RCB VS MI: 32 ಕೋಟಿ ನೀರಿಗೆ! ಇಶಾನ್, ಗ್ರೀನ್ ಮತ್ತು ರೋಹಿತ್ ಆಟ ನೋಡಿ ಅಭಿಮಾನಿಗಳು ಬೇಸರ.

RCB VS MI: 32 ಕೋಟಿ ನೀರಿಗೆ! ಇಶಾನ್, ಗ್ರೀನ್ ಮತ್ತು ರೋಹಿತ್ ಆಟ ನೋಡಿ ಅಭಿಮಾನಿಗಳು ಬೇಸರ.

 

rohit and ishan
Image Source:: Google     Ishan & Rohit

 

ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆದ ಮೊದಲ ಇಂಡಿಯನ್ ಪ್ರೀಮಿಯರ್ ಲೀಗ್ ಮ್ಯಾಚ್ ನಲ್ಲಿ, ಮುಂಬೈ ಇಂಡಿಯನ್ ಹೀನಾಯ ಸೋಲನುಭವಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕೆ ಇಳಿದ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟ್ಸಮನ್ ರೋಹಿತ್ ಶರ್ಮ ಹಾಗು ಇಶಾನ್ ಕಿಶನ್, ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.

ಕೋಟ್ಯಂತರ ರೂಪಾಯಿ ಸುರಿದು ತಂಡಕ್ಕೆ ಸೇರ್ಪಡೆ ಗೊಂಡಿರೋ ಇಶಾನ್ ಕಿಶನ್ ಮತ್ತು ಕ್ಯಾಮೆರೋನ್ ಗ್ರೀನ್ ಮೇಲೆ ಬೆಟ್ಟದಷ್ಟು ನೀರಿಕ್ಷೆ ಇತ್ತು, ಆದರೆ ಮೊದಲ ಮ್ಯಾಚ್ ಪವರ್ ಪ್ಲೇ ಆಟ ಮುಂದುವರಿದಂತೆ ಮುಂಬೈ ಇಂಡಿಯನ್ಸ್ ಅಭಿಮಾನಿಗಳು ತಲೆಮೇಲೆ ಕೈ ಇಟ್ಟು ಕುಳಿತಿದ್ದಾರೆ.
ಮುಂಬೈ ತಂಡ ಇಶಾನ್ ಕಿಶಾನ್ 15.25 ಕೋಟಿ ಸಂಭಾವನೆ ನೀಡುತ್ತಿದೆ ಹಾಗು ಕ್ಯಾಮೆರೋನ್ ಗ್ರೀನ್ 17.5 ಕೋಟಿ ಕೊಟ್ಟು ಖರೀದಿಸಿದೆ. ಈ ಇಬ್ಬರು ಆಟಗಾರರ ಮೇಲೆ ಭರವಸೆ ಇತ್ತು.
ಇನ್ನು ಇಶಾನ್ ಅವರು ಮೊದಲ ಪವರ್ ಪ್ಲೇ ನಲ್ಲಿ ಹೆಚ್ಚು ರನ್ ಗಳಿಸುತ್ತಾರೆ ಎಂಬ ನೀರಿಕ್ಷೆ ಇತ್ತು, ಆದರೆ 13 ಎಸೆತದಲ್ಲಿ10 ರನ್ ಗಳಿಸಿ ಸಿರಾಜ್ ಬೌಲಿಂಗ್ ಗೆ, ಹರ್ಷಲ್ ಪಟೇಲ್ ಗೆ ಕ್ಯಾಚ್ ಕೊಟ್ಟು ತಮ್ಮ ವಿಕೆಟ್ ಒಪ್ಪಿಸಿದರು . ಇದರಲ್ಲಿ 2 ಬೌಂಡರಿ ಒಳಗೊಂಡಿದ್ದರು ಸಹ ಸ್ಟ್ರೈಕ್ ರೇಟ್ ಮಾತ್ರ 76.92.
ನಂತರ ಬ್ಯಾಟಿಂಗ್ ಆಡಲು ಬಂದ ಕ್ಯಾಮೆರೋನ್ ಗ್ರೀನ್ ಆಟ ನೋಡಲು ಅಭಿಮಾನಿಗಳು ಉತ್ಸುಹುಕರಾಗಿದ್ದರು, ಅದರಂತೆ ಅವರು ೧ ಬೌಂಡರಿ ಬಾರಿಸಿದರು ಆದರೆ ಮುಂದಿನ ಬಾಲ್ನಲ್ಲಿ ರೀಸ್ ಟಾಪ್ಲೇ ಸ್ವಿಂಗ್ ಯಾರ್ಕರ್ ಹಾಕಿ ಗ್ರೀನ್ ಅವರ ವಿಕೆಟ್ ಬೀಳಿಸಿದರು. ಗ್ರೀನ್ ಅವರು 4 ಎಸೆತದಲ್ಲಿ ಕೇವಲ 5 ರನ್ ಗಳಿಸಿ ಔಟ್ ಆದರು.
ಮುಂಬೈ ತಂಡ ಪವರ್ ಪ್ಲೇ ನಲ್ಲಿ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು, ಈ ಒತ್ತಡದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ರೋಹಿತ್ ಶರ್ಮ ಅವರು ಆಘಾತವನ್ನು ಅನುಭವಿಸಬೇಕಾಯಿತು, ಏಕೆಂದರೆ ಆಕಾಶ್ ದೀಪ್ ಅವರ ಬೌಲಿಂಗ್ ನಲ್ಲಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಗೆ ಸುಲಭ ಕ್ಯಾಚ್ ಕೊಟ್ಟು ಔಟ್ ಆದರು. ಇದಕ್ಕೂ ಮೊದಲು ಸಿರಾಜ್ ಬೌಲಿಂಗ್ ನಲ್ಲಿ ಪುಲ್ ಶಾಟ್ ಹೊಡೆಯಲು ಹೋಗಿ ವಿಫಲರಾದರು ಆದರೆ ಮೊಹಮ್ಮತ್ ಸಿರಾಜ್ ಮತ್ತು ದಿನೇಶ್ ಕಾರ್ತಿಕ್ ನಡುವಿನ ಗೊಂದಲದಿಂದ ಕ್ಯಾಚ್ ಹಿಡಿಯಲು ಇಬ್ಬರು ವಿಫಲರಾದರು ಮತ್ತು ರೋಹಿತ್ ಅವರು ಔಟ್ ನಿಂದ ಬಚಾವಾದರು, ಆದರೆ ಈ ಜೀವಧಾನ ಉಳಿಸಿಕೊಳ್ಳಲು ವಿಫಲರಾದರು. ರೋಹಿತ್ ಅವರು 10 ಬಾಲ್ ನಲ್ಲಿ ಕೇವಲ 1 ರನ್ ಗಳಿಸಿ ಔಟ್ ಆದರು ಮತ್ತು ಮುಂಬೈ ತಂಡದ ಅಭಿಮಾನಿಗಳಿಗೆ ನಿರಾಸೆ, ಬೇಸರ ಮೂಡಿಸಿದ್ದು ಸುಳ್ಳಲ್ಲ.

