IPL 2023 Result : ಚೆನ್ನೈ ಸೂಪರ್ ಕಿಂಗ್ಸ್ ನ್ನು ಮೊದಲ ಮ್ಯಾಚ್ನಲ್ಲಿ ಸೋಲಿಸಿದ ಗುಜರಾತ್ ಟೈಟಾನ್ಸ್!
31 ಏಪ್ರಿಲ್ 2023 : ಐಪಿಎಲ್ 16ನೇ ಆವೃತ್ತಿ ಭರ್ಜರಿ ಕಾರ್ಯಕ್ರಮಗಳೊಂದಿಗೆ ಶುರುವಾಯಿತು, ಈ ಗ್ರಾಂಡ್ ಕಾರ್ಯಕ್ರಮದಲ್ಲಿ ತಮನ್ನಾ ಭಾಟಿಯಾ, ರಶ್ಮಿಕಾ ಮಂಧಣ್ಣ ತಮ್ಮ ನೃತ್ಯಗಳಿಂದ ಮತ್ತು ಬಾಲಿವುಡ್ ಗಾಯಕ ಅರಿಜಿತ್ ಸಿಂಗ್ ಮನೋರಂಜಿಸಿದರು.
IPL 2023 : Gujrat Titans VS Chennai Super Kings :
ಸಂಜೆ 7.30 ಕ್ಕೆ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ೧೬ ನೇ ಆವೃತ್ತಿಯ ಐಪಿಎಲ್ ಮೊದಲನೇ ಪಂದ್ಯ ಗುಜರಾತ್ ಟೈಟಾನ್ಸ್ VS ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಶುರುವಾಯಿತು, ಮೊದಲ ಪಂದ್ಯವನ್ನು ವೀಕ್ಷಿಸಲು 1 ಲಕ್ಷಕ್ಕೂ ಅಧಿಕ ಜನ ನೆರೆದಿದ್ದರು.
Chennai Super KIngs Batting VS Gujrat Titans Bowling :
ಗುಜರಾತ್ ಟೈಟಾನ್ಸ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆಮಾಡಿಕೊಂಡರು, ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಚೆನ್ನೈ ಸೂಪರ್ ಕಿಂಗ್ಸ್, ರುತುರಾಜ್ ಗೈಕ್ವಾಡ್ ಮತ್ತು ಡೆವನ್ ಕಾನ್ವೆ ಮೊದಲು ಬ್ಯಾಟಿಂಗ್ ಮಾಡಲು ಇಳಿದರು, ಕಾನ್ವೆ ಅವರು ೧ ರನ್ ಗಳಿಸಿ ಮೊಹಮ್ಮದ್ ಶಮಿ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿ ಔಟ್ ಆದರು, ಅನಂತರ ಬಂದ ಮೊಯಿನ್ ಅಲಿ ಜೊತೆಗೂಡಿ ರುತುರಾಜ್ ಭರ್ಜರಿ ಬ್ಯಾಟಿಂಗ್ ಮಾಡಿದರು, ತಂಡದ ರನ್ ಸರಾಸರಿ 10ರ ಆಸುಪಾಸಿನಲ್ಲಿ ಆಟ ಮುಂದುವರಿಸಿದರು. ಹೀಗೆ ೧೩ ಓವರ್ಗಳ ವರೆಗೂ CSK ಹಿಡಿತದಲ್ಲಿತ್ತು, GT ಶಿಸ್ತಿನ ಬೌಲಿಂಗ್ ಮಾಡಿ ರನ್ ಗಳಿಗೆ ಕಡಿವಾಣ ಹಾಕಿದರು ನಂತರ ಬಂದ ಸ್ಟೋಕ್ಸ್, ರಾಯುಡು, ಶಿವಂ ದುಬೆ, ರವೀಂದ್ರ ಜಡೇಜಾ ರವರು ಹೆಚ್ಚಿನ ಪ್ರದರ್ಶನ ನೀಡದೆ ತಮ್ಮ ವಿಕೆಟ್ ಗಳನ್ನೂ ಒಪ್ಪಿಸಿದರು, ಕೊನೆಯ ಎರಡು ಓವರ್ ಗಳಲ್ಲಿ ಬಂದ CSK ಕ್ಯಾಪ್ಟನ್ ಧೋನಿ ಅವರು 7 ಬಾಲ್ ಗಳಲ್ಲಿ 1 ಸಿಕ್ಸ್, 1 ಫೋರ್ ಬಾರಿಸಿ 14 ರನ್ ಗಳಿಸಿದರು, ರುತುರಾಜ್ 50 ಬಾಲ್ಸ್ ಗಳಲ್ಲಿ 92 ( 4 ಫೋರ್, 9 ಸಿಕ್ಸ್ಗಳು ) ಬಾರಿಸಿದರು. ಇವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ಚೆನ್ನೈ ಸೂಪರ್ ಕಿಂಗ್ಸ್ 178 ರನ್ಸ್ ಗಳಿಸಲು ಸಾಧ್ಯವಾಯಿತು. GT ಪರ ಶಮಿ, ರಶೀದ್ ಖಾನ್ ಮತ್ತು ಅಲ್ಜರ್ರಿ ಜೋಸೆಫ್ ತಲಾ 2, ಜೋಶ್ವ ಲಿಟಲ್ 1 ವಿಕೆಟ್ಸ್ ಗಳಿಸಿದರು. ರಶೀದ್ ಖಾನ್ ಮತ್ತು ಶಮಿ ಅವರ ಬೌಲಿಂಗ್ ಗಮನಾರ್ಹವಾಗಿತ್ತು.
