ಲಲ್ಲು ಕಡಿಮೆ ರನ್ ಬೇಕಾಗಿದ್ದರು ಸಹಿತ ಬೆಂಗಳೂರು ತಂಡಕ್ಕೆ ಗೆಲ್ಲುವ ಅವಕಾಶ ಚಿಗುರೊಡೆಯಿತು.

RCB vs LSG :ಕೊನೆ ಓವರ್ನ ಥ್ರಿಲ್ಲರ್! ಗೆದ್ದ ಲಕ್ನೋ ತಂಡ!
ಕೊನೆ ಓವರ್ನಲ್ಲಿ ಬೌಲಿಂಗ್ ಮಾಡಲು ಬಂದ ಹರ್ಷಲ್ ಪಟೇಲ್, ಲಕ್ನೋ ಸೂಪರ್ ಜಯಂಟ್ಸ್ ಗೆ 6 ಬಾಲ್ ಗಳಲ್ಲಿ 5 ರನ್ ಗಳು ಬೇಕಿರುತ್ತದೆ, ಮೊದಲ ಬಾಲ್ನಲ್ಲಿ 1 ರನ್ ನೀಡುತ್ತಾರೆ, ನಂತರದ ಬಾಲ್ ನಲ್ಲಿ ಮಾರ್ಕ್ವುಡ್ ನ ಬೋಲ್ಡ್ ಮಾಡಿ ವಿಕೆಟ್ ಪಡೆಯುತ್ತಾರೆ, ಪಾಂಡ್ಯ ಇನ್ನಷ್ಟು ರೋಚಕ ಗೊಳ್ಳುತ್ತದೆ, ನಂತರ ಮಾಡಿದ ೩ ಮತ್ತು ನಾಲ್ಕನೇ ಬಾಲ್ನಲ್ಲಿ ರವಿ ಬಿಶ್ನೋಯ್ ಅವರಿಗೆ ೨ ಮತ್ತು ಮತ್ತು 1 ರನ್ ನೀಡುತ್ತಾರೆ, ಇದರೊನಿಗೆ ಬೆಂಗಳೂರು ಮತ್ತು ಲಕ್ನೋ ತಂಡದ ಸ್ಕೋರ್ (212) ಲೆವೆಲ್ ಆಗುತ್ತದೆ, ಈಗ 1 ರನ್ ಗಳಿಸಿದರೆ ಲಕ್ನೋ ತಂಡಕ್ಕೆ ಜಯ, ಆದರೆ ಮುಂದಿನ ಬಾಲ್ ನಲ್ಲಿ ಮತ್ತೊಂದು ಟ್ವಿಸ್ಟ್, ಈ ಬಾರಿ ಜಯದೇವ್ ಉನಾದ್ಕತ್ ಫಾಫ್ ಡು ಪ್ಲೆಸಿಸ್ ಕ್ಯಾಚ್ ಕೊಟ್ಟು ಔಟ್ ಆಗುತ್ತಾರೆ, ಕೊನೆ ಬಾಲ್ ನಲ್ಲಿ ಗೆಲ್ಲಲು ಒಂದು ರನ್ ಬೇಕಿರುತ್ತಾರೆ, ಈ ಬಾರಿ ಹರ್ಷಲ್ ಬಾಲ್ ಹಾಕಲು ಓದಿ ಬಂದಾಗ ರವಿ ಭೀಷನೊಯ್ ಅವರು ಕ್ರೀಸ್ ಬಿಟ್ಟಿರುವುದನ್ನು ನೋಡಿ ಮಂಕಡ್(ಮಂಕಡ್) ಮಾಡಲು ಮುಂದಾಗುತ್ತಾರೆ ಆದರೆ ಬಾಲ್ ವಿಕೆಟ್ ಗೆ ತಾಗಿಸುವುದಿಲ್ಲ, ನಂತರ ಕೊನೆ ಬಾಲ್ ನಲ್ಲಿ ಆವೇಶ ಖಾನ್ ರವರು ಬಳ್ಳು ಹೊಡೆಯಲು ಯತ್ನಿಸಿದರು, ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಬಾಲ್ ಹಿಡಿಯಲು ವಿಫಲರಾಗಿ ರನ್ ಮಾಡಲು ಯತ್ನಿಸಿ ವಿಫಲರಾಗುತ್ತಾರೆ. ಆದರೂ ಆವೇಶ ಖಾನ್ ಮತ್ತು ರವಿ ಭೀಷನೊಯ್ 1 ರನ್ ಕದ್ದು,1 ವಿಕೆಟ್ ನ ಅಂತರದಿಂದ ಈ ಟೂರ್ನಿಯ ರೋಚಕ ಪಂದ್ಯವನ್ನು ಗೆಲ್ಲುತ್ತಾರೆ. ಪಂದ್ಯ ಗೆಲ್ಲಲು ಪ್ರಮುಖ ಕಾರಣರಾದ ನಿಕೋಲಸ್ ಪೂರನ್ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಬಾಜನರಾಗುತ್ತಾರೆ.

ಐಪಿಎಲ್ ಇಂದಿನ ಪಂದ್ಯ – ದೆಹಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್:
ಐಪಿಎಲ್ 2023ರ 16ನೇ ಪಂದ್ಯ ದೆಹಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ಇಂದು ದೆಹಲಿಯ ಅರುಣ್ ಜೈಟ್ಲಿ ಸ್ಟೇಡಿಯಂ ನಲ್ಲಿ ಸಂಜೆ 7.30ಕ್ಕೆ ನಡೆಯಲಿದೆ. ಈ ಪಂದ್ಯ ನೀವು ಸ್ಟಾರ್ ಸ್ಪೋರ್ಟ್ಸ್ ನ ಟಿವಿ ಚನ್ನೆಲ್ಗಳಲ್ಲಿ ನೋಡಬಹುದು ಮತ್ತು ಜಿಯೋ ಸಿನಿಮಾ ಅಪ್ಲಿಕೇಶನ್ ನಲ್ಲಿ ಉಚಿತವಾಗಿ 10 ಭಾಷೆಗಳಲ್ಲಿ ನೋಡಬಹುದು.

 

Leave a Comment