ಮುಂಬೈ ಅಭಿಮಾನಿಗಳು ಇಶಾನ್ ಕಿಶನ್ ಅವರನ್ನು ಪವರ್ ಪ್ಲೇ ನಲ್ಲಿ ಆಡುವುದನ್ನು ತಡೆಹಿಡಿಯಬೇಡಿ ಎಂದು ಕೇಳುತ್ತಿದ್ದರೆ. ಏಕೆಂದರೆ ಇಶಾನ್ ಒಬ್ಬ ಭಯವಿಲ್ಲದ ಆಟಗಾರ ಎದುರಾಳಿ ಬೌಲರ್ಸ್ಗಳಿಗೆ ತಮ್ಮ ಬ್ಯಾಟಿಂಗ್ ಮೂಲಕ ಉತ್ತರ ನೀಡುವ ಇವರು, ಪಟಾಕಿ ಹೊಡೆಯೋ ರೀತಿ ಬ್ಯಾಟಿಂಗ್ ಮಾಡುತ್ತಾರೆ. ಸಧ್ಯಕ್ಕೆ ಕಳಪೆ ಫಾರ್ಮ್ನಲ್ಲಿ ಇರುವ ಮತ್ತೆ ತಮ್ಮ ಫಾರ್ಮ್ ಗೆ ಮರಳಿದರೆ ತಮ್ಮ ಬ್ಯಾಟಿಂಗ್ ಬಗ್ಗೆ ಹೇಳುವ ಅವಶ್ಯಕತೆ ಇರುವುದಿಲ್ಲ.
ಮತ್ತೊಂದು ಕೆಲವು ಅಭಿಮಾನಿಗಳು ಇಶಾನ್ ಕಿಶನ್ ಸಧ್ಯಕ್ಕೆ ಕಳಪೆ ಫಾರ್ಮ್ನಲ್ಲಿ ಇರುವುದರಿಂದ ಅವರ ಮೇಲೆ ಒತ್ತಡ ಜಾಸ್ತಿ ಆಗುತ್ತಿದೆ, ಇದು ತಂಡದ ಮೇಲು ನಕಾರಾತ್ಮಕ ಪರಿಣಾಮ ಬೀರಬಹುದು, ಇಶಾನ್ ಭಾರತ ತಂಡಕ್ಕೆ ಆಯ್ಕೆ ಆಗುವುದು ಪ್ರಶ್ನೆಯಾಗಿದೆ, ಇದು ಇಶಾನ್ ಮತ್ತು ಮುಂಬೈ ತಂಡದ ಮೇಲೆ ಹೆಚ್ಚಿನ ಒತ್ತಡ ಬೀರಲಿದೆ, ಅದಕ್ಕೆ ಮುಂಬೈ ತಂಡ ಹೊಸ ಆಟಗಾರನನ್ನು ಪರಿಗಣಿಸಬೇಕೆಂದು ಕೇಳುತ್ತಿದ್ದಾರೆ.