Gujrat Titans Batting VS Chennai Super Kings Bowling :
178ರ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ಶುಭಮನ್ ಗಿಲ್ ಮತ್ತು ಸಾಹಾ ಮೊದಲು ಬ್ಯಾಟಿಂಗ್ ಮಾಡಿದರು, 25 ರನ್ ಗಳಿಸಿ ವೃದ್ಧಿಮಾನ್ ಸಾಹಾ ಅವರು ರಾಜವರ್ಧನ್ ಗೆ ವಿಕೆಟ್ ಒಪ್ಪಿಸಿದರು, ಗಿಲ್ ನ ಬ್ಯಾಟಿಂಗ್ ಪ್ರದರ್ಶನ ದಿಂದ ಮೊದಲ ಪವರ್ ಪ್ಲೇ 6 ಓವರ್ಗಳಲ್ಲಿ GT, 65 ರನ್ ಗಳಿಸಿತು. ನಂತರ ಬಂದ ಸಾಯಿ ಸುಧರ್ಶನ್ ಮತ್ತು ವಿಜಯ್ ಶಂಕರ್ ತಂಡಕ್ಕೆ ಅತ್ಯವಶ್ಯಕ ರನ್ ಗಳನ್ನೂ ಸೇರಿಸಿದರು, ತಂಡದ ನಾಯಕ ಹಾರ್ದಿಕ್ ಪಾಂಡ್ಯ 8 ರನ್ಗೆ ಔಟ್ ಆದರು, ಪಂದ್ಯ ಕಡೆಯ ಘಟ್ಟ ತಲುಪುವ ಹೊತ್ತಿಗೆ ಭರ್ಜರಿ ಬ್ಯಾಟಿಂಗ್ ಆಡುತ್ತಿದ್ದ ಶುಭಮನ್ ಅವರು 36 ಬಾಲ್ಸ್ ಗೆ 63 ಅತ್ಯಮೂಲ್ಯ ರನ್ಸ್ ಗಳಿಸಿ ತುಷಾರ್ ದೇಶಪಾಂಡೆಗೆ ಔಟ್ ಆದರು. ಕೊನೆಯ 2 ಓವರ್ಗಳಲ್ಲಿ 23 ರನ್ಸ್ ಗಳು ಬೇಕಾಗಿತ್ತು, ರಶೀದ್ ಖಾನ್ ಮತ್ತು ರಾಹುಲ್ ತೆವಾಟಿಯ ಇಬ್ಬರ ಸಮಯೋಚಿತ ಆಟದಿಂದ , ಇನ್ನು 4 ಬಾಲ್ಸ್ ಗಳು ಇರುವ ಮುಂಚೆ ಭರ್ಜರಿ ರನ್ಸ್ ಗಳಿಸಿ ತಂಡವನ್ನು182/5 ದಡ ಸೇರಿಸಿ ಗೆಲ್ಲಿಸಿದರು.
ಮೊದಲ ಪಂದ್ಯ ಗೆದ್ದ ಹಾರ್ದಿಕ್ ಅವರು ತಮ್ಮ ತಂಡದ ಪ್ರದರ್ಶನವನ್ನು ಶ್ಲಾಘಿಸಿದರು ಮತ್ತು ಖುಷಿಪಟ್ಟರು.
Player of the Match :
2 ವಿಕೆಟ್ ಪಡೆದು 10 ರನ್ ಗಳಿಸಿ, ಪಂದ್ಯ ಗೆಲ್ಲಲ್ಲು ಕಾರಣರಾದ ರಶೀದ್ ಖಾನ್, ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಬಾಜನರಾದರು.