KKR vs RCB: Indian Premier League Live Streaming

Indian Premier league: KKR vs RCB Live Streaming: IPL 2023ರ 9ನೇ ಪಂದ್ಯಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕೊಲ್ಕತ್ತಾ ನೈಟ್ ರೈಡರ್ಸ್ ಎದುರಿಸಲಿದೆ.

IPL 2023 ಇಂದು (ಏಪ್ರಿಲ್ 6) ನಡೆಯಲಿರುವ ಟೂರ್ನಿಯ 9ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅನ್ನು ಎದುರಿಸಲಿದೆ. ಈ ಪಂದ್ಯವು ಕೋಲ್ಕತಾದ ಈಡನ್ ಗಾರ್ಡನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಡಲಿದ್ದಾರೆ. ಈ ಪಂದ್ಯದ ಆಡಬಹುದಾದ 11ರ ಆಟಗಾರರ ಮಾಹಿತಿ ಮತ್ತು ನೇರಪ್ರಸಾರದ ಮಾಹಿತಿ ಬಗ್ಗೆ ತಿಳಿಯೋಣ.

Virat & Faf
Image source: crictoday                Virat & Faf

Indian Premier League 2023, KKR vs RCB:

IPLನ 9 ನೇ ಪಂದ್ಯ ಇಂದು (ಏಪ್ರಿಲ್ 6) ಕೋಲ್ಕತಾದ ಈಡನ್ ಗಾರ್ಡನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಲಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿದ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವನ್ನು ಪಡೆದು ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಆದರೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲನುಭವಿಸಿತು, ಹಾಗಾಗಿ ಮೊದಲ ಪಂದ್ಯದ ಗೆಲುವಿಗೆ ಕೊಲ್ಕತ್ತಾ ತಂಡವು ಎದುರು ನೋಡುತ್ತಿದೆ. ಈ ಪಂದ್ಯ ರೋಚಕವೆನಿಸಿದ್ದು, ಯಾರು ಗೆಲ್ಲುತ್ತಾರೆಂಬ ಕುತೂಹಲ ಅಭಿಮಾನಿಗಳಲ್ಲಿದೆ ಮೂಡಿದೆ. ಉಭಯ ತಂಡಗಳ ಆಡಬಹುದಾದ 11ರ ಆಟಗಾರ ಪಟ್ಟಿ ಮತ್ತು ನೇರಪ್ರಸಾರದ ಬಗ್ಗೆ ತಿಳಿಯೋಣ.

ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಲಾಬಲ :
Indian Premier League 2023: ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡಿದ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ8 ವಿಕೆಟ್ ಗಳ ಅಮೋಘ ಗೆಲುವನ್ನು ಸಾಧಿಸಿತ್ತು. ಟೂರ್ನಿಯಲ್ಲಿ ಶುಭಾರಂಭ ಮಾಡಿದ ಬೆಂಗಳೂರು ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿತ್ತು. ಮತ್ತೊಂದು ಕಡೆ ಮೊದಲ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಉತ್ತಮ ಬ್ಯಾಟಿಂಗ್ ಮಾಡಿದ್ದರು, ಆದರೆ ಸಾದಾರಣ ಬೌಲಿಂಗ್ ನಿಂದ ಪಂಜಾಬ್ ಕಿಂಗ್ಸ್ಗೆ ಹೆಚ್ಚು ರನ್ಸ್ ನೀಡಿತ್ತು, ಹಾಗಾಗಿ ಮೊದಲ ಪಂದ್ಯ ಸೋಲಲು ಇದು ಒಂದು ಕಾರಣವಾಯಿತು. ಈ ಪಂದ್ಯದಲ್ಲಿ 7 ರನ್ಸ್ ಗಳ(DLS method) ಅಂತರದಿಂದ ಕೋಲ್ಕತ್ತಾ ಸೋಲನುಭವಿಸಿತ್ತು. ಬೆಂಗಳೂರು ಪರ ಬ್ಯಾಟಿಂಗ್ ನಲ್ಲಿ ಬಲಿಷ್ಠ ತಂಡ ಹೊಂದಿದ್ದು ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಇನ್ನಿಂಗ್ಸ್ ಶುರುಮಾಡಲಿದ್ದಾರೆ. ಗ್ಲೆನ್ ಮ್ಯಾಕ್ಸ್ವೆಲ್, ದಿನೇಶ್ ಕಾರ್ತಿಕ್ ಮತ್ತು ಮೈಕಲ್ ಬ್ರೇಸ್ ವೆಲ್ ಮಾಧ್ಯಮ ಕ್ರಮಾಂಕದಲ್ಲಿ ಮಿಂಚಲಿದ್ದಾರೆ. ಬೌಲಿಂಗ್ ನಲ್ಲಿಯು ಬಲಿಷ್ಠ ಆಟಗಾರರನ್ನು ಹೊಂದಿರುವ RCB, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಆಕಾಶ್ ದೀಪ್ ಮತ್ತು ಕರ್ಣ್ ಶರ್ಮಾ ಪ್ರಮುಖ ಬೌಲರ್ ಗಳು ಮತ್ತು ಅದ್ಬುತ ಪ್ರದರ್ಶನ ನೀಡಬಲ್ಲರು. KKR ತಂಡವು ಸಹ ತಮ್ಮತಂಡದಲ್ಲಿ ರಹಮಾನುಲ್ಲಾಹ್ ಗುರ್ಬಾಜ್, ವೆಂಕಟೇಶ್ ಐಯ್ಯರ್, ನಿತೀಶ್ ರಾಣಾ, ಸುನಿಲ್ ನರೈನ್, ರಿಂಕು ಸಿಂಗ್ ಮತ್ತು ಡ್ರೆ ರುಸ್ಸೆಲ್ ನಂತಹ ಒಳ್ಳೆಯ ಆಟಗಾರರನ್ನು ಒಳಗೊಂಡಿದೆ ಮತ್ತು ತಂಡ ಹೆಚ್ಚಿನ ಪ್ರದರ್ಶನವನ್ನು ನಿರೀಕ್ಷಿಸುತ್ತಿದೆ, ಬೌಲಿಂಗ್ ನಲ್ಲಿಉಮೇಶ್ ಯಾದವ್, ಟೈಮ್ ಸೌಥೀ, ನರೈನ್ ಮತ್ತು ಶ್ರಾಧುಲ್ ಥಾಕುರ್ ರನ್ನು ಒಳಗೊಂಡಿದೆ . ಕೊಲ್ಕತ್ತಾ ತಂಡಕ್ಕೆ ನಿತೀಶ್ ರಾಣಾ ನಾಯಕರಾಗಿದ್ದಾರೆ, ಬೆಂಗಳೂರು ತಂಡಕ್ಕೆ ಫಾಫ್ ಡು ಪ್ಲೆಸಿಸ್ ಅವರು ನಾಯಕರಾಗಿ ಮುಖಾಮುಖಿಯಾಗಲಿದ್ದಾರೆ.

RCBಯಲ್ಲಿ ಇದ್ದಾರೆ ಕೋಲ್ಕತ್ತಾದಲ್ಲಿ ಆಡಿದ ಅನುಭವಿಗಳು :

ಹೌದು, ಆಕಾಶ್ ದೀಪ್ ಹಾಗು ಶಾಬಾಜ್ ಅಹ್ಮದ್ ಇಬ್ಬರು ಸಹ ಡೊಮೆಸ್ಟಿಕ್ ನಲ್ಲಿ ಬೆಂಗಾಳ್ ಪರ ಆಡುವ ಆಟಗಾರರು ಹಾಗಾಗಿ ಇವರ ಅನುಭವದ ಆಟ ಬೆಂಗಳೂರು ತಂಡಕ್ಕೆ ಉಪಯೋಗವಾಗಲಿದೆ. ದಿನೇಶ್ ಕಾರ್ತಿಕ್ ಸಹ ಮಾಜಿ ಕೋಲ್ಕತ್ತಾ ಆಟಗಾರ ಮತ್ತು ನಾಯಕರಾಗಿದ್ದವರು ಇದು ಬೆಂಗಳೂರು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ.
ಮೊದಲ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಮಾಡಿದ ರೀಸ್ ಟೋಪ್ಲೇ ಕ್ಷೇತ್ರ ರಕ್ಷಣೆ ಮಾಡುವಾಗ ಭುಜದ ಸಮಸ್ಯೆಗೆ ಸಿಲುಕಿ ಹೊರ ನಡೆದರು, ಇಂದಿನ ಪಂದ್ಯದಲ್ಲಿ ಬದಲಿ ಇವರ ಬದಲಿ ಆಟಗಾರನಾಗಿ ಡೇವಿಡ್ ವಿಲ್ಲಿ ಅವರನ್ನು ಕರೆ ತರುವ ಸಾಧ್ಯತೆಗಳಿವೆ.

KKR vs RCB ಹೆಡ್ ಟು ಹೆಡ್ :

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಐಪಿಎಲ್ ನಲ್ಲಿ 30 ಪಂದ್ಯಗಳು ಮುಖಾಮುಖಿಯಾಗಿವೆ, ಇದರಲ್ಲಿ 16 ಬಾರಿ ಕೊಲ್ಕತ್ತಾ ಗೆದ್ದಿದಾರೆ, ಉಳಿದ 14 ಪಂದ್ಯದಲ್ಲಿ ಬೆಂಗಳೂರು ಗೆದ್ದಿದೆ, ಈ ಅಂಕಿ ಅಂಶದ ಪ್ರಕಾರ ಕೊಲ್ಕತ್ತಾ ಮೇಲುಗೈ ಸಾಧಿಸಿದ್ದರು ಬೆಂಗಳೂರು ತಂಡವು ಹೆಚ್ಚು ಕಡಿಮೆ ಸರಿಸಮನಾಗಿ ಗೆದ್ದಿರುವುದು ಗಮನಿಸಬಹುದು. ಇನ್ನು ಈ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬ ನಿರೀಕ್ಷೆ ಮೂಡಿದೆ.

ಬೆಂಗಳೂರಿನ ಪರ ಆಡುವ ವಿರಾಟ್ ಕೊಹ್ಲಿ, ಮ್ಯಾಕ್ಸ್ವೆಲ್, ದಿನೇಶ್ ಕಾರ್ತಿಕ್ ಕೊಲ್ಕತ್ತಾ ತಂಡಕ್ಕೆ ಹೆಚ್ಚು ಒತ್ತಡ ನೀಡಲಿದ್ದಾರೆ ಮತ್ತು ಕೊಲ್ಕತ್ತಾ ಪರ ಆಡುವ ಸುನಿಲ್ ನರೈನ್, ಡ್ರೆ ರುಸ್ಸೆಲ್ ಬೆಂಗಳೂರು ತಂಡವನ್ನು ಕಾಡಲಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಡುವ 11 :
ಫಾಫ್ ಡು ಪ್ಲೇಸೆಸ್(ನಾಯಕ), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್, ಮೈಕಲ್ ಬ್ರೇಸ್ ವೆಲ್, ಶಾಬಾಜ್ ಅಹ್ಮದ್, ಕರ್ಣ್ ಶರ್ಮಾ, ಹರ್ಷಲ್ ಪಟೇಲ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್.
ಬೆಂಗಳೂರು ತಂಡದ ಉಳಿದ ಆಟಗಾರರು :
ಸುಯಶ್ ಪ್ರುಭುದೇಸಾಯ್, ಅನುಜ್ ರಾವತ್, ಮಹಿಪಾಲ್ ಲೋಮರೋರ್, ಸೋನು ಯಾದವ್, ಸಿದ್ದಾರ್ಥ್ ಕೌಲ್, ಫಿನ್ ಅಲೆನ್, ಮನೋಜ್ ಭಾಂಡಗೆ, ರಾಜನ್ ಕುಮಾರ್, ಅವಿನಾಶ್ ಸಿಂಗ್.

ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಡುವ 11 :
ರಹಮಾನುಲ್ಲಾಹ್ ಗುರ್ಬಾಜ್(ವಿಕೆಟ್ ಕೀಪರ್), ಮಂದೀಪ್ ಸಿಂಗ್, ವೆಂಕಟೇಶ್ ಐಯ್ಯರ್, ನಿತೀಶ್ ರಾಣಾ(ನಾಯಕ), ಅನುಕೂಲ್ ರಾಯ್, ಸುನಿಲ್ ನರೈನ್, ರಿಂಕು ಸಿಂಗ್, ಡ್ರೆ ರುಸ್ಸೆಲ್, ಶ್ರಾದುಲ್ ಥಾಕುರ್, ಟಿಮ್ ಸೌಥೀ, ಉಮೇಶ್ ಯಾದವ್, ವರುಣ್ ಚಕ್ರವರ್ತಿ
ಕೊಲ್ಕತ್ತಾ ತಂಡದ ಉಳಿದ ಆಟಗಾರರು :
ಎನ್ ಜಗದೀಶನ್, ಡೇವಿಡ್ ವೀಸ್, ವೈಭವ್ ಅರೋರಾ, ಸುಯಶ್ ಶರ್ಮಾ, ಕುಲವಂತ್ ಖೇಜೆರೋಲಿಯ, ಹರ್ಷಿತ್ ರಾಣಾ

KKR vs RCB ನೇರಪ್ರಸಾರ ಹೀಗೆ ನೋಡಬಹುದು ಮತ್ತು ಎಲ್ಲಿ ನಡೆಯಲಿದೆ :

ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ IPL 2023 9ನೇ ಪಂದ್ಯ ಇಂದು ಕೋಲ್ಕತಾದ ಈಡನ್ ಗಾರ್ಡನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
ಇಂದು ಸಂಜೆ 7.30 ಕ್ಕೆ ಪಂದ್ಯ ಆರಂಭವಾಗಲಿರುವ ಪಂದ್ಯದ ನೇರ ಪ್ಸಾರವನ್ನು ಸ್ಟಾರ್ ಸ್ಪೋರ್ಟ್ಸ್ ನ ವಿವಿಧ ಚಾನೆಲ್ಗಳಲ್ಲಿ ನೋಡಬಹುದು.
ಲೈವ್ ಸ್ಟ್ರೀಮಿಂಗ್ ಅನ್ನು ‘ಜಿಯೋ ಸಿನಿಮಾ’ ಅಪ್ಲಿಕೇಶನ್ ನಲ್ಲಿ 10 ಭಾಷೆಗಳಲ್ಲಿ ಉಚಿತವಾಗಿ ವೀಕ್ಷಿಸಬಹುದು.

 

Leave a Comment