ಡಿವಾಲ್ಡ್ ಬ್ರೆವಿಸ್ ರನ್ನು ಓಪನಿಂಗ್ ಮಾಡಲು ಅವಕಾಶಕೊಡಬೇಕೆಂದು ಅಭಿಮಾನಿಗಳು ಬೇಡಿಕೆ ಇಟ್ಟಿದ್ದಾರೆ, ಡಿವಾಲ್ಡ್ ಬ್ರೆವಿಸ್ ಬ್ರೆವಿಸ್ ಉತ್ತಮ ಫಾರ್ಮ್ನಲ್ಲಿ ಇದ್ದಾರೆ ಮತ್ತು ಹೊಡಿ ಬಡಿ ಆಟಕ್ಕೆ ಒಳ್ಳೆ ವೇಗ ಗತಿಯ ಉದಯೋನ್ಮುಖ ಆಟಗಾರ, ಬ್ರೆವಿಸ್ ಅವರು ಉತ್ತಮ ರೀತಿ ಬ್ಯಾಟಿಂಗ್ ಪ್ರದರ್ಶಿದರೆ ರೋಹಿತ್ ಮೇಲೆ ಒತ್ತಡ ಕಡಿಮೆಗೊಳ್ಳುತ್ತದೆ ಮತ್ತು ಸಮಾಧಾನ ಸಿಗಲಿದೆ, ಏಕೆಂದರೆ ಇಬ್ಬರು ಓಪೆನ್ರ್ಸ್ಗಳು ಆಡುವಾಗ ಮತ್ತೊಂದು ತುದಿಯಲ್ಲಿ ರನ್ ಗಳು ಸಿಗುತ್ತಿಲ್ಲ ಎಂಬುದು ಮುಂಬೈನ ಸಧ್ಯದ ಸಮಸ್ಯೆ. ಆದ್ದರಿಂದ ಇಶಾನ್ ಕಿಶನ್ ಗೆ ಮತ್ತೊಂದು ಅವಕಾಶ ನೀಡಿದರೆ ಸರಿಹೋಗುವುದಿಲ್ಲ ಎಂಬುದು ಕೆಲವು ಅಭಿಮಾನಿಗಳ ವಾದ.
ಮುಂಬೈ ಇಂಡಿಯನ್ಸ್ ಮೊದಲ ಪಂದ್ಯ ಸೋತಿದ್ದರು ಸಹ ಮತ್ತೆ ಉತ್ತಮ ಪ್ರದರ್ಶನ ನೀಡುತ್ತಾರೆ ಎಂಬ ನಂಬಿಕೆ ಮುಂಬೈ ತಂಡದ ಅಭಿಮಾನಿಗಳಿಗೆ ಇದೆ. ಈ ಸೋಲು ಮುಂಬೈ ತಂಡದ ಮೇಲೆ ಹೆಚ್ಚು ಪರಿಣಾಮ ಬೀಳುವುದಿಲ್ಲ ಎಂಬುವುದು ಅಭಿಮಾನಿಗಳ ನಂಬಿಕೆ ಮತ್ತು ನೀರಿಕ್ಷೆ. 5 ಬಾರಿ ಚಾಂಪಿಯನ್ಸ್ ಆಗಿರುವ ಮುಂಬೈ ಇಂಡಿಯನ್ಸ್ ಗೆ ಇದು ನಿರಾಶಾದಾಯಕ ಆರಂಭವಾಗಿದೆ, ಕಳೆದ ವರ್ಷ ಐಪಿಎಲ್ ನಲ್ಲಿ ಕೊನೆಯ ಸ್ಥಾನದಲ್ಲಿ ತಮ್ಮ ಆಟ ಮುಗಿಸಿತ್ತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು VS ಮುಂಬೈ ಇಂಡಿಯನ್ಸ್ ನಡೆದ ಪಂದ್ಯ ದಲ್ಲಿ 172 ರನ್ಸ್ ಗಳ ಬೆನ್ನಟ್ಟಿದ ಬೆಂಗಳೂರು ತಂಡ, ನಾಯಕ ಫಾಫ್ ಡುಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿಯ ಅದ್ಬುತ ಬ್ಯಾಟಿಂಗ್ ಪ್ರದರ್ಶನದಿಂದ ಕೇವಲ 16.2 ಓವರ್ಗಳಲ್ಲಿ ಗುರಿ ತಲುಪಿತು ಮತ್ತು ಭರ್ಜರಿ 8 ವಿಕೆಟ್ ಗಳ ಗೆಲುವು ಸಾಧಿಸಿತು. ಫಾಫ್ ಡುಪ್ಲೆಸಿಸ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Leave a Comment